ಭಾರತದ ಹೀನಾಯ ಸೋಲಿನ ಬಳಿಕ ಕೋಚ್ ಬದಲಾವಣೆ ಆಗ್ರಹ ಕೇಳಿಬರುತ್ತಿದೆ. ಆದರೆ ಸರ್ಜರಿ ಆಗಿರೋದು ಗೆದ್ದ ಇಂಗ್ಲೆಂಡ್ ತಂಡದಲ್ಲಿ. 4-0 ಗೆಲುವಿನ ಹಿಂದಿನ ಕೋಚ್ ಬ್ರೆಂಡನ್ ಮೆಕಲಂ ಟೆಸ್ಟ್ ಕೋಚಿಂಗ್‌ನಿಂದ ವಜಾಗೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 0-4 ಅಂತರದಲ್ಲಿ ಸರಣಿ ಸೋತು ಟೀಕೆಗೆ ಗುರಿಯಾಗಿದೆ. ಕೋಚ್ ಬದಲಾಗಬೇಕು, ತಂಡ ಬದಲಾಗಬೇಕು, ಆಯ್ಕೆಯಲ್ಲಿ ಬದಲಾವಣೆ ಬೇಕು ಸೇರಿದಂತೆ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಗೆ ಆಗ್ರಹ ಕೇಳಿಬರುತ್ತಿದೆ. ಒತ್ತಡ ತೀವ್ರಗೊಳ್ಳುತ್ತಿದೆ. ಆದರೆ ಸದ್ಯ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬದಲಾಗಿ ಕ್ಲೀನ್ ಸ್ಪೀಪ್ ಗೆಲುವು ದಾಖಲಿಸಿದ ಇಂಗ್ಲೆಂಡ್ ತಂಡದಲ್ಲಿ ಸರ್ಜರಿ ಮಾಡಲಾಗಿದೆ. ಗೆಲುವಿನ ಹಿಂದಿನ ಪ್ರಮುಖ ರೂವಾರಿ ಕೋಚ್ ಬ್ರೆಂಡನ್ ಮೆಕಲಂ ಅವರನ್ನು ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ವಜಾ ಮಾಡಲಾಗಿದೆ.
26
ಏಕದಿನ ಹಾಗೂ ಟಿ20 ತಂಡದ ಕೋಚ್
ಬ್ರೆಂಡನ್ ಮೆಕಲಂ ಇಂಗ್ಲೆಂಡ್ ತಂಡದ ಪ್ರಧಾನ್ ಕೋಚ್. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಇದೀಗ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದೆ. ಕೋಚ್ ಮೆಕಲಂ ವಜಾ ಮಾಡಿದೆ. ಆದರೆ ಭಾರತ ವಿರುದ್ದ 4-0 ಅಂತರದ ಗೆಲುವಿನ ಕಾರಣಾದ ಮಕೆಲಂ ಏಕದಿನ ಹಾಗೂ ಟಿ20 ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ.
36
ಬೆನ್ ಸ್ಟೋಕ್ಸ್ ವಿದಾಯ ಬೆನ್ನಲ್ಲೇ ಮಕೆಲಂ ಅಮಾನತು
2022ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ಮೆಕಲಂ ಹಲವು ಐತಿಹಾಸಿಕ ಗೆಲುವಿನಲ್ಲಿ ಕೊಡುಗೆ ನೀಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ನಾಯಕ, ಪ್ರಮುಖ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಇದೀಗ ಮಕೆಲಂ ಅಮಾನತು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬ್ರೆಂಡನ್ ಮೆಕಲಂ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ. ಮಕೆಲಂ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡ, ನ್ಯೂಜಿಲೆಂಡ್ ವಿರುದ್ದ 1-2 ಅಂತರದಲ್ಲಿ ಟೆಸ್ಟ್ ಸರಣಿ ಸೋತಿತ್ತು. ಮಕೆಲಂ ತವರಿನ ತಂಡದ ವಿರುದ್ದ ಸರಣಿ ಸೋತ ಇಂಗ್ಲೆಂಡ್ ಮುಖಭಂಗ ಅನುಭವಿಸಿತ್ತು. ಇದೇ ಸೋಲು ಮಕೆಲಂ ಟೆಸ್ಟ್ ಕೋಚಿಂಗ್ ಕರಿಯರ್‌ಗೆ ಅಂತ್ಯ ಹಾಡಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ
56
ಅಮಾನತು ಬೆನ್ನಲ್ಲೇ ಮೊದಲ ಪ್ರತಿಕ್ರಿಯೆ
ಟೆಸ್ಟ್ ತಂಡಕ್ಕೆ ಕೋಚಿಂಗ್ ಜವಾಬ್ದಾರಿಯನ್ನು ಹೆಚ್ಚು ಪ್ರೀತಿಯಿಂದ ನಿರ್ವಹಿಸಿದ್ದೇನೆ.ತಂಡವಾಗಿ ನಾವು ಸಾಧನೆ ಮಾಡಲು ಸಾಧ್ಯವಾಗಿದೆ. ಈ ಅವಧಿಯಲ್ಲಿ ಐತಿಹಾಸಿಕ ಗೆಲುವು ಹಾಗೂ ಸವಾಲಿನ ದಿನಗಳನ್ನು ಎದುರಿಸಿದ್ದೇನೆ. ಈ ಪ್ರಯಾಣದಲ್ಲಿ ನನಗೆ ಜೊತೆಯಾದ ತಂಡದ ಆಟಗಾರರು, ಸಪೋರ್ಟ್ ಸ್ಟಾಫ್, ಮ್ಯಾನೇಜ್ಮೆಂಟ್, ಮಂಡಳಿ ಹಾಗೂ ಅಭಿಮಾನಿಗಳಿಗೆ ಋಣಿಯಾಗಿದ್ದೇನೆ. ಈ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ವೈಟ್ ಬಾಲ್ ಕೋಚಿಂಗ್ ಜವಾಬ್ದಾರಿ ಮುಂದುವರಿಸುತ್ತೇನೆ ಎಂದು ಮೆಕಲಂ ಹೇಳಿದ್ದಾರೆ.
66
ಟೀಂ ಇಂಡಿಯಾದಲ್ಲಿ ಯಾವಾಗ
ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ ನಡೆಯಬೇಕು ಅನ್ನೋ ಕೂಗು ಕೇಳಿಬರುತ್ತಿದೆ. ಮೆಕಲಂ ಅಮಾನತು ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಸರ್ಜರಿ, ಬದಲಾವಣೆ ಯಾವಾಗ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.