ಬೆಂಗಳೂರಿನ ವಾತಾವರಣ ಕಂಡು ಲವ್ವಲ್ಲಿ ಬಿದ್ದ ಮನು ಭಾಕರ್; ಮಸಾಲ್ ದೋಸೆಗೆ ತಾರಾ ಶೂಟರ್ ಫಿದಾ

Published : Jul 13, 2026, 03:49 PM IST

ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ತಾರಾ ಶೂಟರ್ ಮನು ಭಾಕರ್ ನಮ್ಮ ಬೆಂಗಳೂರಿನ ವಾತಾವರಣ, ಆತಿಥ್ಯ ಹಾಗೂ ಆಹಾರಕ್ಕೆ ಮನಸೋತಿದ್ದಾರೆ. ಈ ಕುರಿತಂತೆ ಸ್ವತಃ ಮನು ಭಾಕರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

PREV
15
ಬೆಂಗಳೂರು ನಗರವನ್ನು ಕೊಂಡಾಡಿದ ಮನು ಭಾಕರ್

ಒಲಿಂಪಿಕ್ಸ್‌ ಪದಕ ವಿಜೇತೆ, ಭಾರತದ ತಾರಾ ಶೂಟರ್‌ ಮನು ಭಾಕರ್‌ ಅವರು ಬೆಂಗಳೂರು ನಗರದ ಬಗ್ಗೆ ಕೊಂಡಾಡಿದ್ದಾರೆ. ನಗರದ ಸಾಯ್‌(ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ) ಕೇಂದ್ರದಲ್ಲಿ ತರಬೇತಿಯಲ್ಲಿದ್ದ ಅವರು, ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

25
ಬೆಂಗಳೂರು ವಾತಾವರಣಕ್ಕೆ ಮನು ಫಿದಾ

‘ಬೆಂಗಳೂರಿನ ದಿನಗಳನ್ನು ಸುಂದರವಾಗಿಸಿದ್ದಕ್ಕೆ ಸಾಯ್‌ಗೆ ಧನ್ಯವಾದಗಳು. ಇಲ್ಲಿನ ವಾತಾವರಣ ಸ್ಫೂರ್ತಿದಾಯಕ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಿತ್ತು ಎಂದು ಮನು ಭಾಕರ್ ಹೇಳಿದ್ದಾರೆ.

35
ಬೆಂಗಳೂರಿನ ಜತೆ ಲವ್ವಲ್ಲಿ ಬಿದ್ದ ಒಲಿಂಪಿಕ್ಸ್ ಶೂಟರ್

ಬೆಂಗಳೂರಿನ ಜೊತೆ ನಾನೀಗ ಪ್ರೀತಿಯಲ್ಲಿ ಬಿದ್ದಿದ್ದೇನೆ. ಇಲ್ಲಿನ ಸುಂದರ ಹವಾಮಾನ, ಜನರ ಆತ್ಮೀಯತೆ ಮತ್ತು ಮರೆಯಲಾಗದ ತುಪ್ಪದ ಪುಡಿಯ ಮಸಾಲ ದೋಸೆ. ಮತ್ತೊಮ್ಮೆ ಬೆಂಗಳೂರಿನಲ್ಲಿ ತರಬೇತಿಗೆ ಬರಲು ಕಾಯುತ್ತಿದ್ದೇನೆ’ ಎಂದಿದ್ದಾರೆ.

45
ಒಲಿಂಪಿಕ್ಸ್‌ನಲ್ಲಿ ಐತಿಹಾಸಿದ ಸಾಧನೆ ಮಾಡಿದ ಮನು ಭಾಕರ್

ಹರ್ಯಾಣ ಮೂಲದ ಮನು ಭಾಕರ್, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10ಮೀಟರ್ ಮಹಿಳೆಯರ ಏರ್ ಪಿಸ್ತೂಲ್ ಹಾಗೂ 10 ಮೀಟರ್ ಮಿಶ್ರ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು.

55
ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್

ಮನು ಭಾಕರ್ ಇದುವರೆಗೂ ಎರಡು ಒಲಿಂಪಿಕ್ಸ್ ಪದಕ ಸೇರಿದಂತೆ 23 ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್ ಪದಕ, 12 ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಚಾಂಪಿಯನ್ ಶಿಪ್ ಪದಕಗಳನ್ನು ಜಯಿಸಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories