ದುಬಾರಿ ಕಾರು, ಐಷಾರಾಮಿ ಮನೆ... ಕ್ರೀಡಾಲೋಕದ ಸ್ಟೈಲಿಶ್ ಐಕಾನ್ ಸಾನಿಯಾ ಮಿರ್ಜಾ ಆಸ್ತಿ ಮೌಲ್ಯ ಎಷ್ಟು ಕೋಟಿ?

First Published | Sep 26, 2023, 12:13 PM IST

ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚೆಗೆ ಸ್ನೇಹಿತೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ವಿವಾಹದಲ್ಲಿ ಸೋದರಿಯೊಂದಿಗೆ ಮಿಂಚಿದ್ದರು. ಮೈದಾನದ ಹೊರಗೂ ತಮ್ಮ ಸೌಂದರ್ಯ ಹಾಗೂ ಸ್ಟೈಲ್‌ನಿಂದ ಮಿಂಚುತ್ತಿರುವ  ಈ ಕ್ರೀಡಾ ತಾರೆ ಕ್ರೀಡಾಲೋಕದ ಸ್ಟೈಲಿಶ್ ತಾರೆ ಎಂದರು ತಪ್ಪಾಗಲಾರದು., ಅವರು ಧರಿಸುವ ಮೂಗುತಿಯಿಂದ ಹಿಡಿದು ಪ್ರತಿ ಧಿರಿಸು ಕೂಡ ವಿಭಿನ್ನ ಸ್ಟೈಲ್ ಸ್ಟೇಟ್‌ಮೆಂಟ್ ನೀಡುತ್ತದೆ. ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸಾನಿಯಾ ಶ್ರೀಮಂತಿಕೆಯಲ್ಲೂ ಕಡಿಮೆ ಏನಿಲ್ಲ, ವಿದೇಶದಲ್ಲೂ ಮನೆಯನ್ನು ಹೊಂದಿರುವ ಈ ಸ್ಟೈಲಿಸ್ಟ್‌ ಸ್ಪೋರ್ಟ್ಸ್‌ ವುಮನ್ ಹೊಂದಿರುವ ಆಸ್ತಿ ವಿವರ ಇಲ್ಲಿದೆ ನೋಡಿ... 

sania mirza

ಐಷಾರಾಮಿ ಮನೆಯಿಂದ ಪ್ರಭಾವಶಾಲಿ ಕಾರು ಸಂಗ್ರಹದವರೆಗೆ ಸಾಕಷ್ಟು ದುಬಾರಿ ಆಸ್ತಿಯನ್ನು ಹೊಂದಿರುವ  ಸಾನಿಯಾ ಮಿರ್ಜಾ ಅವರ ನಿವ್ವಳ ಮೌಲ್ಯ 2023ರ ವೇಳೆಗೆ  26 ಮಿಲಿಯನ್‌ ಡಾಲರ್‌, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 210 ಕೋಟಿ, ಓರ್ವ ಟೆನ್ನಿಸ್ ಆಟಗಾರ್ತಿಯಾಗಿ ಆರಂಭವಾದ ಅವರ ಜರ್ನಿ ಅವರ ವಿಭಿನ್ನ ಸ್ಟೈಲ್‌ನಿಂದಾಗಿ ಹಲವರನ್ನು ಸೆಳೆದಿದ್ದು, ಹಲವು  ಉತ್ಪನ್ನಗಳಿಗೆ ಅಂಬಾಸಿಡರ್ ಆಗುವ ಮೂಲಕ ಅವರ ಆದಾಯ ಗಣನೀಯವಾಗಿ ಏರಿಕೆ ಆಗಿದೆ.

sania mirza

2003ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಸಾನಿಯಾ ಮಿರ್ಜಾ ಟೆನ್ನಿಸ್ ಲೋಕದಲ್ಲಿ ಇಂದು ಅಚ್ಚಳಿಯದ ಹೆಸರಾಗಿ ಉಳಿದಿದ್ದಾರೆ.  ಒಮ್ಮೆ ಮಹಿಳಾ ಡಬಲ್ಸ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಹೊಂದಿದ್ದ ಸಾನಿಯಾ, ಭಾರತದ ಅತ್ಯಂತ ಯಶಸ್ವಿ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. 

Tap to resize

sania mirza

ಸಾನಿಯಾ ಅವರ ಹೆಚ್ಚಿನ ಗಳಿಕೆಯೂ ಜಾಹೀರಾತಿನಿಂದ ಹಾಗೂ ವೈಯಕ್ತಿಕ ಹೂಡಿಕೆಗಳಿಂದ ಬರುತ್ತಿದೆ. ಇದರ ಜೊತೆಗೆ 'ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿ' ಯಿಂದಲು ಉತ್ತಮ ಆದಾಯ ಬರುತ್ತಿದೆ., ಇದಕ್ಕಾಗಿ ಕೆಲವು ಟಾಪ್‌ ಸ್ಪೋರ್ಟ್ಸ್‌ ಬ್ರಾಂಡ್‌ಗಳು ಮತ್ತು ಉದ್ಯಮಗಳೊಂದಿಗೆ ಅವರು ಕೈ ಜೋಡಿಸಿದ್ದಾರೆ. 

sania mirza

ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಸಾನಿಯಾ ಹೂಡಿಕೆ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ಅಂದಾಜು 13 ಕೋಟಿ ಮೌಲ್ಯದ ಐಷಾರಾಮಿ ಮನೆ ಹೊಂದಿರುವ ಸಾನಿಯಾ, ಹಾಗೆಯೇ ದುಬೈನ ಖಾಸಗಿ ದ್ವೀಪವೊಂದರಲ್ಲಿ ಸುಂದರವಾದ ಬಂಗ್ಲೆಯನ್ನು ಖರೀದಿಸಿದ್ದಾರೆ. 

sania mirza

ಇದರ ಜೊತೆಗೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ರೇಂಜ್ ರೋವರ್, ಮರ್ಸಿಡಿಸ್ ಬೆಂಝ್, ಆಡಿ, ಮತ್ತು BMW ನಂತಹ  ಐಷಾರಾಮಿ  ಬ್ರಾಂಡ್‌ಗಳ ಕಾರುಗಳನ್ನು  ಸಾನಿಯಾ ಹೊಂದಿದ್ದು,  ಅವರ ಆರ್ಥಿಕ ಯಶಸ್ಸಿಗೆ ಅವರ ಕಾರು ಸಂಗ್ರಹಣೆ ಸಾಕ್ಷಿಯಾಗಿದೆ. ಅಂದಾಜು ರೂ. 3 ಕೋಟಿ ಮೌಲ್ಯದ ಕಾರುಗಳನ್ನು ಅವರು ಹೊಂದಿದ್ದಾರೆ. 

sania mirza

ಈ ಎಲ್ಲಾ ಸಂಪತ್ತುಗಳನ್ನು ಮೀರಿ ಸಾನಿಯಾ ಮಿರ್ಜಾ  ಗಣನೀಯ ಮಟ್ಟದ ವಾರ್ಷಿಕ ಆದಾಯವನ್ನು ಗಳಿಸುತ್ತಿದ್ದಾರೆ. ಕ್ರೀಡಾ ವೃತ್ತಿಯಿಂದ 6  ಕೋಟಿ ಮತ್ತು ಹೆಚ್ಚುವರಿಯಾಗಿ ತಿಂಗಳಿಗೆ 50 ಲಕ್ಷ ಹಣವನ್ನು ಅವರು ಸಂಪಾದನೆ ಮಾಡುತ್ತಿದ್ದಾರೆ. 

sania mirza

ಜಾಗತಿಕ ಟೆನ್ನಿಸ್ ಅಕಾಡೆಮಿ ಟೂರ್‌ನಿಂದಲೇ ಅವರು 6,963,060 ಡಾಲರ್‌ವರೆಗೆ ಗಳಿಕೆ ಮಾಡುತ್ತಾರೆ. ಇದರ ಜೊತೆಗೆ ಅವರು ಕ್ರೀಡಾಲೋಕಕ್ಕೆ ನೀಡಿದ ಹಲವಾರು ಕೊಡುಗೆಗಳು ಅವರ ಆರ್ಥಿಕ ಯಶಸ್ಸಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ.

sania mirza

ಇದರ ಜೊತೆಗೆ ಸಾನಿಯಾ ಮಿರ್ಜಾ  ಫೇಮಸ್ ಬ್ರಾಂಡ್‌ಗಳಾದ ನೈಕ್, ಅಡಿಡಾಸ್, ಸ್ಪ್ರೈಟ್, ಮತ್ತು ಬಾಂಡ್ ಅಥವಾ ಬ್ಯಾಂಡ್‌ನಂತಹ ಹಲವು ಜಾಗತಿಕ ಬ್ರಾಂಡ್‌ಗಳಿಗೆ ಅಂಬಾಸಿಡರ್ ಆಗಿ ಕೆಲಸ ಮಾಡುತ್ತಿದ್ದು, ಇದರಿಂದಲೂ ಅವರ ಆದಾಯ ಏರಿಕೆಯಾಗಿದೆ. 

sania mirza

ಸಂಪತ್ತಿನ ಸಂಗ್ರಹದ ಜೊತೆಗೆ ಸಾನಿಯಾ ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ಭಾಗಿಯಾಗಿದ್ದು, ಕೋವಿಡ್ ಸಮಯದಲ್ಲಿ ಅಗತ್ಯವಿರುವವರಿಗೆ ಆಕ್ಸಿಜನ್ ಸಿಲಿಂಡರ್ ನೀಡುವ ಮೂಲಕ ಸಾಮಾಜಿಕ ಬದ್ಧತೆ ಮೆರೆದಿದ್ದರು. 

sania mirza

ಕ್ರೀಡಾ ಲೋಕದಲ್ಲಿ ಮಾಡಿದ ಸಾಧನೆಗಾಗಿ ಅವರು ಅರ್ಜುನ ಪ್ರಶಸ್ತಿ, ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. 

sania mirza

ಇತ್ತೀಚೆಗೆ ಸ್ನೇಹಿತೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ವಿವಾಹದಲ್ಲಿ ಸೋದರಿಯೊಂದಿಗೆ ಸಾನಿಯಾ ಮಿಂಚಿದ್ದರು. ಮೈದಾನದ ಹೊರಗೂ ತಮ್ಮ ಸೌಂದರ್ಯ ಹಾಗೂ ಸ್ಟೈಲ್‌ನಿಂದ ಮಿಂಚುತ್ತಿರುವ  ಈ ಕ್ರೀಡಾ ತಾರೆ ಕ್ರೀಡಾಲೋಕದ ಸ್ಟೈಲಿಶ್ ತಾರೆ ಎಂದರು ತಪ್ಪಾಗಲಾರದು.,

sania mirza

ಇನ್ನು ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಮೂಲತಃ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಜನಿಸಿದ ಸಾನಿಯಾ ಮದುವೆಯಾಗಿದ್ದು, ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್‌ನನ್ನು.

sania mirza

ಈ ದಂಪತಿಗೆ ಓರ್ವ ಮುದ್ದಾದ ಗಂಡು ಮಗುವಿದ್ದು, ಸಾನಿಯಾ ಹೆಚ್ಚಾಗಿ ದುಬೈ ಹಾಗೂ ಹೈದರಾಬಾದ್ ಮಧ್ಯೆ ಪ್ರಯಾಣಿಸುತ್ತಿರುತ್ತಾರೆ. ಇತ್ತೀಚೆಗೆ ಸಾನಿಯಾ ಹಾಗೂ ಶೋಯೇಬ್ ತಮ್ಮ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ್ದು, ಡಿವೋರ್ಸ್‌ ಪಡೆದಿದ್ದಾರೆ ಎಂದು ಸುದ್ದಿಯಾಗಿದ್ದು, ಆದರೆ ಈ ಗಾಸಿಪ್‌ಗೆ ಇಬ್ಬರೂ ಉತ್ತರಿಸಿಲ್ಲ.

Latest Videos

click me!