ಮೈಸೂರಿನಲ್ಲಿ ಕಾಸ್ಮೋಸ್ ಪ್ಲಾನಿಟೋರಿಯಂ ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ. ಇದು ಭಾರತದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯ ವಾಗಿದ್ದು ಎಲ್ಇಡಿ ಡೋಮ್ 15 ಡಿಗ್ರಿ ