ಟೆನಿಸ್ ದಿಗ್ಗಜ Roger Federer ಹೆಸರಿನಲ್ಲಿರುವ 5 ಇಂಟ್ರೆಸ್ಟಿಂಗ್ ದಾಖಲೆಗಳಿವು..!

First Published Sep 16, 2022, 11:52 AM IST

ಝೂರಿಚ್(ಸೆ.16) 'ಟೆನಿಸ್‌ ಮಾಂತ್ರಿಕ’ ಎಂದೇ ಕರೆಸಿಕೊಳ್ಳುವ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌ ವೃತ್ತಿಪರ ಟೆನಿಸ್‌ಗೆ ಗುರುವಾರ(ಸೆ.15) ನಿವೃತ್ತಿ ಘೋಷಿಸಿದ್ದಾರೆ. 41 ವರ್ಷದ ಫೆಡರರ್‌ 20 ಗ್ರ್ಯಾನ್‌ಸ್ಲಾಂಗಳೊಂದಿಗೆ ಟೆನಿಸ್‌ಗೆ ಗುಡ್‌ಬೈ ಹೇಳಿದ್ದಾರೆ. ಸಾಮಾಜಿಕ ತಾಣ ಟ್ವೀಟರ್‌ನಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ ಫೆಡರರ್‌, ಟೆನಿಸ್‌ನೊಂದಿಗೆ ನಂಟು ಬಿಡುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕ್ರೀಡೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
2021ರ ವಿಂಬಲ್ಡನ್‌ ಬಳಿಕ ಸ್ಪರ್ಧಿಸದ ಅವರು, ಮುಂದಿನ ವಾರದ ಲೇವರ್‌ ಕಪ್‌ ಟೂರ್ನಿಯಲ್ಲಿ ಕೊನೆ ಬಾರಿಗೆ ಆಡುವುದಾಗಿ ತಿಳಿಸಿದ್ದಾರೆ. ಇದೀಗ ರೋಜರ್ ಫೆಡರರ್ ಅವರ ಕೆಲ ಪ್ರಮುಖ ದಾಖಲೆಗಳ ಪಕ್ಷಿನೋಟ ಇಲ್ಲಿವೆ ನೋಡಿ

1. ಸತತವಾಗಿ 23 ಗ್ರ್ಯಾನ್‌ ಸ್ಲಾಂಗಳಲ್ಲಿ ಸೆಮಿಫೈನಲ್‌ ಪ್ರವೇಶ 

ಟೆನಿಸ್ ದಂತಕಥೆ ರೋಜರ್ ಫೆಡರರ್‌, 2004ರಿಂದ 2010ರ ವರೆಗೆ ಸತತ 23 ಟೆನಿಸ್‌ ಗ್ರ್ಯಾನ್‌ ಸ್ಲಾಂಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿ ದಾಖಲೆ ಬರೆದಿದ್ದರು.

2. ಗ್ರ್ಯಾನ್‌ ಸ್ಲಾಂ ಟೂರ್ನಿಯಲ್ಲಿ 100 ಸಿಂಗಲ್ಸ್‌ ಪಂದ್ಯ ಗೆದ್ದ ಮೊದಲ ಆಟಗಾರ

ಸ್ವಿಸ್ ಟೆನಿಸ್ ಮಾಂತ್ರಿಕ ಫೆಡರರ್‌, ಟೆನಿಸ್ ಗ್ರ್ಯಾನ್‌ ಸ್ಲಾಂ ಇತಿಹಾಸದಲ್ಲಿ 100 ಸಿಂಗಲ್ಸ್‌ ಟೆನಿಸ್‌ ಪಂದ್ಯಗಳನ್ನು ಜಯಿಸಿದ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.

3. ಗ್ರ್ಯಾನ್‌ ಸ್ಲಾಂ ಸಿಂಗಲ್ಸ್‌ನಲ್ಲಿ ಅತಿಹೆಚ್ಚು ಪಂದ್ಯ ಗೆದ್ದ ಆಟಗಾರ

ಟೆನಿಸ್ ಗ್ರ್ಯಾನ್‌ ಸ್ಲಾಂ ಇತಿಹಾಸದಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಜಯಿಸಿದ ದಾಖಲೆ ರೋಜರ್ ಫೆಡರರ್ ಫೆಡರರ್ ಹೆಸರಿನಲ್ಲಿದೆ. ಇನ್ನು ಇತ್ತೀಚೆಗಷ್ಟೇ ಟೆನಿಸ್‌ಗೆ ವಿದಾಯ ಘೋಷಿಸಿದ ಸೆರೆನಾ 365 ಪಂದ್ಯಗಳನ್ನು ಜಯಿಸಿದ್ದರು.

Roger Federer

4. ಸತತ 10 ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ ಮೊದಲಿಗ

2005ರಿಂದ 2007ರ ವರೆಗೆ ಸತತ 10 ಟೆನಿಸ್‌ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ ಮೊದಲ ಟೆನಿಸಿಗ  ಹೆಗ್ಗಳಿಕೆ ರೋಜರ್‌ ಫೆಡರರ್ ಅವರದ್ದು. 2005ರ ವಿಂಬಲ್ಡನ್‌ನಿಂದ 2007ರ ಯುಎಸ್‌ ಓಪನ್‌ ವರೆಗೆ  10 ಟೂರ್ನಿಗಳಲ್ಲಿ ಸತತವಾಗಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದರು. 

5. ವಿಶ್ವ ರ‍್ಯಾಂಕಿಂಗ್‌‌ನಲ್ಲಿ ನಂ.1 ಸ್ಥಾನ ಪಡೆದ ಅತಿಹಿರಿಯ ಆಟಗಾರ

ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅವರಿಗೆ 36 ವರ್ಷ 10 ತಿಂಗಳು ಗಳಿದ್ದಾಗಲೂ ಟೆನಿಸ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಅಲಂಕರಿಸುವ ಮೂಲಕ, ಈ ಸಾಧನೆ ಮಾಡಿದ ಅತಿ ಹಿರಿಯ ಟೆನಿಸಿಗ ಎನ್ನುವ ಕೀರ್ತಿಗೆ ಫೆಡರರ್ ಪಾತ್ರರಾಗಿದ್ದರು.

click me!