ರ್ನಾಟಕದಿಂದ ಮಂತ್ರಾಲಯಕ್ಕೆ ಹೋಗುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ 100 ಕೊಠಡಿಗಳ ಅತಿಥಿಗೃಹ ನಿರ್ಮಾಣ ಮಾಡಲು 5 ಕೋಟಿ ರೂ.ಗಳನ್ನು 201ರರಲ್ಲಿ ಮಂಜೂರು ಮಾಡಲಾಗಿರುತ್ತದೆ. ಈ ವೆಚ್ಚದಲ್ಲಿ 2019ರಲ್ಲಿ 100 ಕೊಠಡಿಗಳ ಕರ್ನಾಟಕ ಭವನ ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿರುತ್ತದೆ.
ಆದರೆ, ಈ ಭವನದ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿಯ ಬಗ್ಗೆ ಗುಣಮಟ್ಟ ಪರೀಕ್ಷೆ ಮಾಡಿ, ಕಳಪೆ ಕಾಮಗಾರಿಗೆ ಕಾರಣವಾದವರ ಮೇಲೆ ಕ್ರಮ ಕೈಗೊಳ್ಳಲು ಪ್ರಕರಣದ ತನಿಖೆಯನ್ನು ಮಾಡಬೇಕಿದೆ.
ಈ ರೀತಿಯ ಕಳಪೆ ಕಾಮಾಗಾರಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವಾಗಿರುವುದಲ್ಲದೇ, ಸಾರ್ವಜನಿಕ ಹಣವನ್ನು ಪೋಲು ಮಾಡಿರುವುದು ಹಾಗೂ ಭಕ್ತಾಧಿಗಳಿಗೆ ಅನಾನೂಕೂಲವಾಗಲು ಕಾರಣವಾಗಿರುತ್ತದೆ.
ಕರ್ನಾಟಕ ಭವನ ಕಾಮಗಾರಿಯು ಅತ್ಯಂತ ಕಳಪೆ ಮಟ್ಟದ್ದಾಗಿರುವುದಾಗಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿರುತ್ತದೆ. ಹಾಗೂ ಈ ಬಗ್ಗೆ ಜನಸಾಮಾನ್ಯರು ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿರುತ್ತಾರೆ.
ಕಳಪೆ ಕಾಮಗಾರಿಗೆ ಏನೆಲ್ಲಾ ಸಾಕ್ಷಿಗಳಿವೆ:
ಕರ್ನಾಟಕ ಭವನದ ಗೋಡೆಗಳು ಬಿರುಕು ಮೂಡಿವೆ.
ಕೊಠಡಿಗಳಲ್ಲಿ ನೀರು ಸೋರಿಕೆ ಆಗುತ್ತಿದೆ.
ವಿದ್ಯುತ್ ಸಂಪರ್ಕದ ಅವ್ಯವಸ್ಥೆ ಆಗಿದೆ.
ಕಳಪೆ ಕಾಮಗಾರಿಗೆ ಏನೆಲ್ಲಾ ಸಾಕ್ಷಿಗಳಿವೆ:
ಚರಂಡಿಗೆ ಸಂಪರ್ಕ ಕಲ್ಪಿಸಿದ ಪೈಪ್‌ಗಳ ಸೋರಿಕೆ ಆಗುತ್ತಿವೆ.
ಕಟ್ಟಡಕ್ಕೆ ಅಳವಡಿಸಿದ ಟೈಲ್ಸ್ ಗಳು ಹಾನಿಗೊಳಗಾಗಿವೆ.
ಬಿಸಿ ನೀರಿಗೆ ಅಳವಡಿಸಿದ ತುಂಬಾ ಗೀಸರ್‌ಗಳು ಕಾರ್ಯನಿರ್ವಹಿಸುತ್ತಿರುವುದಿಲ್ಲ.
ಪ್ರತಿಯೊಂದು ಕೊಠಡಿಗಳ ಡೋರ್, ಕಿಟಕಿ, ಪೀಟೋಪಕರಣಗಳು ಕಳಪೆ ಗುಣಮಟ್ಟದ್ದಾಗಿವೆ.
ಈ ಮೇಲ್ಕಂಡ ಹಿನ್ನೆಲೆಯಲ್ಲಿ, ಸದರಿ ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಹಾಗೂ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲು ಪ್ರಕರಣವನ್ನು ಲೋಕಾಯುಕ್ತರವರಿಗೆ ವಹಿಸಲು ಆದೇಶಿಸಿದೆ ಎಂದು ಕಂದಾಯ ಇಲಾಖೆ ಮುಜರಾಯಿ ವಿಭಾಗದ ಸರ್ಕಾರದ ಪ್ರಧಾನ ಕಾರ್ಯದರ್ಶಿಗೂ ಪ್ರತೊ ದೊರಕುವಂತೆ ಮಾಡಿದ್ದಾರೆ.