Ind vs SL: ಶ್ರೀಲಂಕಾ ಸರಣಿಯಿಂದ ಔಟ್‌? ಕನ್ನಡಿಗನಿಗೆ ಸ್ಥಾನ! ಕೊನೆ ಕ್ಷಣದಲ್ಲಿ ಬಿಗ್‌ ಡ್ರಾಮಾ! ಆ ಸ್ಟಾರ್ ಯುವ ಆಟಗಾರನಿಗೆ ಆಗಿದ್ದೇನು?

Published : Aug 04, 2026, 05:27 PM IST

ಆಗಸ್ಟ್ 15 ರಿಂದ ಆರಂಭವಾಗಲಿರುವ ಭಾರತ-ಶ್ರೀಲಂಕಾ ಟೆಸ್ಟ್ ಸರಣಿಗಾಗಿ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಕೊಲಂಬೊಗೆ ತೆರಳಿದೆ. ಆದರೆ, ಫಿಟ್ನೆಸ್ ಸಮಸ್ಯೆಯಿಂದಾಗಿ ಯುವ ಆಟಗಾರ ತಂಡದೊಂದಿಗೆ ಪ್ರಯಾಣಿಸಿಲ್ಲ, ಇದು ಅವರ ಭಾಗವಹಿಸುವಿಕೆಯ ಬಗ್ಗೆ ಅನುಮಾನ ಮೂಡಿಸಿದೆ. ಆ ಸ್ಥಾನ ಕನ್ನಡಿಗನ ದೊರೆಯಲಿದೆ.

PREV
15
ಆ.15ರಿಂದ ಸರಣಿ ಪ್ರಾರಂಭ!

ಭಾರತ ಮತ್ತು ಶ್ರೀಲಂಕಾ ನಡುವಿನ ಬಹುನಿರೀಕ್ಷಿತ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಆರಂಭವಾಗಲಿದ್ದು, ಸರಣಿಯ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಬಿಗ್ ಡ್ರಾಮಾವೊಂದು ನಡೆದಿದೆ. ಸರಣಿಗೂ ಮುನ್ನ ಆಗಸ್ಟ್ 7 ರಿಂದ ನಡೆಯಲಿರುವ ಅಭ್ಯಾಸ ಪಂದ್ಯ ಹಾಗೂ ಪ್ರಮುಖ ಸರಣಿಯಲ್ಲಿ ಭಾಗವಹಿಸಲು ನಾಯಕ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಮಂಗಳವಾರ ಮುಂಬೈನಿಂದ ಕೊಲಂಬೊಗೆ ತೆರಳಿದೆ. ಆದರೆ, ಆಯ್ಕೆ ಮಂಡಳಿ ಪ್ರಕಟಿಸಿದ್ದ 15 ಸದಸ್ಯರ ಸ್ಕ್ವಾಡ್‌ನಲ್ಲಿದ್ದ ಯುವ ಬ್ಯಾಟರ್ ತಂಡದ ಜೊತೆ ಕೊಲಂಬೊಗೆ ಪ್ರಯಾಣಿಸದಿರುವುದು ಕ್ರೀಡಾ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

25
ಶ್ರೀಲಂಕಾ ಪ್ರವಾಸ ಅತ್ಯಂತ ನಿರ್ಣಾಯಕ!

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ ದೃಷ್ಟಿಯಿಂದ ಟೀಮ್ ಇಂಡಿಯಾಗೆ ಈ ಶ್ರೀಲಂಕಾ ಪ್ರವಾಸ ಅತ್ಯಂತ ನಿರ್ಣಾಯಕವಾಗಿದೆ. ಪ್ರಸ್ತುತ ಡಬ್ಲ್ಯೂಟಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಭಾರತ ತಂಡ 5ನೇ ಸ್ಥಾನದಲ್ಲಿದ್ದು, ನೆರೆಯ ಬಾಂಗ್ಲಾದೇಶಕ್ಕಿಂತಲೂ ಹಿನ್ನಡೆಯಲ್ಲಿದೆ. ಹೀಗಾಗಿ ಪಾಯಿಂಟ್ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಿಕೊಂಡು ಫೈನಲ್ ತಲುಪುವ ಆಶಯವನ್ನು ಜೀವಂತವಾಗಿಡಲು ಭಾರತಕ್ಕೆ ಈ ಸರಣಿಯಲ್ಲಿ ಕ್ಲೀನ್ ಸ್ವೀಪ್ ಗೆಲುವು ಅನಿವಾರ್ಯವಾಗಿದೆ.

35
15 ಆಟಗಾರರ ಪಟ್ಟಿಯನ್ನು ಪ್ರಕಟ; ಒಬ್ಬರು ಔಟ್!

ಶ್ರೀಲಂಕಾ ಪ್ರವಾಸಕ್ಕಾಗಿ ಆಯ್ಕೆ ಸಮಿತಿಯು 15 ಆಟಗಾರರ ಪಟ್ಟಿಯನ್ನು ಪ್ರಕಟಿಸಿದಾಗಲೇ ಸಾಯಿ ಸುದರ್ಶನ್ ಮತ್ತು ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರ ಲಭ್ಯತೆಯು ಫಿಟ್‌ನೆಸ್‌ಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿತ್ತು. ವೇಗಿ ಜಸ್ಪ್ರೀತ್ ಬುಮ್ರಾ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ, ಅವರ ಸ್ಥಾನದಲ್ಲಿ ಆಕಿಬ್ ನಬಿಗೆ ಅವಕಾಶ ನೀಡಲಾಯಿತು. ಆದರೆ, ಎನ್‌ಸಿಎನಲ್ಲಿರುವ ಸಾಯಿ ಸುದರ್ಶನ್ ಅವರ ಫಿಟ್‌ನೆಸ್ ಕುರಿತು ಬಿಸಿಸಿಐ ವೈದ್ಯಕೀಯ ತಂಡದಿಂದ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಇದರಿಂದಾಗಿ ಅವರು ತಂಡದೊಂದಿಗೆ ಪ್ರಯಾಣಿಸದೆ ಭಾರತದಲ್ಲೇ ಉಳಿಯುವಂತಾಗಿದ್ದು, ಸರಣಿಯಲ್ಲಿ ಅವರ ಪಾಲ್ಗೊಳ್ಳುವಿಕೆ ಬಗ್ಗೆ ದೊಡ್ಡ ಮಟ್ಟದ ಸಸ್ಪೆನ್ಸ್ ನಿರ್ಮಾಣವಾಗಿದೆ.

45
ಭವಿಷ್ಯದ ಭರವಸೆಗೆ!

ತಾಂತ್ರಿಕವಾಗಿ ಅತ್ಯಂತ ಶಿಸ್ತಿನ ಆಟಗಾರನೆನಿಸಿಕೊಂಡಿರುವ ಸಾಯಿ ಸುದರ್ಶನ್, ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಭವಿಷ್ಯದ ಪ್ರಮುಖ ಭರವಸೆಯಾಗಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 7 ಪಂದ್ಯಗಳನ್ನಾಡಿದ್ದು, 12 ಇನ್ನಿಂಗ್ಸ್‌ಗಳಲ್ಲಿ 31.91 ಸರಾಸರಿಯಲ್ಲಿ 3 ಅರ್ಧಶತಕಗಳು ಸೇರಿದಂತೆ 383 ರನ್ ಗಳಿಸಿದ್ದಾರೆ. ಇದರಲ್ಲಿ 87 ರನ್ ಅವರ ಅತ್ಯಧಿಕ ಸ್ಕೋರ್ ಆಗಿದೆ. ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತ ಪಡೆ ಹೀಗಿದೆ: ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್ ಮತ್ತು ಆಕಿಬ್ ನಬಿ.

55
ಪಡಿಕ್ಕಲ್‌ಗೆ ಸ್ಥಾನ!

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 15 ರಿಂದ 19 ರವರೆಗೆ ಗಾಲೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಗಸ್ಟ್ 23 ರಿಂದ 27 ರವರೆಗೆ ಕೊಲಂಬೊದಲ್ಲಿ ನಡೆಯಲಿದೆ. ಕೊನೆ ಕ್ಷಣದಲ್ಲಿ ಸಾಯಿ ಸುದರ್ಶನ್ ಅಲಭ್ಯರಾದರೆ ಅವರ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಅಥವಾ ಧ್ರುವ ಜುರೆಲ್ ಅವರಿಗೆ ಪ್ಲೇಯಿಂಗ್-11 ನಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories