Bishnoi bowling controversy: ಡ್ರೆಸ್ಸಿಂಗ್ ರೂಂ ಮಾತ್ರವಲ್ಲ, ಕ್ರಿಕೆಟ್ ವಲಯದಲ್ಲೂ ಒಂದು ಮಾತು ಕೇಳಿ ಬರುತ್ತಿದೆ, ಅದೇನೆಂದರೆ, ನಿನ್ನೆ ಸೋಲಿಗೆ ಬಿಷ್ಣೋಯಿ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ಅಯ್ಯರ್ ಮಾಡಿದ್ದೇನು? ಎಂಬ ಮಾತು ಹರಿದಾಡುತ್ತಿದೆ. ಏನಿದು ವಿವಾದ ಎನ್ನುವುದನ್ನು ನೋಡೊಣ ಬನ್ನಿ.
ನಿನ್ನೆ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟಿ-20 ಪಂದ್ಯದಲ್ಲಿ ಭಾರತದ ಕಳಪೆ ಬೌಲಿಂಗ್ ಪ್ರದರ್ಶನದಿಂದ ಸೋಲನುಭಭವಿಸಬೇಕಾಯಿತು. ಅಷ್ಟಕ್ಕೂ ಡ್ರೆಸ್ಸಿಂಗ್ ರೂಂ ಮಾತ್ರವಲ್ಲ, ಕ್ರಿಕೆಟ್ ವಲಯದಲ್ಲೂ ಒಂದು ಮಾತು ಕೇಳಿ ಬರುತ್ತಿದೆ, ಅದೇನೆಂದರೆ, ನಿನ್ನೆ ಸೋಲಿಗೆ ಬಿಷ್ಣೋಯಿ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ಅಯ್ಯರ್ ಮಾಡಿದ್ದೇನು? ಎಂಬ ಮಾತು ಹರಿದಾಡುತ್ತಿದೆ. ಏನಿದು ವಿವಾದ ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ.
26
ದೊಡ್ಡ ಹಿನ್ನಡೆ ಅನುಭವಿಸಿದ ಭಾರತ!
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿತು. 190 ರನ್ ಗಳಿಸಿದ್ದರೂ ಟೀಮ್ ಇಂಡಿಯಾ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಅಲ್ಲದೇ, ಎಲ್ಲರೂ ರವಿ ಬಿಷ್ಣೋಯ್ ಅವರು 17ನೇ ಒವರ್‌ನಲ್ಲಿ ನೀಡಿದ 29ರನ್ನಿಂದ ಸೋಲನುಭವಿಸಬೇಕಾಯಿತು ಎನ್ನುವ ಮಾತುಗಳ ಇದೀಗ ಕೇಳಿ ಬರುತ್ತಿವೆ.
36
ಅಯ್ಯರ್ ಮಾಡಿದ ತಪ್ಪಾದರೂ ಏನು?
ಅರ್ಷದೀಪ್ ಸಿಂಗ್ ಮತ್ತು ರವಿ ಬಿಷ್ಣೋಯ್ ತಲಾ 28 ರನ್‌ಗಳ ನೀಡಿ ದುಬಾರಿಯಾದರು. ಇದರ ನಡುವೆ, ಶ್ರೇಯಸ್ ಅಯ್ಯರ್ ಮಾಡಿದ ದೊಡ್ಡ ಮಿಸ್ಟೇಕ್ ಇದೀಗ ಬೆಳಕಿಗೆ ಬಂದಿದೆ. ಅದನ್ನು ಯಾರೂ ಗಮನಿಸಲಿಲ್ಲ ಎನ್ನುವ ಮಾತು ಫ್ಯಾನ್ಸ್ ವಲಯದಿಂದ ಕೇಳಿ ಬಂದಿದೆ.
ಈ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಟಾಪ್ 5 ಬೌಲರ್‌ಗಳ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರು. ಭಾರತಕ್ಕೆ ಅರ್ಷದೀಪ ಸಿಂಗ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ ಸೇರಿ ಐದು ಮುಂಚೂಣಿ ಬೌಲರ್‌ಗಳ ಆಯ್ಕೆಗಳು ಲಭ್ಯವಿದ್ದವು, ಅವರು ತಮ್ಮ ಓವರ್‌ಗಳನ್ನು ಪೂರ್ಣಗೊಳಿಸಿದರು. ಆದರೆ ಇನ್ನೊಬ್ಬರನ್ನು ಶ್ರೆಯಸ್ ಬಳಿಸಿಕೊಳ್ಳುವುದನ್ನೇ ಮರೆತರಾ? ಎನ್ನುವ ಪ್ರಶ್ನೆ ಕಕ್ರಿಕೆಟ್ ಲೋಕದಲ್ಲಿ ಉದ್ಭವಿಸಿದೆ.
56
ಆ ಬೌಲರ್‌ನನ್ನು ಶ್ರೇಯಸ್ ಬಳಸಲೇ ಇಲ್ಲ!
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಶಿವಂ ದುಬೆ ಅವರನ್ನು ತಂಡದಲ್ಲಿ ಕೇವಲ ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಮಾತ್ರ ಬಳಸಲಾಗುತ್ತಿತ್ತು, ಇದರಿಂದಾಗಿ ಅವರಿಗೆ ಒಂದೇ ಒಂದು ಓವರ್ ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಶ್ರೇಯಸ್ ಅಯ್ಯರ್ ಆರನೇ ಬೌಲರ್ ಅನ್ನು ಬಳಸಲೇ ಇಲ್ಲ. ಶಿವಂ ದುಬೆ ಕಾರ್ಯತಂತ್ರದ ಹಂತಗಳಲ್ಲಿ ವಿಕೆಟ್ ಪಡೆಯುವಲ್ಲಿ ನಿಪುಣರಗಿದ್ದಾರೆ. ಅದು ಅವರ ದಾಖಲೆ ನೋಡಿದರೆ ತಿಳಿಯುತ್ತದೆ.
66
ಸ್ಪಿನ್ನರ್‌ಗೆ ಅನೂಕುಲಕರವಾಗಿತ್ತಾ ಪಿಚ್?
ಈ ನಡುವೆ, ಟೀಮ್ ಇಂಡಿಯಾದ ದೊಡ್ಡ ಪ್ರದರ್ಶನ ಎಂದು ಪರಿಗಣಿಸಲಾದ ಶಿವಂ ದುಬೆ ನಿನ್ನೆ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅವರು ಏಳು ಎಸೆತಗಳನ್ನು ಎಸೆದು ಕೇವಲ 5ರನ್ ಗಳಿಸಿದರು. ಅದೇ ರೀತಿ, ಪಿಚ್ ಸ್ಪಿನ್ನರ್‌ಗೆ ಅನುಕೂಲಕರವಾಗಿದ್ದರಿಂದ ಶ್ರೇಯಸ್ ಅವರನ್ನು ಬೌಲಿಂಗ್‌ನಲ್ಲಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.