ಕರ್ನಾಟಕದ ಖ್ಯಾತ WEDDING MANSIONನ "ಧ್ರುವ" ಅವರ ಸಾರಥ್ಯದಲ್ಲಿ ರಕ್ಷಿತಾ ಮದುವೆ ಆಮಂತ್ರಣ ಪತ್ರಿಕೆಗಳು ಡಿಸೈನ್ ಮಾಡಲಾಗಿತ್ತು.
ಆರೋಗ್ಯದ ದೃಷ್ಟಿಯಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಕೇಸರಿ, ಏಲಕ್ಕಿ, ಅರಿಶಿಣ-ಕುಂಕುಮ ಹಾಗೂ ಅಕ್ಷತೆ ಇಡಲಾಗಿತ್ತು.
ಫೆ.27ರಂದು ಆರಂಭವಾದ ಶಾಸ್ತ್ರ 9 ದಿನಗಳ ಕಾಲ ಅದ್ಧೂರಿಯಾಗಿ ನಡೆದಿದೆ.
ಮಾರ್ಚ್ 1ರಂದು ಹಳದಿ, ಮೇಹಂದಿ ಹಾಗೂ ಬಳೆ ಶಾಸ್ತ್ರ ನಡೆಯಿತು.
ಮಾರ್ಚ್ 2 ರಂದು ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು.
ರಕ್ಷಿತಾ ಸ್ನೇಹಿತರಿಗೆ ಬೆಂಗಳೂರಿನ ತಾಜ್ ವೆಸ್ಟೆಂಡ್‌ನಲ್ಲಿಯೇ ಮೇಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬಾಲಿವುಡ್ ಖ್ಯಾತ ಡಿಸೈನರ್ ಸಾನಿಯಾ ಸರ್ದಾರಿಯಾ ಮದುವೆ ಹೆಣ್ಣಿನ ಬಟ್ಟೆ ಡಿಸೈನ್ ಮಾಡಿದ್ದರು.
ದೀಪಿಕಾ ಪಡುಕೋಣೆ ಪರ್ಸನಲ್ ಮೇಕಪ್ ಆರ್ಟಿಸ್ಟ್ ಸಂದ್ಯಾ ಶೇಖರ್ ಅವರೇ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ಮೇಕಪ್ ಮಾಡುತ್ತಾರೆ.
ಮದುಮಗಳು 9 ದಿನದ ಉಡುಪಿಗೆ ಸುಮಾರು ಒಂದುವರೆ ಕೋಟಿ ರೂ. ವ್ಯಯಿಸಲಾಗಿದೆ.
ಮದುವೆಗೆ ಬೇಕಾದ ಬಂಗಾರ ಮತ್ತು ಬಟ್ಟೆ ಸೇರಿ ಇನ್ನಿತರೆ ವಸ್ತುಗಳು ಬೆಂಗಳೂರು, ದೆಹಲಿ ಮತ್ತು ಹೈದ್ರಾಬಾದ್‌ನಲ್ಲಿ ಖರೀದಿಸಲಾಗಿದೆ.