Lionel Messi retirement: ಮೆಸ್ಸಿ ಫ್ಯಾನ್ಸ್‌ಗೆ ಬಿಗ್ ಶಾಕ್! ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಲಿಯೋನೆಲ್ ಮೆಸ್ಸಿ ವಿದಾಯ!

Published : Aug 31, 2026, 10:22 PM IST

Lionel Messi announces retirement from international football: ಫುಟ್‌ಬಾಲ್ ಜಗತ್ತಿನ ದಿಗ್ಗಜ, ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಅಂತರರಾಷ್ಟ್ರೀಯ ಫುಟ್‌ಬಾಲ್ ವೃತ್ತಿಜೀವನಕ್ಕೆ ಅಂತ್ಯ ಹಾಡುವುದಾಗಿ ಘೋಷಿಸಿದ್ದಾರೆ. ಸೋಮವಾರ ಮೆಸ್ಸಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

PREV
16
ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಲಿಯೋನೆಲ್ ಮೆಸ್ಸಿ ವಿದಾಯ

ಬ್ಯೂನಸ್ ಐರಿಸ್: ಫುಟ್‌ಬಾಲ್ ಜಗತ್ತಿನ ದಿಗ್ಗಜ, ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಅಂತರರಾಷ್ಟ್ರೀಯ ಫುಟ್‌ಬಾಲ್ ವೃತ್ತಿಜೀವನಕ್ಕೆ ಅಂತ್ಯ ಹಾಡುವುದಾಗಿ ಘೋಷಿಸಿದ್ದಾರೆ. ಸೋಮವಾರ ಮೆಸ್ಸಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, ಅಭಿಮಾನಿಗಳಿಗೆ ಇದು ಭಾರೀ ಆಘಾತ ನೀಡಿದೆ.

26
‘ಇದು ನೋವಿನ ನಿರ್ಧಾರ’ Lionel Messi

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಶೇರ್ ಮಾಡಿರುವ ಮೆಸ್ಸಿ, ಇದು ನೋವುಂಟುಮಾಡುವ ನಿರ್ಧಾರವಾಗಿದ್ದು, ಈಗ ಸಮಯ ಬಂದಿದೆ ಎಂಬುದು ಅರ್ಥವಾಗಿದೆ ಎಂದು ಹೇಳಿದ್ದಾರೆ. ಅರ್ಜೆಂಟೀನಾ ಜೆರ್ಸಿಗಾಗಿ ತಾನು ಯಾವಾಗಲೂ ಎಲ್ಲವನ್ನೂ ನೀಡಿದ್ದೇನೆ ಎಂದು ಅವರು ಭಾವುಕರಾಗಿ ಬರೆದಿದ್ದಾರೆ.

36
207 ಪಂದ್ಯ, 125 ಗೋಲು Lionel Messi records

ಅರ್ಜೆಂಟೀನಾ ಪರ ಮೆಸ್ಸಿ 207 ಪಂದ್ಯಗಳನ್ನು ಆಡಿದ್ದು, 125 ಗೋಲುಗಳನ್ನು ಗಳಿಸಿದ್ದಾರೆ. ದೇಶದ ಪರ ಅತಿ ಹೆಚ್ಚು ಪಂದ್ಯ ಆಡಿದ ಮತ್ತು ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆ ಕೂಡ ಅವರ ಹೆಸರಿನಲ್ಲಿದೆ.

46
ವಿಶ್ವಕಪ್ ಗೆಲುವಿನ ನಾಯಕ Lionel Messi

ಮೆಸ್ಸಿಯ ವೃತ್ತಿಜೀವನದ ಅತ್ಯಂತ ದೊಡ್ಡ ಕ್ಷಣ 2022ರ ಕತಾರ್ ವಿಶ್ವಕಪ್. ಅರ್ಜೆಂಟೀನಾವನ್ನು ವಿಶ್ವಕಪ್ ಚಾಂಪಿಯನ್ ಮಾಡಿದ ಮೆಸ್ಸಿ, ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು. ಇದಕ್ಕೂ ಮುನ್ನ 2021ರಲ್ಲಿ ಕೋಪಾ ಅಮೆರಿಕಾ ಪ್ರಶಸ್ತಿಯನ್ನು ಗೆದ್ದು ಪ್ರಮುಖ ಅಂತರರಾಷ್ಟ್ರೀಯ ಟ್ರೋಫಿಯ ಬರ ನೀಗಿಸಿದ್ದರು.

