ಇಂಗ್ಲೆಂಡ್ ವಿರುದ್ಧ ಗಾಯಗೊಂಡ ಹಾರ್ದಿಕ್ ಪಾಂಡ್ಯ ಬದಲು ಸ್ಫೋಟಕ ಬ್ಯಾಟ್ಸ್‌ಮನ್‌ಗೆ ಸ್ಥಾನ!

Published : Oct 28, 2023, 11:47 PM IST

ಇಂಜುರಿಗೆ ತುತ್ತಾಗಿರುವ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದ ಹೊರಬಿದ್ದಿರುವುದು ಖಚಿತಗೊಂಡಿದೆ. ಇದೀಗ ಹಾರ್ದಿಕ್ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುತ್ತಿದ್ದಾರೆ.

PREV
17
ಇಂಗ್ಲೆಂಡ್ ವಿರುದ್ಧ ಗಾಯಗೊಂಡ ಹಾರ್ದಿಕ್ ಪಾಂಡ್ಯ ಬದಲು ಸ್ಫೋಟಕ ಬ್ಯಾಟ್ಸ್‌ಮನ್‌ಗೆ ಸ್ಥಾನ!

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಉತ್ತಮ ಹೋರಾಟ ನೀಡುತ್ತಿದೆ. ಸತತ ಗೆಲುವು ದಾಖಲಿಸಿದ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧದ ಹೋರಾಟಕ್ಕೆ ಸಜ್ಜಾಗಿದೆ. 

27
Hardik Pandya Injury

ಅಕ್ಟೋಬರ್ 29 ರಂದು ಲಖನೌದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಪಂದ್ಯ ನಡೆಯಲಿದೆ. ಆದರೆ ಇಂಜುರಿಗೆ ತುತ್ತಾಗಿರುವ ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.

37

ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ. ಈ ಕುರಿತು ಕೆಎಲ್ ರಾಹುಲ್ ಮಹತ್ವದ ಸುಳಿವು ನೀಡಿದ್ದಾರೆ.

47

ಇಂಗ್ಲೆಂಡ್ ವಿರುದ್ಧದ ಪ್ಲೇಯಿಂಗ್ 11 ತಂಡದಲ್ಲಿ ಸೂರ್ಯಕುಮಾರ್ ಯಾದವ್ ಸ್ಥಾನ ಪಡೆಯಲಿದ್ದಾರೆ ಎಂದು ಪ್ರಿ ಮ್ಯಾಚ್ ಸುದ್ದಿಗೋಷ್ಠಿಯಲ್ಲಿ ರಾಹುಲ್ ಹೇಳಿದ್ದಾರೆ.  

57

ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಅಭ್ಯಾಸ ಆರಂಭಿಸಿದ್ದಾರೆ. ನವೆಂಬರ್ 5 ರಂದು ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ಲಭ್ಯವಾಗುವ ಸಾಧ್ಯತೆ ಇದೆ.
 

67

ಸತತ 5 ಗೆಲುವಿನ ಮೂಲಕ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್ ವಿರುದ್ಧದ ಗೆಲುವು ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಪಡಿಸಲಿದೆ.
 

77

ಇತ್ತ ಭಾರತ ವಿರುದ್ದ ಸೋಲು ಕಂಡರೆ ಇಂಗ್ಲೆಂಡ್ ತಂಡ ಬಹುತೇಕ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಹೊರಬೀಳಲಿದೆ. ಕಳೆದ ಆವೃತ್ತಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು.

Read more Photos on
click me!

Recommended Stories