ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಆರು ತಿಂಗಳು ವಿಸ್ತರಣೆ: ಪಕ್ಷದ ವರಿಷ್ಠರ ಜತೆ ಚರ್ಚಿಸಿ ಸರ್ಕಾರಕ್ಕೆ ಮನವಿ, ಮೇಯರ್‌

First Published Aug 5, 2020, 10:02 AM IST

ಬೆಂಗಳೂರು(ಆ.05):  ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿಯನ್ನು ಆರು ತಿಂಗಳು ವಿಸ್ತರಣೆ ಮಾಡುವ ಕುರಿತು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಬಿಬಿಎಂಪಿ ಮೇಯರ್‌ ಎಂ.ಗೌತಮ್‌ ಕುಮಾರ್‌ ಹೇಳಿದ್ದಾರೆ. 

ಸೆ.10ಕ್ಕೆ ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಲಿದ್ದು, ಆರು ತಿಂಗಳು ಅಧಿಕಾರಾವಧಿ ವಿಸ್ತರಣೆಗೆ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳಲು ಪಾಲಿಕೆ ಸದಸ್ಯರು ಮನವಿ ಮಾಡಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಸದಸ್ಯರ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ಪಾಲಿಕೆ ಸದಸ್ಯರ ಅವಶ್ಯಕತೆಯೂ ಇದೆ. ಈಗಾಗಲೇ ಮುಂಬೈ ಪಾಲಿಕೆ ಸದಸ್ಯರ ಅಧಿಕಾರ ಅವಧಿ ವಿಸ್ತರಣೆ ಮಾಡಲಾಗಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಅಂತಿಮವಾಗಿ ಸರ್ಕಾರದ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ ಎಂ.ಗೌತಮ್‌ ಕುಮಾರ್‌
undefined
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಲಯ ಕಚೇರಿಯಲ್ಲಿ ಆಯಾ ವಲಯದ ವ್ಯಾಪ್ತಿಯ ವಾರ್ಡ್‌ ಸದಸ್ಯರು ವಿಡಿಯೋ ಸಂವಾದದ ಮೂಲಕ ಸಭೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಪಾಲಿಕೆಯ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗಿಯಾದವರಿಗೆ ಚರ್ಚೆ ಮಾಡಲು ಹೆಚ್ಚು ಅವಕಾಶ ಲಭಿಸಿತು. ಆದರೆ ವಲಯ ಕಚೇರಿಯಲ್ಲಿದ್ದ ಸದಸ್ಯರಿಗೆ ಚರ್ಚಿಸಲು ಹೆಚ್ಚಿನ ಅವಕಾಶ ದೊರೆಯದೇ ಇರುವುದಕ್ಕೆ ಮಾಜಿ ಮೇಯರ್‌ ಬಿ.ಎಸ್‌. ಸತ್ಯನಾರಾಯಣ್‌, ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್‌ನ ಸದಸ್ಯೆ ಪದ್ಮಾ ಧನರಾಜ್‌ ಅಸಮಾಧಾನ ವ್ಯಕ್ತಪಡಿಸಿದರು.
