ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!

Published : Dec 05, 2025, 01:50 PM IST

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ರಾಯಲ್ ಮೆನರ್ ಅಪಾರ್ಟ್‌ಮೆಂಟ್‌ನಲ್ಲಿ, ಓರ್ವ ವ್ಯಕ್ತಿ 16 ಕುಟುಂಬಗಳಿಗೆ ಮಾಟ-ಮಂತ್ರದ ಭಯ ಹುಟ್ಟಿಸಿ, ದೈಹಿಕ ಕಿರುಕುಳ ನೀಡುತ್ತಿದ್ದಾನೆ. ಈತನಿಂದ ನಿವಾಸಿಗಳು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.

PREV
17
ಮನೆಗೆ ಮಾಟ ಮಂತ್ರ ಮಾಡಿಸುವ ರೌಡಿ

ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಒಂದರ ನಿವಾಸಿಗಳಿಗೆ ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಓರ್ವ ಖಾಸಗಿ ವ್ಯಕ್ತಿಯಿಂದ ಮಾಟ-ಮಂತ್ರದ ಭೀತಿ ಹಾಗೂ ದೈಹಿಕ ಕಿರುಕುಳದ ನಿರಂತರ ಕಾಟ ಎದುರಾಗಿದೆ.

27
ರಾಯಲ್ ಮೆನರ್ ಅಪಾರ್ಟ್‌ಮೆಂಟ್‌

ಈ ವ್ಯಕ್ತಿಯ ರೌಡಿಸಂಗೆ ಹೆದರಿ 16 ಫ್ಲ್ಯಾಟ್‌ಗಳ ನಿವಾಸಿಗಳು ಮನೆಯಿಂದ ಹೊರಬರಲು ಕೂಡ ಭಯಪಡುತ್ತಿದ್ದಾರೆ. ಈ ಆಘಾತಕಾರಿ ಘಟನೆ ಬಿಟಿಎಂ ಲೇಔಟ್ ಫಸ್ಟ್ ಸ್ಟೇಜ್‌ನಲ್ಲಿರುವ ರಾಯಲ್ ಮೆನರ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಕಳೆದ ಜನವರಿ ತಿಂಗಳಿಂದ ಇಲ್ಲಿನ ನಿವಾಸಿಗಳು ನಿರಂತರವಾಗಿ ಈ ವ್ಯಕ್ತಿಯಿಂದ ಟಾರ್ಚರ್ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.

37
ಮನೆ ಬಾಗಿಲಿಗೆ ಮಾಟ-ಮಂತ್ರದ ವಸ್ತು

ಅಪಾರ್ಟ್‌ಮೆಂಟ್‌ನ 16 ಫ್ಲ್ಯಾಟ್‌ಗಳಲ್ಲಿ ಒಂದು ಫ್ಲ್ಯಾಟ್‌ನಲ್ಲಿ ವಾಸವಾಗಿರುವ ಈ ಖಾಸಗಿ ವ್ಯಕ್ತಿ, ಇಡೀ ಅಪಾರ್ಟ್‌ಮೆಂಟ್ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾನೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಆತಂಕಕಾರಿ ವಿಷಯವೆಂದರೆ, ಆತ ನಿವಾಸಿಗಳ ಮನೆ ಬಾಗಿಲುಗಳಿಗೆ ಆಗಾಗ್ಗೆ ಮಾಟ-ಮಂತ್ರ ಮಾಡಿಸಿರುವಂತಹ ವಸ್ತುಗಳನ್ನು ಕಟ್ಟಿ ಹೋಗುತ್ತಿದ್ದಾನೆ.

47
ಅಪಾರ್ಟ್‌ಮೆಂಟ್ ಖಾಲಿ ಮಾಡಲು ಒತ್ತಾಯ

ಇದರಿಂದಾಗಿ ಅಪಾರ್ಟ್‌ಮೆಂಟ್ ನಿವಾಸಿಗಳ ನೆಮ್ಮದಿ ಸಂಪೂರ್ಣವಾಗಿ ಹಾಳಾಗಿದೆ. ಈ ಮಾಟ-ಮಂತ್ರದ ಭಯದ ಜೊತೆಗೆ, ಈ ವ್ಯಕ್ತಿ ಅಪಾರ್ಟ್‌ಮೆಂಟ್‌ನ ಇತರ ನಿವಾಸಿಗಳಿಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದು, ‘ತಕ್ಷಣ ಫ್ಲ್ಯಾಟ್‌ಗಳನ್ನು ಖಾಲಿ ಮಾಡಿ ಹೋಗಿ'ಎಂದು ಒತ್ತಾಯಿಸುತ್ತಿದ್ದಾನೆ ಎನ್ನಲಾಗಿದೆ. ಈ ಬೆದರಿಕೆ ಮತ್ತು ಕಿರುಕುಳದಿಂದ ಬೇಸತ್ತ ಕುಟುಂಬಗಳು ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿವೆ.

57
ಪ್ರಶ್ನಿಸಿದರೆ ರೌಡಿಸಂ, ಮನೆಗೆ ನುಗ್ಗಿ ದಾಂಧಲೆ

ಯಾವುದೇ ನಿವಾಸಿ ಈ ವ್ಯಕ್ತಿಯ ಅಕ್ರಮ ಚಟುವಟಿಕೆಗಳು ಅಥವಾ ಕಿರುಕುಳದ ಬಗ್ಗೆ ಪ್ರಶ್ನಿಸಿದರೆ, ಆತ ತಕ್ಷಣ ರೌಡಿಸಂ ಪ್ರದರ್ಶಿಸುತ್ತಾನೆ. ಇತ್ತೀಚೆಗೆ ನಿವಾಸಿಗಳನ್ನು ಪ್ರಶ್ನಿಸಿದಾಗ, ಆತ ನೇರವಾಗಿ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ.

ಅಲ್ಲದೆ, ನಿವಾಸಿಗಳ ವಾಹನಗಳನ್ನು ಕೆಡವಿ ಹಾಕಿ, ಬೈಕ್‌ಗಳನ್ನು ಬೀಳಿಸಿ ತನ್ನ ಅಧಿಕಾರ ಪ್ರದರ್ಶಿಸಿದ್ದಾನೆ ಎಂದು ದೂರಲಾಗಿದೆ. ಈ ವ್ಯಕ್ತಿಯಿಂದಾದ ದಾಂಧಲೆ ಮತ್ತು ಬೆದರಿಕೆಯಿಂದ ಅಪಾರ್ಟ್‌ಮೆಂಟ್‌ನ ಮಹಿಳೆಯೊಬ್ಬರು ಕಣ್ಣೀರು ಹಾಕಿದ ಘಟನೆಯೂ ನಡೆದಿದೆ.

67
ಪೊಲೀಸ್ ಮಹಾನಿರ್ದೇಶಕರಿಗೆ ದೂರು

ಈ ಖಾಸಗಿ ವ್ಯಕ್ತಿಯ ನಿರಂತರ ಟಾರ್ಚರ್ ಮತ್ತು ಮಾಟ-ಮಂತ್ರದ ಕಾಟದಿಂದ ಬೇಸತ್ತ ರಾಯಲ್ ಮೆನರ್ ಅಪಾರ್ಟ್‌ಮೆಂಟ್‌ನ ನಿವಾಸಿಗಳು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಯಾವುದೇ ಪರಿಣಾಮ ಬೀರದ ಕಾರಣ, ಅಂತಿಮವಾಗಿ ಪೊಲೀಸ್ ಮಹಾನಿರ್ದೇಶಕರ (DGP) ಕಚೇರಿಗೆ ದೂರು ನೀಡಿದ್ದಾರೆ.

77
ಮನೆಯಿಂದ ಹೊರಬರಲು ಭಯ

ಈ ವ್ಯಕ್ತಿಯ ರೌಡಿಸಂಗೆ ಹೆದರಿ, ಇಡೀ 16 ಕುಟುಂಬಗಳು ತಮ್ಮ ಅಪಾರ್ಟ್‌ಮೆಂಟ್‌ನಿಂದ ಹೊರ ಬರಲು ಕೂಡ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗಂಭೀರ ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಗಮನಹರಿಸಿ, ನಿವಾಸಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.

Read more Photos on
click me!

Recommended Stories