ಕ್ಯಾಬ್ ಕಂಪೆನಿಗಳ ಮೋಸದ ಜೊತೆಗೆ ಆಟೋ ಮೀಟರ್‌ ನಲ್ಲೂ ಗೋಲ್‌ ಮಾಲ್‌: ಬೇಸತ್ತ ಸವಾರರು!

Published : Jun 20, 2025, 03:51 PM IST

ಬೆಂಗಳೂರಿನಲ್ಲಿ ಆಟೋರಿಕ್ಷಾ ಮೀಟರ್ ಮೋಸದಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅತಿಯಾದ ದರ, ಮೀಟರ್‌ ತಂತ್ರಗಳು, ಮತ್ತು ಅಸಮರ್ಪಕ ನಿಯಂತ್ರಣಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಇದಕ್ಕೆ ಪರಿಹಾರವೇನು?

PREV
18

ಬೆಂಗಳೂರು: "ಅಂಜಲಿ" (ಹೆಸರು ಬದಲಾಯಿಸಲಾಗಿದೆ) ಇತ್ತೀಚೆಗೆ ಜಯನಗರದಲ್ಲಿ ಆಟೋ ಹಿಡಿದಳು. ಚಾಲಕನು ಮೀಟರ್ ಬಳಸಲು ಒಪ್ಪಿಕೊಂಡಾಗ ಆಕೆ ಖುಷಿಪಟ್ಟಳು. ಯಾಕೆಂದರೆ ಆಟೋ ಡ್ರೈವರ್ ಮೀಟರ್‌ ಹಾಕುತ್ತೇನೆ ಎನ್ನುವುದು ಈಗ ಅಪರೂಪ. ಅಂಜಲಿ ತಲುಪಬೇಕಾದ ಸ್ಥಳ BTM ಲೇಔಟ್ ಆಗಿತ್ತು. ಅದು ಜಯನಗರದಿಂದ ಸುಮಾರು 4 ಕಿಲೋಮೀಟರ್ ದೂರವಿತ್ತು. ಸವಾರಿ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ತದನಂತರ ಚಾಲಕ ವಿಚಿತ್ರವಾಗಿ ನಡೆದುಕೊಂಡ, ಟ್ರಾಫಿಕ್ ಕಡಿಮೆಯಿತ್ತು. ಆದರೆ ತಲುಪಬೇಕಾದ ಸ್ಥಳ ತಲುಪಿದಾಗ ಮೀಟರ್ ₹400 ತೋರಿಸಿತು. ಅಂಜಲಿ ಬೆಚ್ಚಿಬಿದ್ದಳು. ಆಘಾತ ಮತ್ತು ಗೊಂದಲಕ್ಕೊಳಗಾದ ಅಂಜಲಿಗೆ ಏನೋ ತಪ್ಪಾಗಿದೆ ಎಂದು ತಡವಾಗಿ ಅರಿವಾಯಿತು. ಇದು ಇವಳೊಬ್ಬಳ ಕಥೆಯಲ್ಲಿ ಬೆಂಗಳೂರಿನಲ್ಲಿ ಪ್ರತೀ ದಿನ ಇಂತಹ ಘಟನೆಗಳು ನಡೆಯುತ್ತಲೇ ಇದೆ. ನಗರದ ಹಲವಾರು ನಿವಾಸಿಗಳು ಆಟೋರಿಕ್ಷಾ ಮೀಟರ್ ಮೋಸದ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.

