3 ಮದುವೆ, ಹೆಂಡತಿ ಕೂಡಾ ರೆಸ್ಲರ್! ಅಂಡರ್‌ಟೇಕರ್ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿಯಿಲ್ಲ

Published : Sep 18, 2025, 03:51 PM IST

WWE ತಾರಾ ರೆಸ್ಲರ್ ಅಂಡರ್‌ಟೇಕರ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಪುಟ್ಟ ಮಕ್ಕಳಿಂದ ಹಿಡಿದು, ಹಣ್ಣು ಹಣ್ಣು ಮುದುಕವರೆಗೂ ಅಂಡರ್‌ಟೇಕರ್‌ಗೆ ಫ್ಯಾನ್ಸ್‌ ಇದ್ದಾರೆ. ಬನ್ನಿ ನಾವಿಂದು ಅಂಡರ್‌ಟೇಕರ್ ಬಗ್ಗೆ ನಿಮಗ್ಯಾರಿಗೂ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಡುತ್ತಿದ್ದೇವೆ ನೋಡಿ. 

PREV
18
ಸುದ್ದಿಯಲ್ಲಿ ಅಂಡರ್‌ಟೇಕರ್

WWE ರೆಸ್ಲರ್ ಅಂಡರ್‌ಟೇಕರ್ ಇತ್ತೀಚಿಗಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಮುಂಬರುವ ಬಿಗ್‌ಬಾಸ್‌ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವಂತಹ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

28
ಬಿಗ್‌ ಬಾಸ್‌ಗೆ ಬರ್ತಾರಾ ಅಂಡರ್‌ಟೇಕರ್

ಆದರೆ ಬಿಗ್ ಬಾಸ್ ಆಯೋಜಕರಿಂದ ಈ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇನ್ನೂ ಅಂಡರ್‌ಟೇಕರ್ ಕೂಡಾ ಈ ಬಗ್ಗೆ ತುಟಿಬಿಚ್ಚಿಲ್ಲ.

38
ಭಾರತದಲ್ಲೂ ಅಂಡರ್‌ಟೇಕರ್‌ಗೆ ಅಪಾರ ಫ್ಯಾನ್ಸ್

ಇದೆಲ್ಲದರ ನಡುವೆ ಭಾರತೀಯ WWE ಫ್ಯಾನ್ಸ್, ಅಂಡರ್‌ಟೇಕರ್ ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಅಂದಹಾಗೆ ಭಾರತದಲ್ಲಿ ಅಂಡರ್‌ಟೇಕರ್‌ಗೆ ಅಪಾರ ಅಭಿಮಾನಿಗಳಿದ್ದಾರೆ.

48
2020ರಲ್ಲಿ ಕೊನೆಯ ಬಾರಿಗೆ WWE ಮ್ಯಾಚ್

ಡೆಡ್‌ಮ್ಯಾನ್ ಖ್ಯಾತಿಯ ಅಂಡರ್‌ಟೇಕರ್ ಅವರಿಗೆ ಈಗ 60 ವರ್ಷ. ಅವರು 2020ರಲ್ಲಿ ತಮ್ಮ ವೃತ್ತಿಜೀವನ ಕೊನೆಯ WWE ಮ್ಯಾಚ್ ಆಡಿದ್ದರು.

58
ಅಂಡರ್‌ಟೇಕರ್ ಲವ್‌ಸ್ಟೋರಿ

ಇನ್ನು ಅಂಡರ್‌ಟೇಕರ್ ಮೂರು ಮದುವೆಯಾಗಿದ್ದಾರೆ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಈ ಪೈಕಿ ಹಾಲಿ ಪತ್ನಿ ಮಿಶೆಲ್ ಮೆಕ್‌ಕೂಲ್ ಅವರ ಜತೆಗಿನ ಲವ್‌ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಯಾಕೆಂದರೆ ಅಂಡರ್‌ಟೇಕರ್‌ಗಿಂತ ಆಕೆ 15 ವರ್ಷ ಚಿಕ್ಕವರು.

68
2000ನೇ ಇಸವಿಯಲ್ಲಿ ಭೇಟಿ, 2020ರಲ್ಲಿ ಮದುವೆ

WWE ಸ್ಪರ್ಧೆಯ ಸಂದರ್ಭದಲ್ಲಿ 2000ನೇ ಇಸವಿಯಲ್ಲಿ ಇವರಿಬ್ಬರ ಮೊದಲ ಭೇಟಿಯಾಯಿತು. ಇದಾದ ಬಳಿಕ ಪದೇ ಪದೇ ಭೇಟಿಯಿಂದಾಗಿ ಇವರ ಸ್ನೇಹ ಪ್ರೀತಿಗೆ ತಿರುಗಿ, 2010ರಲ್ಲಿ ಇಬ್ಬರೂ ಮದುವೆಯಾದರು.

78
ಮಿಶೆಲ್ ಕೂಡಾ ಪಾಪ್ಯುಲರ್

ಅಂಡರ್‌ಟೇಕರ್ ಹಾಲಿ ಪತ್ನಿ ಮಿಶೆಲ್ ಕೂಡಾ WWE ರೆಸ್ಲರ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟಾ ಪಾಪ್ಯುಲರ್ ಆಗಿದ್ದಾರೆ.

88
ಮೊದಲ ಎರಡು ಮದುವೆ

ಮಿಶೆಲ್‌ ಮದುವೆಯಾಗುವ ಮೊದಲು ಅಂಡರ್‌ಟೇಕರ್ ಇಬ್ಬರು ಪತ್ನಿಯರನ್ನು ಮದುವೆಯಾಗಿ ಬಳಿಕ ಡಿವೋರ್ಸ್ ಮಾಡಿಕೊಂಡಿದ್ದರು.

Read more Photos on
click me!

Recommended Stories