ಆಸೀಸ್ ಮಾಜಿ ಮಹಿಳಾ ಕಾರ್ ರೇಸರ್ ಇದೀಗ ಫೇಮಸ್ ಪೋರ್ನ್ ಸ್ಟಾರ್..!

First Published Jun 9, 2020, 1:02 PM IST

ಒಂದು ಕಾಲದಲ್ಲಿ ಕೇವಲ 14ನೇ ವಯಸ್ಸಿಗೆ ಕಾರ್‌ ರೇಸಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾದ ರೀನೆ ಗ್ರಾಸಿಯಾ ಇದೀಗ ವೃತ್ತಿಪರ ನೀಲಿ ತಾರೆಯಾಗಿ ಬದಲಾಗಿದ್ದಾರೆ. ಆಸ್ಟ್ರೇಲಿಯಾದ ಮೊದಲ ಮಹಿಳಾ ಸೂಪರ್ ಕಾರ್‌ ರೇಸರ್ ಈಗ ಪೋರ್ನ್ ಇಂಡಸ್ಟ್ರಿಯಿಂದ ವಾರಕ್ಕೆ 19 ಲಕ್ಷ ರುಪಾಯಿ ಸಂಬಳ ಎಣಿಸಲಾರಂಭಿಸಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ ರೀನೆ ಗ್ರಾಸಿಯಾ ಸೆಕ್ಸ್ ಉದ್ಯಮಕ್ಕೆ ಕಾಲಿಡುವ ಮುನ್ನ ತಂದೆಯ ಒಪ್ಪಿಗೆಯನ್ನು ಪಡೆದಿದ್ದರಂತೆ. ಪೋರ್ನ್ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ 30 ವರ್ಷಗಳಲ್ಲಿ ತೀರಿಸಬೇಕಿದ್ದ ಸಾಲವನ್ನು ಕೇವಲ 12 ತಿಂಗಳಿನಲ್ಲಿ ತೀರಿಸುವ ವಿಶ್ವಾಸ ರೀನೆ ಗ್ರಾಸಿಯಾಳದ್ದು. ರೀನೆ ಗ್ರಾಸಿಯಾ ಹಾಟ್ ಫೋಟೋಗಳು ಪಡ್ಡೆಹುಡುಗರ ನಿದ್ದೆಕೆಡಿಸಿರುವುದಂತೂ ಸುಳ್ಳಲ್ಲ.

ಸೂಪರ್‌ ಕಾ​ರ್ಸ್ ಮಾಜಿ ರೇಸರ್‌ ಆಸ್ಪ್ರೇ​ಲಿ​ಯಾದ ರೀನೆ ಗ್ರಾಸಿಯಾ ಈ ಪೋರ್ನ್‌ ಸ್ಟಾರ್‌ (ನೀಲಿ ಚಿತ್ರ ನಟಿ)ಯಾಗಿ​ದ್ದು, ವಾರಕ್ಕೆ 19 ಲಕ್ಷ ರುಪಾಯಿ ಸಂಪಾ​ದನೆ ಮಾಡು​ತ್ತಿ​ರು​ವಾಗಿ ಹೇಳಿ​ಕೊಂಡಿ​ದ್ದಾರೆ.
undefined
2015ರಲ್ಲಿ ವೃತ್ತಿ​ಪರ ರೇಸರ್‌ ಆಗಿ ಪಾದಾ​ರ್ಪಣೆ ಮಾಡಿದ್ದ ರೀನೆ, 2017ರಲ್ಲಿ ಕಳಪೆ ಪ್ರದ​ರ್ಶ​ನದ ಕಾರಣ ರೇಸಿಂಗ್‌ ನಿಲ್ಲಿ​ಸಿ​ದ್ದರು. 25 ವರ್ಷದ ರೀನೆ ಪೋರ್ನ್‌ ಸ್ಟಾರ್‌ ಆಗಿ ಬದ​ಲಾ​ಗಿ​ದ್ದರು.
undefined
2017ರಿಂದ ನೀಲಿ ಚಿತ್ರೋದ್ಯಮಕ್ಕೆ ಧುಮುಕಿದ ರೀನೆ ಗ್ರಾಸಿಯಾ ಭರ್ಜರಿಯಾಗಿಯೇ ಸಂಪಾದನೆ ಮಾಡುತ್ತಿದ್ದಾರಂತೆ. ನೀಲಿ ಚಿತ್ರ ನಟಿಯಾಗುವುದಕ್ಕಿಂತ ಮೊದಲು ರೀನೆ ಗ್ರಾಸಿಯಾ ಆಸ್ಟ್ರೇಲಿಯಾದ ಮೊದಲ ಮಹಿಳಾ ಸೂಪರ್‌ಕಾರ್ ಡ್ರೈವರ್ ಎನ್ನುವ ದಾಖಲೆಯನ್ನು ಬರೆದಿದ್ದರು.
undefined
‘ರೇಸಿಂಗ್‌ನಲ್ಲಿ ನಿರೀ​ಕ್ಷಿತ ಯಶಸ್ಸು ಸಿಗದ ಕಾರಣ, ಪೋರ್ನ್‌ ಸ್ಟಾರ್‌ ಆಗಲು ಇಚ್ಛಿ​ಸಿ​ದೆ. ನಾನು ಊಹಿ​ಸದೆ ಇರು​ವಷ್ಟು ಹಣ ಸಿಗು​ತ್ತಿದೆ. 30 ವರ್ಷದ ಗೃಹ ಸಾಲವನ್ನು ಕೇವಲ 12 ತಿಂಗ​ಳಲ್ಲಿ ತೀರಿ​ಸ​ಲಿ​ದ್ದೇನೆ. ನನ್ನ ಹೊಸ ವೃತ್ತಿಬದುಕಿಗೆ ಪೋಷ​ಕರ ಬೆಂಬ​ಲವೂ ಇದೆ’ ಎಂದು ರೀನೆ ಹೇಳಿ​ಕೊಂಡಿ​ದ್ದಾರೆ.
undefined
ರೀನೆ ಗ್ರಾಸಿಯಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಫ್ಯಾನ್ಸ್ ಜತೆ ಮಾತನಾಡುತ್ತಿರುತ್ತಾರೆ. ಜೊತೆಗೆ ಅಭಿಮಾನಿಗಳಿಂದ ಸಲಹೆಯನ್ನು ಪಡೆಯುತ್ತಾರೆ. ಇನ್ನೂ ಕುತೂಹಲಕಾರಿಯಾದ ಸಂಗತಿಯೆಂದರೆ ಪೋರ್ನ್ ಪ್ರೊಫೆಸನ್ ಬಗ್ಗೆ ಅವರ ತಂದೆಯಿಂದಲೂ ಒಪ್ಪಿಗೆ ಪಡೆದಿದ್ದಾರಂತೆ.
undefined
14ನೇ ವರ್ಷಕ್ಕೆ ಕಾರ್‌ ರೇಸಿಂಗ್‌ಗೆ ಪಾದಾರ್ಪಣೆ ಮಾಡಿದ್ದ ರೀನೆ ಗ್ರಾಸಿಯಾ, ಆಸೀಸ್ ಜನರ ಪಾಲಿಗೆ ಕಾರ್ ಕ್ರೀಡೆಯಲ್ಲೆ ಹೊಸ ಆಶಾವಾದವನ್ನು ಹುಟ್ಟುಹಾಕಿದ್ದರು. ಇದಾಗಿ 10 ವರ್ಷಗಳಲ್ಲಿ ಕಾರ್ ರೇಸಿಂಗ್‌ಗೆ ಗುಡ್ ಬೈ ಹೇಳಿ ಪೂರ್ಣ ಪ್ರಮಾಣದ ನೀಲಿತಾರೆ ಗುರುತಿಸಿಕೊಂಡಿದ್ದಾರೆ.
undefined
ನೀಲಿ ಚಿತ್ರೋದ್ಯಮಕ್ಕೆ ಬಂದಿರುವ ಬಗ್ಗೆ ನನಗ್ಯಾವ ಪಶ್ಚಾತಾಪವೂ ಇಲ್ಲ. ನಾನು ಇದರಲ್ಲಿ ಸಂತೃಪ್ತಳಾಗಿದ್ದೇನೆ ಎನ್ನುತ್ತಾಳೆ ರೀನೆ ಗ್ರಾಸಿಯಾ..!
undefined
ಹಣ ಮಾಡುವುದಕ್ಕಾಗಿಯೇ ಈ ಫೀಲ್ಡಿಗೆ ಬರಲು ನಿರ್ಧರಿಸಿದೆ. ಇಲ್ಲಿಯವರೆಗೂ ನನ್ನ ತೀರ್ಮಾನ ನನಗೆ ಸರಿ ಎನಿಸಿದೆ ಎನ್ನುತ್ತಾಳೆ ಬ್ರಿಸ್ಬೇನ್ ಮೂಲದ ಮಾಜಿ ಆಟಗಾರ್ತಿ
undefined
click me!