ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವಿನ 14 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕಿಗೆ ತೆರೆ ಬಿದ್ದಿದೆ. ಕೆಲದಿನಗಳ ಹಿಂದಷ್ಟೇ ಈ ಜೋಡಿ ತಲಾಕ್ ಪಡೆದುಕೊಂಡಿದ್ದರು.
ಶೋಯೆಬ್ ಮಲಿಕ್ ಭಾರತದ ಮೂಗುತಿ ಸುಂದರಿ ಸಾನಿಯಾ ಮಿರ್ಜಾಗೆ ತಲಾಖ್ ನೀಡುತ್ತಿದ್ದಂತೆಯೇ ಭಾರತ ಹಾಗೂ ಪಾಕಿಸ್ತಾನದಲ್ಲಿ ಶೋಯೆಬ್ ಮಾಡಿದ್ದು ತಪ್ಪು ಎನ್ನುವಂತಹ ಮಾತುಗಳು ಕೇಳಿ ಬಂದಿವೆ
ಇದೆಲ್ಲದರ ನಡುವೆ ಸಾನಿಯಾ ಮಿರ್ಜಾ, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಗುಲಾಬಿ ಬಣ್ಣದ ಡ್ರೆಸ್ ತೊಟ್ಟು ಹಾಕಿರುವ ಪೋಸ್ಟ್ ಇದೀಗ ಸಾಕಷ್ಟು ವೈರಲ್ ಆಗಲಾರಂಭಿಸಿದೆ.
ಹೌದು, ಸಾನಿಯಾ ಮಿರ್ಜಾ ಗುಲಾಬಿ ಬಣ್ಣದ ಡ್ರೆಸ್ ಜತೆಗೆ, 'ಸೂರ್ಯನ ಕಿರಣಗಳು ಹಾಗೂ ಕೊಂಚ ಗುಲಾಬಿ ಬಣ್ಣದ ಜತೆ ಏನೂ ಬೇಕಿದ್ದರೂ ಸಂಭವಿಸಬಹುದು ಎಂದು ಕ್ಯಾಪ್ಶನ್ ನೀಡಿದ್ದಾರೆ.
ಸಾನಿಯಾ ಮಿರ್ಜಾ ಅವರು ಮಾಡಿರುವ ಈ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಪಾಕಿಸ್ತಾನದ ನಟಿ ಮಾವ್ರಾ ಖಾನ್ ಬೆಂಕಿ ಎಮೋಜಿಯ ಪೋಸ್ಟ್ ಕಾಮೆಂಟ್ ಮಾಡಿದ್ದು, ಈ ಕಾಮೆಂಟ್ ಕೂಡಾ ವೈರಲ್ ಆಗಿದೆ.
Sania Mirza
ಸಾನಿಯಾ ಮಿರ್ಜಾ ಹಾಕಿರುವ ಈ ಪೋಸ್ಟ್ ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಸಾನಿಯಾ ಮಿರ್ಜಾ ಮತ್ತೊಂದು ಮದುವೆಗೆ ಸಜ್ಜಾಗಿದ್ದಾರಾ ಎನ್ನುವ ಕುರಿತಾಗಿಯೂ ಚರ್ಚೆಗಳು ಆರಂಭವಾಗಿವೆ.
ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ 2010ರಲ್ಲಿ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಜೋಡಿಗೆ ಇಜಾನ್ ಎನ್ನುವ ಗಂಡು ಮಗುವಿದೆ.
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ 2003ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಆದರೆ ಆಗ ಸಾನಿಯಾಗೆ ಮಲಿಕ್ ಇಷ್ಟವಾಗಿರಲಿಲ್ಲ. ಇನ್ನು ಇದಾದ ಬಳಿಕ 2009ರಲ್ಲಿ ಆಸ್ಟ್ರೇಲಿಯಾದ ಹೋಬಾರ್ಟ್‌ನಲ್ಲಿ ಸಾನಿಯಾ-ಶೋಯೆಬ್ ಎರಡನೇ ಬಾರಿಗೆ ಭೇಟಿಯಾದರು. ಇದಾದ ಬಳಿಕ ಇಬ್ಬರ ನಡುವೆ ಗೆಳೆತನ ಬೆಳೆಯಿತು.
ಸಾನಿಯಾ ಮಿರ್ಜಾ ಅವರಿಗೆ ತಲಾಖ್ ನೀಡಿದ ಬಳಿಕ ಶೋಯೆಬ್ ಮಲಿಕ್ ಪಾಕಿಸ್ತಾನ ನಟಿ ಸನಾ ಜಾವೆದ್ ಅವರನ್ನು ಮದುವೆಯಾಗಿದ್ದಾರೆ. ಇದು ಶೋಯೆಬ್ ಮಲಿಕ್‌ಗೆ ಮೂರನೇ ಮದುವೆಯಾದರೆ, ಸನಾ ಜಾವೆದ್‌ಗೆ ಎರಡನೇ ಮದುವೆಯಾಗಿದೆ.