56
Lionel Messi : ಮತ್ತೊಂದು ಕೋಪಾ ಅಮೆರಿಕಾ ಗೆಲುವು

2024ರಲ್ಲೂ ಅರ್ಜೆಂಟೀನಾ ಪರ ಕೋಪಾ ಅಮೆರಿಕಾ ಪ್ರಶಸ್ತಿ ಗೆದ್ದ ಮೆಸ್ಸಿ, ಅಂತರರಾಷ್ಟ್ರೀಯ ಫುಟ್‌ಬಾಲ್ನಲ್ಲಿ ತಮ್ಮ ದೇಶಕ್ಕೆ ಹಲವು ಮಹತ್ವದ ಗೆಲುವುಗಳನ್ನು ತಂದುಕೊಟ್ಟಿದ್ದರು.

ಮೆಸ್ಸಿ ಯುಗ ಅಂತ್ಯ?

2005ರಲ್ಲಿ ಅರ್ಜೆಂಟೀನಾ ತಂಡಕ್ಕೆ ಪದಾರ್ಪಣೆ ಮಾಡಿದ ಮೆಸ್ಸಿ, ವರ್ಷಗಳ ಕಾಲ ತಂಡದ ಪ್ರಮುಖ ಆಟಗಾರರಾಗಿದ್ದರು. ಆರಂಭಿಕ ಸೋಲುಗಳು, ವಿಶ್ವಕಪ್ ಫೈನಲ್‌ನ ನಿರಾಸೆ ಹಾಗೂ ಕೋಪಾ ಅಮೆರಿಕಾ ಫೈನಲ್ ಸೋಲುಗಳ ಬಳಿಕ ಟೀಕೆ ಎದುರಿಸಿದ್ದ ಅವರು, ನಂತರ ಅರ್ಜೆಂಟೀನಾದ ಫುಟ್‌ಬಾಲ್ ಇತಿಹಾಸದಲ್ಲೇ ಅಳಿಸಲಾಗದ ಸ್ಥಾನ ಪಡೆದರು.

ಮರಡೋನಾ ನಂತರ ಮತ್ತೊಂದು ದಿಗ್ಗಜ

1986ರ ವಿಶ್ವಕಪ್ ವಿಜೇತ ನಾಯಕ ಡಿಯಾಗೋ ಮರಡೋನಾ ಅವರೊಂದಿಗೆ ಹೋಲಿಕೆಗೆ ಒಳಗಾಗುತ್ತಿದ್ದ ಮೆಸ್ಸಿ, ಕೊನೆಗೂ ತಮ್ಮದೇ ಆದ ಪರಂಪರೆಯನ್ನು ನಿರ್ಮಿಸಿದರು. ವಿಶ್ವಕಪ್, ಕೋಪಾ ಅಮೆರಿಕಾ ಸೇರಿದಂತೆ ಪ್ರಮುಖ ಟ್ರೋಫಿಗಳನ್ನು ಗೆದ್ದು ಅರ್ಜೆಂಟೀನಾ ಫುಟ್‌ಬಾಲ್‌ನ ಅತ್ಯಂತ ಯಶಸ್ವಿ ಅಧ್ಯಾಯಗಳಲ್ಲಿ ಒಂದನ್ನು ಬರೆದಿದ್ದಾರೆ.

66
Lionel Messi : ಹೆಮ್ಮೆಯೊಂದಿಗೆ ಹೊರಡುತ್ತಿದ್ದೇನೆ’

ತಮ್ಮ ತಂಡದ ಸದಸ್ಯರೊಂದಿಗೆ ತಾವು ಒಮ್ಮೆ ಕನಸು ಕಂಡ ಕ್ಷಣಗಳನ್ನು ಅರ್ಜೆಂಟೀನಾ ಅಭಿಮಾನಿಗಳಿಗೆ ನೀಡಿದ ಹೆಮ್ಮೆಯೊಂದಿಗೆ ಹೊರಡುತ್ತಿರುವುದಾಗಿ ಮೆಸ್ಸಿ ಹೇಳಿದ್ದಾರೆ.

ಫುಟ್‌ಬಾಲ್ ಇತಿಹಾಸದ ಅತ್ಯಂತ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಮೆಸ್ಸಿಯ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಈಗ ಭಾವುಕ ವಿದಾಯದ ಘಟ್ಟ ಎದುರಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories