ರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಹಾಗೂ ಮಾಜಿ ನಾಯಕ ಶೋಯೆಬ್ ಮಲೀಕ್ ವಿಚ್ಛೇದನಕ್ಕೆ ಒಳಪಟ್ಟಿದ್ದಾರೆ ಎನ್ನುವ ಸುದ್ದಿಗಳ ನಡುವೆ ಸೋಮವಾರ ತಮ್ಮ ಪುತ್ರ ಇಝಾನ್ ಮಿರ್ಜಾ ಮಲೀಕ್ ಬರ್ತ್‌ಡೇಯನ್ನು ಜೊತೆಯಾಗಿ ಆಚರಣೆ ಮಾಡಿದ್ದಾರೆ. ಹಾಗಿದ್ದರೂ ಅಭಿಮಾನಿಗಳ ಅನುಮಾನ ಮಾತ್ರ ಬಗೆಹರಿದಿಲ್ಲ.
ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ನಾಯಕ ಶೋಯೆಬ್ ಮಲೀಕ್ ಸಂಸಾರದ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ.
213
ಇವರಿಬ್ಬರ ನಡುವೆ ವಿಚ್ಚೇದನವಾಗಿದ್ದು, ಈಗಾಗಲೇ ಬೇರೆಬೇರೆ ವಾಸ ಮಾಡಲು ಆರಂಭಿಸಿದ್ದಾರೆ ಎಂದೆಲ್ಲಾ ವರದಿಯಾಗಿತ್ತು. ಇದರ ನಡುವೆ ಇವರಿಬ್ಬರೂ ಬಹಳ ದಿನಗಳ ನಳಿಕ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
313
2018ರ ಅಕ್ಟೋಬರ್ 30 ರಂದು ಜನಿಸಿದ್ದ ಪುತ್ರ ಇಝಾನ್ ಮಿರ್ಜಾ ಮಲೀಕ್ ಅವರ ಜನ್ಮದಿನವನ್ನೂ ಇಬ್ಬರೂ ಜೊತೆಯಾಗಿಯೇ ದುಬೈನಲ್ಲಿ ಆಚರಿಸಿದ್ದಾರೆ.
413
ಇದರ ಚಿತ್ರಗಳನ್ನು ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲೀಕ್ ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ಹಾಕಿಕೊಂಡಿದ್ದಾರೆ.
513
ಹೆಚ್ಚಿನವರು ಈ ಚಿತ್ರಗಳನ್ನು ನೋಡಿದ ಬಳಿಕ ಇಬ್ಬರೂ ಜೊತೆಯಾಗಿದ್ದಾರೆ. ವಿಚ್ಛೇದನ ವರದಿಗಳು ಎಲ್ಲವೂ ಗಾಸಿಪ್‌ಗಳು ಎಂದು ವರದಿಯಾಗುತ್ತಿವೆ.
613
ಸಾನಿಯಾ ಹಾಗೂ ಶೋಯೆಬ್ ಪುತ್ರ ಇಝಾನ್ ಮಿರ್ಜಾ ಮಲಿಕ್ಗೆ ಐದು ವರ್ಷ ತುಂಬಿದ್ದು, ಸಾನಿಯಾ ಮತ್ತು ಶೋಯೆಬ್ ಇಬ್ಬರೂ ಜತೆಯಲ್ಲಿ ಜನ್ಮದಿನ ಆಚರಿಸಿದ್ದಾರೆ.
713
ಶೋಯೆಬ್ ಮಲಿಕ್ ಹುಟ್ಟು ಹಬ್ಬದ ಆಚರಣೆಯ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೇಕ್ ಮುಂದೆ ಸಾನಿಯಾ ಕುಟುಂಬ ಖುಷಿಯಾಗಿ ಪೋಸ್ ಕೊಟ್ಟಿರೋದು ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ.
813
ಆದರೆ, ಈ ಚಿತ್ರಗಳಲ್ಲೂ ಅಭಿಮಾನಿಗಳು ಇವರಿಬ್ಬರ ನಡುವೆ ಏನೋ ಸರಿ ಇಲ್ಲ ಎಂದು ಅಂದಾಜು ಮಾಡಿದ್ದಾರೆ. ಅದಕ್ಕೆ ಕಾರಣ ಹಂಚಿಕೊಂಡಿರುವ ಚಿತ್ರಗಳು.
913
ಶೋಯೆಬ್ ಮಲೀಕ್ ಹಂಚಿಕೊಂಡಿರುವ ಕೆಲವೊಂದು ಚಿತ್ರಗಳಲ್ಲಿ ಸಾನಿಯಾ ಮಿರ್ಜಾ ಕಾಣುತ್ತಿದ್ದರೂ. ಯಾವ ಚಿತ್ರದಲ್ಲೂ ಅವರು ಮಗನೊಂದಿಗೆ ಪೋಸ್ ನೀಡಿಲ್ಲ.
1013
ಶೋಯೆಬ್ ಮಲೀಕ್ ಹಾಗೂ ಇಝಾನ್ ಮಲೀಕ್ ಚಿತ್ರಕ್ಕೆ ಪೋಸ್ ಕೊಟ್ಟಿದ್ದರೆ, ಹಿಂದೆ ಸಾನಿಯಾ ಮಿರ್ಜಾ ಇರುವುದು ಕಾಣುತ್ತದೆಯಷ್ಟೇ. ಇಬ್ಬರೊಂದಿಗೂ ಸಾನಿಯಾ ಪೋಸ್ ನೀಡಿಲ್ಲ.
1113
ಇನ್ನು ಸಾನಿಯಾ ಮಿರ್ಜಾ ಹಂಚಿಕೊಂಡಿರುವ ಯಾವ ಚಿತ್ರದಲ್ಲೂ ಶೋಯೆಬ್ ಮಲೀಕ್ ಇಲ್ಲವೇ ಇಲ್ಲ. ಇದನ್ನು ಗಮನಿಸಿದ ಅಭಿಮಾನಿಗಳು ವಿಚ್ಚೇದನ ನಿಜವಿರಬಹುದು ಅಂದಾಜಿಸಿದ್ದಾರೆ.
1213
ಅಲ್ಲದೆ, ಇಝಾನ್ ಮಿರ್ಜಾ ಮಲೀಕ್ ಹಿಂದಿನ ಜನ್ಮದಿನದ ಫೋಟೋಗಳನ್ನು ಹಂಚಿಕೊಂಡಿರುವ ಅಭಿಮಾನಿಗಳು ಇದರಲ್ಲಿ ಇಬ್ಬರೂ ಜೊತೆಯಲ್ಲಿ ಪೋಸ್ ನೀಡಿದ್ದಾರೆ. ಆದರೆ, ಈ ಬಾರಿ ಹೀಗೆ ಜೊತೆಯಾಗಿ ನಿಂತಿಲ್ಲ ಎನ್ನುವುದನ್ನು ಗಮನಿಸಿದ್ದಾರೆ.