28

ಇಷ್ಟು ಮಾತ್ರವಲ್ಲ ಬೆಂಗಳೂರಿನಲ್ಲಿ ಸೇವೆ ನೀಡುತ್ತಿರುವ ಆ್ಯಪ್‌  ಆಧಾರಿತ ಸಂಸ್ಥೆಗಳಾದ ಓಲಾ, ಊಬರ್, ರ್ಯಾಪಿಡೋ ಕೂಡ ತನ್ನ ಮಾಮೂಲಿ ಹಣಕ್ಕಿಂತ ಹೆಚ್ಚಿನ ಶುಲ್ಕ ವಿಧಿಸುತ್ತಿದೆ. 2 ಕಿ.ಮೀಟರ್‌ ಗೆ 80 ರೂ ನಿಂದ 100ರೂ ಸಾಮಾನ್ಯವಾಗಿದೆ. ಇನ್ನು ಮಳೆ ಬಂದರೆ ಶುಲ್ಕ ದುಪ್ಪಟ್ಟು ಆಗುತ್ತಿದೆ. ಇದರ ಜೊತೆಗೆ ಆಟೋಗೆ ಕೈ ಹಿಡಿದು ಹತ್ತಿದರೆ ಮೀಟರ್ ಹಾಕೋದಿಲ್ಲ 1 ಕಿಮೀ 50 ರೂ ಕೊಟ್ಟರೆ ಬರುತ್ತೇವೆ ಎಂಬ ಉತ್ತರಗಳು ಕೂಡ ಬರುತ್ತವೆ. ಅಂದರೆ ಬೆಂಗಳೂರಿನಲ್ಲಿ 2 ಕೀಮಿ ಹೋಗಲು ಆಟೋಗಳ ಮಿನಿಮಮ್ ಚಾರ್ಚ್ 30ರೂ ಇದೆ. ಆದರೆ ಆಟೋ ಡೈವರ್‌ ಗಳು ಮಿನಿಮಮ್ ಚಾರ್ಜ್ 40 ರಿಂದ 50 ರೂ ಕೊಡಲೇಬೇಕು ಇಲ್ಲದಿದ್ದರೆ ಮೀಟರ್‌ ಹಾಕೋದಿಲ್ಲ ಎಂದು ಹೇಳುತ್ತಿದ್ದಾರೆ.

38

ಮೀಟರ್ ನಲ್ಲಿ ಮೋಸ ಮಾತ್ರ!

ಹಲವಾರು ಆಟೋಗಳು ಮೀಟರ್ ಇರದೆ ಸಂಚರಿಸುತ್ತಿವೆ. ಮಾತ್ರವಲ್ಲ ಆಟೋ ಹತ್ತಿದ ನಂತರ ಮೀಟರ್ ಮೇಲೆ 20 ರೂ ಕೊಡಿ 50 ರೂ ಕೊಡಿ ಎಂದೂ ಡಿಮ್ಯಾಂಡ್ ಮಾಡುತ್ತಾರೆ. 1 ಕಿ.ಮೀ ದೂರ ಇದೆ ಎಂದರೆ ಆಟೋದವರು ಬರಲು ಒಪ್ಪುವುದೇ ಇಲ್ಲ. ಮಾತ್ರವಲ್ಲ 100 ರೂ ಡಿಮ್ಯಾಂಡ್ ಮಾಡುತ್ತಾರೆ ಎಂದರೆ ನಂಬಲೇಬೇಕು. ಕೆಲವು ಆಟೋಗಳಲ್ಲಿ ಮೀಟರ್ ಇದ್ದರೂ, ನವೀಕೃತ ಮೀಟರ್‌ಗಳು ಹಾಕಿಲ್ಲ. ಹೀಗಾಗಿ ಹಳೆ ಮೀಟರ್‌ ಗಳು ಅಸಾಧಾರಣ ವೇಗದಲ್ಲಿ ಓಡುತ್ತದೆ. ಹೆಚ್ಚು ಬಿಲ್‌ ತೋರಿಸುತ್ತದೆ. ಇದರಿಂದಾಗಿ ಸಣ್ಣದಾದ ಪ್ರಯಾಣಗಳಿಗೂ ಅನಗತ್ಯ ಹೆಚ್ಚುವರಿ ಹಣ ಪಾವತಿಸಲು ಪ್ರಯಾಣಿಕರು ಹಿಂದು ಮುಂದೂ ನೋಡುತ್ತಿದ್ದಾರೆ

48

ಇತ್ತೀಚೆಗೆ ಪ್ರತಿಯೊಬ್ಬ ಪ್ರಯಾಣಿಕಗೂ ಸಾಮಾನ್ಯ ದರಕ್ಕಿಂತ ಎರಡುಪಟ್ಟು ಹೆಚ್ಚು ಹಣ ನೀಡುವ ಅನಿವಾರ್ಯ ಸ್ಥಿತಿ ಎದುರಾಗುತ್ತಿದೆ. ಇದು ನಿರಂತರ ನಡೆಯುತ್ತಿದ್ದು. ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. "ಎಷ್ಟು ದೂರ ಹೋಗಬೇಕು ಅನ್ನೋದಕ್ಕಿಂತ ಎಷ್ಟು ಹಣ ಕೊಡಬೇಕು ಅನ್ನೋದನ್ನೇ ಹೆಚ್ಚು ಯೋಚಿಸಬೇಕಾಗಿದೆ" ಎಂಬದು ಹಲವರ ಅಭಿಪ್ರಾಯ. ಸಾಮಾನ್ಯವಾಗಿ ₹60–₹80 ಗೆ ಹೋಗುವ ಸ್ಥಳಕ್ಕೆ ₹200–₹300 ಕೊಡಬೇಕಾದರೆ, ಸಾರ್ವಜನಿಕರು ಆಟೋ ಸೇವೆ ಬಳಕೆಗೆ ಹಿಂದೇಟು ಹಾಕುತ್ತಾರೆ. ಈ ತೊಂದರೆ ಇಡೀ ಸಾರಿಗೆ ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಹೋಗುವ ಸ್ಥಿತಿಗೆ ಬಂದು ತಲುಪಿದೆ.

58

ವಿಪರ್ಯಾಸವೆಂದರೆ, ವಿಶೇಷವಾಗಿ ಬೈಕ್ ಟ್ಯಾಕ್ಸಿ ಕರ್ನಾಟಕದಲ್ಲಿ ನಿಷೇಧಗೊಂಡ ನಂತರ ಆಟೋ ಚಾಲಕರು ತಮಗೆ ಬೇಕಾದ ರೀತಿಯಲ್ಲಿ ಬೇಕಾಬಿಟ್ಟಿ ದಂಡ ವಿಧಿಸುತ್ತಿದ್ದಾರೆ, ಸಾರಿಗೆ ಇಲಾಖೆಯು ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳತ್ತ ಕಣ್ಣು ಮುಚ್ಚಿಕೊಂಡಿದೆ. ಬೈಕ್‌ಗಳನ್ನು ನಿಷೇಧಗೊಳಿಸುವ ಬದಲು, ಮೀಟರ್‌ನಿಂದ ಕಾರ್ಯನಿರ್ವಹಿಸದ, ಹೆಚ್ಚುವರಿ ಶುಲ್ಕಕ್ಕಾಗಿ ಮತ್ತು ಓಡಿಸಲು ನಿರಾಕರಿಸಿದ್ದಕ್ಕಾಗಿ ಪ್ರಯಾಣಿಕರನ್ನು ಸುಲಿಗೆ ಮಾಡುವ ಆಟೋರಿಕ್ಷಾಗಳ ಮೇಲೆ ಸಾರಿಗೆ ಇಲಾಖೆ ಸಿಬ್ಬಂದಿ ಏಕೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

68

ಇದಕ್ಕೆ ಪರಿಹಾರವೇನು?

  • ಪ್ರಾಮಾಣಿಕ ಮೀಟರ್ ನಿರ್ವಹಣೆಗೆ ಕಟ್ಟುನಿಟ್ಟಾದ ನಿಯಂತ್ರಣ ಅಗತ್ಯ.
  • ಆಟೋ ಫೇರ್‌ಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಬೇಕು.
  • ನಿಯಮ ಉಲ್ಲಂಘನೆ ಮಾಡಿದ ಚಾಲಕರ ವಿರುದ್ಧ ತಕ್ಷಣದ ಕ್ರಮ, ದಂಡ, ಲೈಸೆನ್ಸ್ ಸ್ಥಗಿತ ಮಾಡಬೇಕು
  • ಜನಸಹಭಾಗಿತ್ವದ ದೂರವಾಣಿ ಲೈನ್ ಅಥವಾ ಆಪ್ ಮೂಲಕ ಸಾರ್ವಜನಿಕರಿಂದ ನೇರ ದೂರು ಸ್ವೀಕರಿಸಬಹುದಾಗಿದೆ.

ಬೆಂಗಳೂರು ಎಂಬ ಅಭಿವೃದ್ಧಿ ಪಟ್ಟಣದಲ್ಲಿ, ಆಟೋರಿಕ್ಷಾ ಮೀಟರ್ ಸಮಸ್ಯೆ ಎಂದಿಗೂ ಮುಕ್ತಿಯೇ ಇಲ್ಲದ ದ್ವಂದ್ವವಾಗುತ್ತಿದೆ. ಸಮರ್ಪಕ ಕ್ರಮವಿಲ್ಲದಿದ್ದರೆ, ಸಾರ್ವಜನಿಕರ ನಂಬಿಕೆ ಕಳೆದುಹೋಗುವುದು ಮಾತ್ರವಲ್ಲ, ನಗರ ಸಾರಿಗೆ ವ್ಯವಸ್ಥೆಯ ಮೆರೆಗೂ ಕಳೆದುಹೋಗುತ್ತದೆ

78

ಇಂದಿರಾನಗರದಿಂದ ಎಂಜಿ ರೋಡ್‌ಗೆ ಪ್ರಯಾಣಿಸಲು ನನಗೆ 180 ರೂ. ಶುಲ್ಕ ವಿಧಿಸಲಾಗುತ್ತಿತ್ತು. ನಾನು ಆಗಾಗ ಇದೇ ಮಾರ್ಗದಲ್ಲಿ ಸಂಚರಿಸುತ್ತೇನೆ ಮತ್ತು ಸಾಮಾನ್ಯವಾಗಿ 80–90 ರೂ. ಮೀಟರ್‌ ತೋರಿಸುತ್ತದೆ. ನಾನು ಚಾಲಕನನ್ನು ಪ್ರಶ್ನಿಸಿದಾಗ, ಅವನು ಮೀಟರ್ ಕಡೆಗೆ ಬೆರಳು ತೋರಿಸಿ. ಹೆಗಲು ಮೇಲೆ ಮಾಡಿ ನೀವು ಅಸಹಾಯಕರಾಗಿದ್ದೀರಿ ಮತ್ತು ಮೋಸ ಹೋಗಿದ್ದೀರಿ ಎಂದು ಭಾವಿಸಿದರೆ ಪ್ರಯೋಜನವಿಲ್ಲ" ಎಂದು ಎಂಜಿ ರಸ್ತೆಯ ವಿದ್ಯಾರ್ಥಿನಿ ಅಕ್ಷರ ಶ್ರೀವಾಸ್ತವ್ ಹೇಳಿದರು.

88

ಇನ್ನು ಜಯನಗರದ ಹಿರಿಯ ವ್ಯಕ್ತಿಯೊಬ್ಬರಾದ ಸುಬ್ರಮಣಿಯಂ ಶಾಸ್ತ್ರಿ ಅವರಿಗೂ ಇದೇ ರೀತಿಯ ಅನುಭವವಾಗಿದೆ. "ನಾನು ಮತ್ತು ನನ್ನ ಹೆಂಡತಿ ಕೇವಲ 3 ಕಿ.ಮೀ ದೂರದಲ್ಲಿರುವ ಹತ್ತಿರದ ಕ್ಲಿನಿಕ್‌ಗೆ ಆಟೋ ಹತ್ತಿದೆವು. ಮೀಟರ್ 210 ರೂ. ತೋರಿಸಿದೆ! ನಾನು ಇದನ್ನು ಪ್ರಶ್ನಿಸಿದ್ದಕ್ಕೆ ಚಾಲಕ ಸಿಟ್ಟಾದ. ನಮ್ಮ ವಯಸ್ಸಿನಲ್ಲಿ, ವಾದ ಮಾಡುವುದು ಸುಲಭವಲ್ಲ. ನಾವು ಈಗ ತೀರಾ ಅಗತ್ಯವಿಲ್ಲದಿದ್ದರೆ ಮಾತ್ರ ಆಟೋಗಳನ್ನು ಹಿಡಿಯುತ್ತೇವೆ. ಅಧಿಕಾರಿಗಳು ಈ ಬಗ್ಗೆ ಮಧ್ಯಪ್ರವೇಶಿಸಬೇಕು. ಇದು ದೈನಂದಿನ ಹೋರಾಟವಾಗುತ್ತಿದೆ." ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದಯವಿಟ್ಟು ಕನಿಷ್ಠ ಮೀಟರ್ ಬಳಸುವ ಒಬ್ಬ ಆಟೋ ಚಾಲಕನನ್ನು ನಮಗೆ ಪರಿಚಯಿಸಿ. ಇಂದು ಆನಂದರಾವ್ ವೃತ್ತದಿಂದ ಜೆಪಿ ನಗರ 1 ನೇ ಹಂತಕ್ಕೆ ಹೋಗಲು ನನ್ನಿಂದ 400 ರೂ. ಕೇಳಲಾಯಿತು ಎಂದು ಭವೇಶ್ ಎಂ ವ್ಯಾಸ್ ಎಂಬ ವ್ಯಕ್ತಿ ಪೋಸ್ಟ್ ಹಾಕಿಕೊಂಡಿದ್ದಾರೆ.

Read more Photos on
click me!

Recommended Stories