'ಎಂತ ಹೊಡೆತ..!': ಗಿಲ್ ಬ್ಯಾಟಿಂಗ್‌ಗೆ ತೆಂಡುಲ್ಕರ್ ಪುತ್ರಿ ಸಾರಾ ದಿಲ್ ಖುಷ್..!

Published : Sep 25, 2023, 03:53 PM ISTUpdated : Sep 25, 2023, 03:54 PM IST

ಇಂದೋರ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಸಿಡಿಲಬ್ಬರದ ಶತಕ ಬಾರಿಸುವ ಮೂಲಕ ಮತ್ತೊಮ್ಮೆ ಟಾಕ್ ಆಫ್‌ ದಿ ಟೌನ್ ಎನಿಸಿದ್ದಾರೆ. ಹೀಗಿರುವಾಗಲೇ ಸಚಿನ್ ತೆಂಡುಲ್ಕರ್ ಪುತ್ರಿ ಮಾಡಿದ ಟ್ವೀಟ್ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ  

PREV
17
'ಎಂತ ಹೊಡೆತ..!': ಗಿಲ್ ಬ್ಯಾಟಿಂಗ್‌ಗೆ ತೆಂಡುಲ್ಕರ್ ಪುತ್ರಿ ಸಾರಾ ದಿಲ್ ಖುಷ್..!

ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರ ಪುತ್ರಿ ಸಾರಾ ತೆಂಡುಲ್ಕರ್ ಹಾಗೂ ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವಿಚಾರ ಗುಟ್ಟಾಗಿ ಉಳಿದಿಲ್ಲ.
 

27

ಹಾಗಂತ ಈ ಜೋಡಿ ಎಲ್ಲೂ ಈ ವಿಚಾರವಾಗಿ ತುಟಿಬಿಚ್ಚಿಲ್ಲವಾದರೂ, ಸೋಷಿಯಲ್ ಮೀಡಿಯಾದಲ್ಲಿ ಅವರು ಹಾಕುವ ಪೋಸ್ಟ್‌ಗಳು ನೆಟ್ಟಿಗರ ಗಮನ ಸೆಳೆಯುತ್ತಾ ಬಂದಿರುವುದಂತೂ ಸುಳ್ಳಲ್ಲ.
 

37

ಹೀಗಿರುವಾಗಲೇ ಆಸ್ಟ್ರೇಲಿಯಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್‌ ಅದ್ಭುತ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಟ್ವೀಟ್ ಮಾಡಿದ ಸಾರಾ ತೆಂಡುಲ್ಕರ್, ತುಂಬಾ ಚೆನ್ನಾಗಿ ಆಡಿದಿರಾ ಶುಭ್‌ಮನ್ ಗಿಲ್ & ಟೀಂ ಇಂಡಿಯಾ ಎಂದು ಟ್ವೀಟ್ ಮಾಡುವ ಮೂಲಕ ತನ್ನ ಒಲವು ವ್ಯಕ್ತಪಡಿಸಿದ್ದರು.

47

ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಶುಭ್‌ಮನ್ ಗಿಲ್ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದರು. ಗಿಲ್ 97 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 104 ರನ್ ಚಚ್ಚಿದ್ದರು. ಇದು ಗಿಲ್ ಬಾರಿಸಿದ ಆರನೇ ಏಕದಿನ ಶತಕವಾಗಿದೆ.
 

57

ಇದೀಗ ಗಿಲ್ ಮನಮೋಹಕ ಶತಕ ಸಿಡಿಸಿದ ಬೆನ್ನಲ್ಲೇ ಮತ್ತೊಮ್ಮೆ ಟ್ವೀಟ್ ಮಾಡಿರುವ ಸಾರಾ ತೆಂಡುಲ್ಕರ್, "ಎಂತಹ ಹೊಡೆತ ಶುಭ್‌ಮನ್‌ ಗಿಲ್‌ ಎಂದು ಗಿಲ್ ಶತಕ ಸಿಡಿಸಿದ ಫೋಟೋವನ್ನು ಶೇರ್‌ ಮಾಡಿ ಗಮನ ಸೆಳೆದಿದ್ದಾರೆ.

67

ಎರಡನೇ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಮಾತ್ರವಲ್ಲದೇ ಮುಂಬೈ ಮೂಲದವರೇ ಆದ ಇನ್ನೂ ಅವಿವಾಹಿತರಾದ ಶ್ರೇಯಸ್ ಅಯ್ಯರ್ ಶತಕ ಸಿಡಿಸಿದ್ದರೂ ಅವರಿಗೆ ವಿಶ್ ಮಾಡದೇ ಗಿಲ್‌ಗೆ ವಿಶ್‌ ಮಾಡಿರುವುದು ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
 

77

ಈ ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿನ ಆಕ್ಟಿವಿಟಿಗಳನ್ನೆಲ್ಲಾ ಗಮನಿಸಿದರೆ ಶುಭ್‌ಮನ್ ಗಿಲ್ ಹಾಗೂ ಸಾರಾ ತೆಂಡುಲ್ಕರ್ ನಡುವೆ ಏನೋ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ ಎನ್ನುವುದಂತೂ ಸುಳ್ಳಲ್ಲ.
 

Read more Photos on
click me!

Recommended Stories