undefined
12 ವರ್ಷಕ್ಕಿಂತ ಮೊದಲೇ ಬಿಡಿಎ ಆಸ್ತಿಯಲ್ಲಿ ಅನಧಿಕೃತ ಒತ್ತುವರಿ ಮಾಡಿಕೊಂಡು ಕಟ್ಟಡ ಅಥವಾ ಮನೆ ನಿರ್ಮಿಸಿದ್ದರೆ ಕೆಲವು ನಿಯಮಗಳ ಅನ್ವಯ ನಿವೇಶನ ಸಕ್ರಮ ಮಾಡಲಾಗುತ್ತಿದೆ. ಆದರೆ, ಅಲ್ಲಿ ನಿರ್ಮಿಸಲಾದ ಮನೆ ಅಥವಾ ಕಟ್ಟಡಕ್ಕೆ ಬಿಬಿಎಂಪಿ ಯಾವುದೇ ಅನುಮತಿ ಪಡೆಯದ ಕಾರಣ ಅದನ್ನೂ ಅಧಿಕೃತ ಕಟ್ಟಡ ಎಂದು ಪರಿಗಣಿಸಲು ಸಾಧ್ಯವಿಲ್ಲ. ಒಂದು ವೇಳೆ ಬಿಬಿಎಂಪಿ ಅಕ್ರಮ ಸಕ್ರಮ ಆದೇಶ ಜಾರಿಯಾದರೆ, ಮಾತ್ರ ಅದರಡಿ ಸಕ್ರಮ ಮಾಡಿಕೊಳ್ಳಲು ಅವಕಾಶವಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.
undefined
ನಗರದಲ್ಲಿ ಖಾಸಗಿ ಆಸ್ಪತ್ರೆಗಳು ಅಧಿಕ ಶುಲ್ಕ ವಿಧಿಸುತ್ತಿರುವ ವಿಚಾರವಾಗಿ ಮಾಜಿ ಮೇಯರ್‌ ಸಂಪತ್‌ರಾಜ್‌ ಹಾಗೂ ಸಂಕೇನಹಳ್ಳಿ ವಾರ್ಡ್‌ ಪಾಲಿಕೆ ಸದಸ್ಯ (ಬಿಜೆಪಿ) ರಮೇಶ್‌ ನಡುವೆ ಏಕವಚನದಲ್ಲಿ ವಾಗ್ವಾದವಾಯಿತು. ಸಂಪತ್‌ ರಾಜ್‌ ಕೆಲವು ಖಾಸಗಿ ಆಸ್ಪತ್ರೆಗಳು ಜನರ ವಸೂಲಿಗೆ ಇಳಿದಿವೆ. 300 ರು. ಪಿಪಿಇ ಕಿಟ್‌ಗೆ 15 ಸಾವಿರ ರು. ಶುಲ್ಕ ವಿಧಿಸುತ್ತಿವೆ. ಈ ಸಂಬಂಧ ಸರ್ಕಾರ ಹಾಗೂ ಪಾಲಿಕೆ ಮಧ್ಯ ಪ್ರವೇಶಿಸಬೇಕು ಎಂದು ಹೇಳಿದರು.
undefined
ಈ ವೇಳೆ ಮಧ್ಯ ಪ್ರವೇಶಿಸಿದ ರಮೇಶ್‌, ನಾವು ಮಧ್ಯ ಪ್ರವೇಶಿಸುವುದೇಕೆ ಸರ್ಕಾರ ಮತ್ತು ಪಾಲಿಕೆ ನಿಯಮ ರೂಪಿಸಬೇಕಲ್ಲವೇ ಎಂದರು. ಇದಕ್ಕೆ ಸಂಪತ್‌ರಾಜ್‌, ನೀನು ಯಾರು ನನಗೆ ಹೇಳುವುದಕ್ಕೆ ಕುಳಿತುಕೊ ಎಂದು ಏಕವಚನದಲ್ಲಿ ರಮೇಶ್‌ ಅವರಿಗೆ ಗದರಿದರು. ಆಗ ಮೇಯರ್‌ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
undefined
ಸಭೆಯ ಪ್ರಮುಖ ನಿರ್ಣಯಗಳು: ಮಾಗಡಿ ರಸ್ತೆಯಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಡಾ.ರಾಜ್‌ ಕುಮಾರ್‌ ಹೆಸರು, ಸರ್ಕಲ್‌ ಮಾರಮ್ಮ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆ ನಿರ್ಮಾಣ, ದಿನಾರಪಾಳ್ಯದಲ್ಲಿರುವ ಅಟಲ್‌ಜಿ ಉದ್ಯಾನದಲ್ಲಿ ವಾಜಪೇಯಿ ಅವರ ಪ್ರತಿಮೆ ನಿರ್ಮಾಣ,ಕುಮಾರಸ್ವಾಮಿ ಬಡಾವಣೆಯ ಒಳಾಂಗಣ ಕ್ರೀಡಾಂಗಣಕ್ಕೆ ದಿ. ಅನಂತ ಕುಮಾರ್‌ ಹೆಸರು
undefined
click me!