ವೈಭವ್ ಸೂರ್ಯವಂಶಿ ಅಲ್ಲ, ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಡೆಬ್ಯೂ ದಾಖಲೆ ಬರೆದ ಪೋರ ಯಾರು?

Published : Jul 04, 2026, 08:02 PM IST

ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ ವೈಭವ್ ಸೂರ್ಯವಂಶಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಭವ್‌ಗಿಂತ ಕಿರಿಯ ವಯಸ್ಸಿನಲ್ಲಿ ಪಂದ್ಯ ಆಡಿ ದಾಖಲೆ ಬರೆದ ಪೋರ ಯಾರು?

PREV
16
ಸಚಿನ್ ದಾಖಲೆ ಮುರಿದ ವೈಭವ್

ವೈಭವ್ ಸೂರ್ಯವಂಶಿ ಹೊಸ ದಾಖಲೆ ಬರೆದಿದ್ದಾರೆ. ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಅನ್ನೋ ದಾಖಲೆ ಬರೆದಿದ್ದಾರೆ. ವೈಭವ್ ಸೂರ್ಯವಂಶಿ 15 ವರ್ಷ 99 ದಿನಕ್ಕೆ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ 16 ವರ್ಷ 205 ದಿನಕ್ಕೆ ಟೀಂ ಇಂಡಿಯಾ ಪಾದಾರ್ಪಣೆ ಮಾಡಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಭವ್‌ಗಿಂತ ಕಿರಿಯ ವಯಸ್ಸಿನ ಕ್ರಿಕೆಟರ್ ಪಾದಾರ್ಪಣೆ ಮಾಡಿ ದಾಖಲೆ ಬರೆದಿದ್ದಾರೆ.

26
14ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಪಂದ್ಯ ಆಡಿದ ಪೋರ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತೀ ಕಿರಿಯರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿಗೆ ಎರಡನೇ ಸ್ಥಾನ. ಪಾಕಿಸ್ತಾನದ ಹಸನ್ ರಾಝಾ ಕೇವಲ 14 ವರ್ಷ 227 ದಿನಕ್ಕೆ ಪಾಕಿಸ್ತಾನ ತಂಡಕ್ಕೆ ಪಾದಾರ್ಪಣೆ ಮಾಡಿ ದಾಖಲೆ ಬರೆದಿದ್ದಾರೆ. 1996ರಲ್ಲಿ ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಹಸನ್ ರಾಝಾ ಡೆಬ್ಯೂ ಮಾಡಿದ್ದರು.

36
ಅಂತಾರಾಷ್ಟ್ರೀಯ ಕ್ರಿಕೆಟ್ ಡೆಬ್ಯೂ ಮಾಡಿದ ಕಿರಿಯರು
  • ಹಸನ್ ರಾಝಾ (ಪಾಕಿಸ್ತಾನ) 1996, 14 ವರ್ಷ 227 ದಿನ
  • ವೈಭವ್ ಸೂರ್ಯವಂಶಿ (ಭಾರತ) 2026), 15 ವರ್ಷ 99 ದಿನ
  • ಮೊಹಮ್ಮದ್ ಶರೀಫ್(ಬಾಂಗ್ಲಾದೇಶ ) 2001, 15 ವರ್ಷ 116 ದಿನ
  • ಮುಷ್ತಾಕ್ ಅಹಮ್ಮದ್ (ಪಾಕಿಸ್ತಾನ) 1959, 15 ವರ್ಷ 124 ದಿನ
  • ಅಖೀಬ್ ಜಾವೇದ್ (ಪಾಕಿಸ್ತಾನ, 1988, 16 ವರ್ಷ 127 ದಿನ
  • ಸಚಿನ್ ತೆಂಡೂಲ್ಕರ್ (ಭಾರತ), 1989, 16 ವರ್ಷ 205 ದಿನ
46
ಡೆಬ್ಯೂ ಕ್ಯಾಪ್ ನೀಡಿದ ತಿಲಕ್ ವರ್ಮಾ

2ನೇ ಟಿ20 ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗ ತಿಲಕ್ ವರ್ಮಾ ವೈಭವ್ ಸೂರ್ಯವಂಶಿಗೆ ಡೆಬ್ಯೂ ಕ್ಯಾಪ್ ನೀಡಿದ್ದರು. ಸಹ ಕ್ರಿಕೆಟಿಗರು ಚಪ್ಪಾಳೆ ಮೂಲಕ ಅಭಿನಂದಿಸಿದರು. ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರು ವೈಭವ್ ಸೂರ್ಯವಂಶಿಗೆ ಉತ್ತಮ ಕರಿಯರ್ ರೂಪಿಸುವಂತೆ ಸಲಹೆ ನೀಡಿದ್ದರು.

56
ಎರಡು ಸಿಕ್ಸರ್

ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ ಸಿಕ್ಸರ್ ಮೂಲಕವೇ ಅಬ್ಬರಿಸಿದ್ದಾರೆ. ರಾಜಸ್ಥಾನ ರಾಯಲ್ಸ್‌ನಲ್ಲಿ ಟೀಂಮೇಟ್ ಆಗಿರುವ ಜೋಫ್ರಾ ಆರ್ಚರ್ ಎಸೆತಕ್ಕೆ ಸಿಕ್ಸರ್ ಸಿಡಿಸಿ ಟೀಂ ಇಂಡಿಯಾ ಪರ ಮಿಂಚಿದ್ದಾರೆ. ವೈಭವ್ 2 ಸಿಕ್ಸರ್ ಸಿಡಿಸಿದರು. ಆದರೆ ಅಷ್ಟೇ ವೇಗದಲ್ಲಿ ವಿಕೆಟ್ ಕೈಚೆಲ್ಲಿದರು.

66
ವೈಭವ್ ಸೂರ್ಯವಂಶಿ ಸ್ಥಾನಕ್ಕಾಗಿ ತೀವ್ರ ಒತ್ತಡ

ಇಂಗ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಬೇಕು ಅನ್ನೋ ಒತ್ತಾಯ ತೀವ್ರಗೊಂಡಿತ್ತು. ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ವಿಶ್ರಾಂತಿ ನೀಡಿದ ಮ್ಯಾನೇಜ್ಮೆಂಟ್ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿತ್ತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories