ಎಣ್ಣೆ ಹೊಡೆದು ಡ್ಯಾಮೇಜ್‌ ಆಗಿರುವ ಲಿವರ್‌ಗೆ ಮರು ಜೀವ ಕೊಡುವ ಈ ಹಣ್ಣು; ಯಾವುದು?

Published : Apr 10, 2026, 04:29 PM IST

Alcoholic Liver Damage: ಕೆಲವರಂತೂ ಅತಿಯಾದ ಮದ್ಯಪಾನ ಮಾಡುತ್ತಾರೆ. ಖುಷಿಗೂ, ದುಃಖಕ್ಕೂ ಇವರಿಗೆ ಮದ್ಯ ಬೇಕು. ಆದರೆ ಇದರಿಂದ ಲಿವರ್‌ನಲ್ಲಿ ಕಿಣ್ವಗಳ (enzymes) ವ್ಯತ್ಯಯ ಉಂಟಾಗುವುದು. ಅಂಜೂರ ಈ ಕಿಣ್ವಗಳನ್ನು ಸಮತೋಲನಕ್ಕೆ ತರಲು ಸಹಾಯ ಮಾಡುವುದು. 

PREV
14
ಆಂಟಿ-ಆಕ್ಸಿಡೆಂಟ್‌ಗಳ ಆಗರ

ಅಂಜೂರದಲ್ಲಿರುವ ಸಮೃದ್ಧ ಆಂಟಿ-ಆಕ್ಸಿಡೆಂಟ್‌ಗಳಿಂದಾಗಿ ಲಿವರ್ ಕೋಶಗಳನ್ನು ಹಾನಿಯಿಂದ ರಕ್ಷಣೆ ಮಾಡುತ್ತದೆ, ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.

24
ಕೊಬ್ಬಿನಂಶ ನಿಯಂತ್ರಣ

ಲಿವರ್‌ನಲ್ಲಿ ಶೇಖರಣೆಯಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು, 'ಫ್ಯಾಟಿ ಲಿವರ್' ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡುವುದು

34
ಬಳಸುವ ವಿಧಾನ

2-3 ಒಣ ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ತಾಜಾ ಅಂಜೂರದ ಹಣ್ಣನ್ನು ನೇರವಾಗಿ ತಿನ್ನಲೂಬಹುದು.

44
ಗಮನಿಸಬೇಕಾದ ಅಂಶಗಳು

ಅಂಜೂರ ಹಣ್ಣು ಲಿವರ್ ರಿಪೇರಿ ಮಾಡಲು ಸಹಾಯ ಮಾಡುವುದು, ಆದರೆ ನೀವು ಮದ್ಯಪಾನವನ್ನು ಮುಂದುವರಿಸುತ್ತ, ಹಣ್ಣು ತಿಂದರೆ ಅದರಿಂದ ಪ್ರಯೋಜನ ಸಿಗುವುದಿಲ್ಲ. ಲಿವರ್ ಸರಿಯಾಗಲು ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ಗಮನಿಸಿ: ಈ ಮಾಹಿತಿಯು ಕೇವಲ ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ. ಹೆಚ್ಚಿನ ಮಾಹಿತಿಗಾಗಿ ಅಥವಾ ಸಮಸ್ಯೆಗಳಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Read more Photos on
click me!

Recommended Stories