ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ಸರಳವಾಗಿ ಮದುವೆಯಾದ ಥಾಮಸ್‌ ಕಪ್‌ ಹೀರೋ ಎಚ್‌ಎಸ್‌ ಪ್ರಣಯ್!

First Published Sep 16, 2022, 5:35 PM IST

ಭಾರತ ಬ್ಯಾಡ್ಮಿಂಟನ್‌ ತಂಡದ ಆಟಗಾರ 30 ವರ್ಷ ಎಚ್‌ಎಸ್‌ ಪ್ರಣಯ್‌, ಕಳೆದ ಬುಧವಾರ ತಮ್ಮ ದೀರ್ಘಕಾಲದ ಗೆಳತಿ ಬೆಂಗಳೂರು ಮೂಲದ ಶ್ವೇತಾ ರಾಚೆಲ್‌ ಥಾಮಸ್‌ ಅವರನ್ನು ವಿವಾಹವಾದರು. ಈ ವರ್ಷ ನಡೆದ ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಐತಿಹಾಸಿಕ ಗೆಲುವಿನ ಹೀರೋ ಆಗಿದ್ದ ಎಚ್‌ ಎಸ್‌ ಪ್ರಣ್‌ ಇತ್ತೀಚಿನ ದಿನಗಳಲ್ಲಿ ವಿಶ್ವದ ಅಗ್ರ ಷಟ್ಲರ್‌ಗಳ ಸಾಲಿನಲ್ಲಿದ್ದವರನ್ನು ಸೋಲಿಸಿದ್ದರು.

ಭಾರತ ಬ್ಯಾಡ್ಮಿಂಟನ್‌ ತಂಡದ ಆಟಗಾರ ಎಚ್‌ಎಸ್‌ ಪ್ರಣಯ್‌, ತಮ್ಮ ದೀರ್ಘಕಾಲದ ಗೆಳತಿ ಶ್ವೇತಾ ರಾಚೆಲ್‌ ಥಾಮಸ್‌ ಅವರನ್ನು ಬುಧವಾರ ವಿವಾಹವಾದರು. ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿಯೇ ಶ್ವೇತಾ ಅವರ ಕೈಹಿಡಿಯುವ ಮೂಲಕ ಸರಳವಾಗಿ ವಿವಾಹವಾದರು.

ತಮ್ಮ ವಿವಾಹದ ಚಿತ್ರಗಳನ್ನು ಸ್ವತಃ ಎಚ್‌ಎಸ್‌ ಪ್ರಣಯ್‌ ಸೋಷಿಸಯಲ್‌ ಮೀಡಿಯಾ ಪುಟಗಳಲ್ಲಿ ಹಂಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಆಪ್ತರು ಮಾತ್ರವೇ ಹಾಜರಿದ್ದರು. 

ಪ್ರಣಯ್‌ ಅವರ ಪತ್ನಿ ಶ್ವೇತಾ ರಾಚೆಲ್‌ ಥಾಮಸ್‌, ಕುವೈತ್‌ನಲ್ಲಿ ಜನಿಸಿದವರು. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಫ್ಯಾಶನ್‌ ಕಂಟೆಂಟ್‌ ಕ್ರಿಯೇಟರ್‌ ಆಗಿದ್ದಾರೆ.

ಇಬ್ಬರೂ ಭಿನ್ನ ಧರ್ಮದವರಾಗಿದ್ದು, ಇತ್ತೀಚೆಗೆ ಆಕರ್ಷಕವಾಗಿ ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ಅನ್ನೂ ಮಾಡಿಸಿದ್ದರು. ಈ ಚಿತ್ರಗಳನ್ನೂ ಕೂಡ ಹಸೀನಾ ಸುನೀಲ್‌ ಪ್ರಣಯ್‌ ತಮ್ಮ ಸೋಷಿಯಲ್‌ ಮೀಡಿಯಾ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಜಸ್ಟ್‌ ಮ್ಯಾರೀಡ್‌ ಎನ್ನುವ ಶೀರ್ಷಿಕೆಯಲ್ಲಿ ಚಿತ್ರಗಳನ್ನು ಪ್ರಣಯ್‌ ಹಂಚಿಕೊಂಡಿದ್ದು, ಇತರ ಬ್ಯಾಡ್ಮಿಂಟನ್‌ ತಾರೆಯರು ಹೊಸ ಜೋಡಿಗೆ ಶುಭಾಶಯ ಕೋರಿದ್ದಾರೆ.

ಈ ವರ್ಷ ನಡೆದ ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಎಚ್‌ಎಚ್‌ ಪ್ರಣಯ್‌ ಭಾರತ ತಂಡದ ಐತಿಹಾಸಿಕ ಥಾಮಸ್‌ ಕಪ್‌ ಗೆಲುವಿಗೆ ಕಾರಣರಾಗಿದ್ದರು.

ಈ ವರ್ಷದಲ್ಲಿ ಅವರ ಶ್ರೇಷ್ಠ ನಿರ್ವಹಣೆಯ ಹೊರತಾಗಿಯೂ ಎಚ್‌ಎಸ್‌ ಪ್ರಣಯ್‌, ಹಾಲಿ ವರ್ಷದಲ್ಲಿ ಕನಿಷ್ಠ ಒಂದು ಪ್ರಶಸ್ತಿಯನ್ನು ಗೆಲ್ಲಲು ವಿಫಲರಾಗಿದ್ದಾರೆ. ಆದರೆ, ಮದುವೆಯ ಮೂಲಕ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಎಚ್‌ಎಸ್‌ ಪ್ರಣಯ್‌ ಅಗ್ರ ಆಟಗಾರರಾದ ಜಪಾನ್‌ನ ಕೆಂಟೋ ಮೆಮೊಟಾ, ಚೋವ್‌ ಟಿಯೆನ್‌ ಚೆನ್‌ ಹಾಗೂ ಲೋಹ್‌ ಕೀನ್‌ ಯು ರನ್ನು ಸುಲಭವಾಗಿ ಸೋಲಿಸಿದ್ದರು.

ಮಂಗಳವಾರ ಬಿಡುಗಡೆಯಾದ ಪರಿಷ್ಕೃತ ಬಿಡಡಬ್ಲ್ಯುಎಫ್‌ ಶ್ರೇಯಾಂಕದಲ್ಲಿ ಎರಡು ಸ್ಥಾನ ಬಡ್ತಿ ಪಡೆದುಕೊಂಡಿರುವ ಎಚ್‌ಎಸ್‌ ಪ್ರಣಯ್‌ 16ನೇ ಸ್ಥಾನ ಸಂಪಾದನೆ ಮಾಡಿದ್ದಾರೆ.

click me!