ಡೆಬ್ಯೂ ಜೋಶ್ ನಲ್ಲಿ ಎಡವಿದ್ರೂ ಮತ್ತೆರಡು ರೆಕಾರ್ಡ್ ಮುರಿದ ವೈಭವ್ ಸೂರ್ಯವಂಶಿ

Published : Jul 04, 2026, 09:00 PM IST

Vaibhav sooryavanshi broke records : ವೈಭವ್ ಸೂರ್ಯವಂಶಿ ಮೊದಲ ಪಂದ್ಯದಲ್ಲಿ ಪ್ಲಾಪ್ ಆದ್ರೂ ದಾಖಲೆ ಬರೆಯೋದ್ರಲ್ಲಿ ಹಿಂದೆ ಬಿದ್ದಿಲ್ಲ. ಆರಂಭದಲ್ಲಿಯೇ ಎರಡು ಸಿಕ್ಸರ್ ಸಿಡಿಸಿದ ಯುವ ಆಟಗಾರನ ಹೆಸರಿನಲ್ಲಿ ಮತ್ತೆರಡು ದಾಖಲೆ ಸೃಷ್ಟಿಯಾಗಿದೆ.

PREV
14
ಚೊಚ್ಚಲ ಪಂದ್ಯ

ವೈಭವ್ ಸೂರ್ಯವಂಶಿ, ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡ್ತಿದ್ದಂತೆ ಅಭಿಮಾನಿಗಳ ಉತ್ಸಾಹ ಎಲ್ಲೆ ಮೀರಿತ್ತು. ವೈಭವ್ ಆಟ ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ಕುಳಿತಿದ್ರು. ಆರಂಭದಲ್ಲಿ ಆತ್ಮವಿಶ್ವಾಸದ ಆಟ ಪ್ರದರ್ಶನ ಮಾಡಿದೆ ವೈಭವ್ ಸೂರ್ಯವಂಶಿ ಎರಡು ಸಿಕ್ಸರ್ ಸಿಡಿಸಿ ಭರವಸೆ ಹೆಚ್ಚಿಸಿದರು. ಆದ್ರೆ ಅವರು ಬಹುಕಾಲ ಮೈದಾನದಲ್ಲಿ ನಿಲ್ಲಲಿಲ್ಲ. 10 ಎಸೆತಗಳಲ್ಲಿ 14 ರನ್ ಗಳಿಸಿ ಪೆವಿಲಿಯನ್ ಗೆ ವಾಪಸ್ ಆದ್ರು.

24
ಸಿಕ್ಸರ್ ಸಿಡಿಸಿ ದಾಖಲೆ

ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ T20 ಪಂದ್ಯವಾಡಲು ಮೈದಾನಕ್ಕಿಳಿಯುತ್ತಿದ್ದಂತೆ ವೈಭವ್ ದಾಖಲೆ ಬರೆದಿದ್ದರು. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಆಟಗಾರ ಎಂಬ ಹೆಗ್ಗಳಿಕೆ ಗಳಿಸಿದ್ರು. ಇದು ಮಾತ್ರವಲ್ಲ ಸೂರ್ಯವಂಶಿ ಹೆಸರಿನಲ್ಲಿ ಇನ್ನೆರಡು ದಾಖಲೆ ನಿರ್ಮಾಣವಾಗಿದೆ. 15 ವರ್ಷದ ಎಡಗೈ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ, ಆರಂಭ ನಿರ್ಭೀತವಾಗಿತ್ತು. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಜೋಫ್ರಾ ಆರ್ಚರ್ ಅವರನ್ನು ಎದುರಿಸಿದ ವೈಭವ್, ಪ್ರಬಲ ಸಿಕ್ಸರ್ ಬಾರಿಸಿದ್ರು. ಇದು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಿಕ್ಸ್ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅವರು 15 ವರ್ಷ ಮತ್ತು 99 ದಿನಗಳಲ್ಲಿ ಈ ದಾಖಲೆ ಬರೆದಿದ್ದಾರೆ.

34
ಅರ್ಧ ಶತಕದ ಪಾರ್ಟನರ್

ವೈಭವ್ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ ದೊಡ್ಡ ಸ್ಕೋರ್ ಗಳಿಸದಿದ್ದರೂ, ಅರ್ಥ ಶತಕದ ಪಾಲುದಾರರಾಗಿ ದಾಖಲೆ ಬರೆದಿದ್ದಾರೆ. ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಅಭಿಷೇಕ್ ಜೊತೆ ನಿಂತ ವೈಭವ್ ಸೂರ್ಯವಂಶಿ 14 ರನ್ ಗಳಿಸಿದ್ರೆ, ಪಾರ್ಟನರ್ ಶಿಪ್ ನಲ್ಲಿ ಆಟಗಾರರು 29 ಎಸೆತಗಳಲ್ಲಿ 50 ರನ್ ಸೇರಿಸಿದ್ದರು. ಇದು ಕೂಡ ದಾಖಲೆ ಪುಟ ಸೇರಿದೆ.

44
ವೈಭವ್ ಭಾವುಕ

ಚೊಚ್ಚಲ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕ್ಯಾಪ್ ಅವರಿಗೆ ನೀಡಲಾಗಿತ್ತು. ಈ ಸಮಯದಲ್ಲಿ ಭಾವನೆಗಳನ್ನು ನಿಯಂತ್ರಿಸಲು ವೈಭವ್ ಗೆ ಸಾಧ್ಯವಾಗಲಿಲ್ಲ. ಅವರ ಕಣ್ಣುಗಳು ತುಂಬಿದ್ವು. ಅವರ ಭಾವನಾತ್ಮಕ ಕ್ಷಣ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ಫೋಟೋ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ತೆರಳುವಾಗ್ಲೂ ವೈಭವ್ ಭಾವುಕರಾಗಿದ್ರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories