ಮೊದಲಿಗೆ ಕರಡಿಯನ್ನು ನೋಡಿದ ನಾಯಿಗಳು ಜೋರಾಗಿ ಬೋಗೋಳೊಕೆ ಪ್ರಾರಂಭಿಸಿವೆ. ಇದನ್ನು ಗಮನಿಸಿದ ಜನರು ಕರಡಿಗಳನ್ನು ನೋಡಿ ಗಾಬರಿಯಾಗಿದ್ದಾರೆ. ಜನರೆಲ್ಲ ಸೇರಿ ಕೂಗಾಟ ಮಾಡಿದ ಹಿನ್ನಲೆ ಮೂರು ಕರಡಿಗಳು ದಿಕ್ಕಾಪಾಲಾಗಿವೆ. ಒಂದೊಂದು ದಿಕ್ಕಿಗೆ ಒಂದೊಂದು ಕರಡಿಗಳು ಓಡಿ ಹೋಗಿವೆ. ಒಂದು ಕರಡಿ ಮಾತ್ರ ಗ್ರಾಮದೊಳಗೆ ನುಗ್ಗಿ ಹುಲ್ಲಿನ ಬಣವೆಯ ಬಳಿ ಅವಿತುಕೊಂಡಿದೆ ಎನ್ನಲಾಗ್ತಿದೆ.
ಅರಣ್ಯ ಇಲಾಖೆ ಕರಡಿ ಸೆರೆಗೆ ಅಗಮಿಸಿದ್ದು, ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ. ದರೋಜಿ ಬಳಿ ಕರಡಿ ಧಾಮ ಇರೋ ಹಿನ್ನಲೆ ಅಗಾಗ ಹೊಲ ಗದ್ದೆಗಳ ಬಳಿ ಈ ರೀತಿಯಲ್ಲಿ ಕರಡಿ ಕಾಣಿಸಿಕೊಳ್ಳುವದು ಸಹಜ ಆದರೆ, ಸಾಮಾನ್ಯವಾಗಿ ಗ್ರಾಮಕ್ಕೆ ಬರುವುದಿಲ್ಲ. ಬಂದರೂ ಗ್ರಾಮದ ಸನಿಹದಲ್ಲೇ ರಾತ್ರಿಯ ವೇಳೆ ಓಡಾಡಿ ಹೋಗುತ್ತವೆ. ಅದರೆ ಈ ಬಾರಿ ನೇರವಾಗಿ ಗ್ರಾಮದೊಳಗೆ ಬಂದು ಕೆಲಕಾಲ ಆತಂಕ ಸೃಷ್ಟಿ ಮಾಡಿದೆ.
ಕರಡಿಗಳು ದಿಢೀರನೆ ಗ್ರಾಮಕ್ಕೆ ನುಗ್ಗಿದ್ದರಿಂದ ಗ್ರಾಮಸ್ಥರು ಗಾಬರಿಯಾಗಿದ್ದರು. ಬೆಳಬೆಳಗ್ಗೆ ಯಾರ ಮೇಲೆ ಮೇಲೆ ದಾಳಿ ಮಾಡುತ್ತವೋ ಎಂಬ ಭಯದಲ್ಲಿದ್ದರು. ಕರಡಿ ಗ್ರಾಮಕ್ಕೆ ನುಗ್ಗಿದ ವಿಷಯ ತಿಳಿದು ಮಕ್ಕಳು ಮರಿಗಳು ಮನೆಯಲ್ಲಿ ಅವಿತುಕೊಂಡರು. ಗ್ರಾಮಸ್ಥರು ಸೇರಿ ಕೂಗಾಟ ಮಾಡಿದ್ದರಿಂದ ಕರಡಿಗಳು ದಿಕ್ಕಪಾಲಾಗಿ ಓಡಿ ತಪ್ಪಿಸಿಕೊಂಡಿವೆ. ಘಟನೆ ವಿಡಿಯೋ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.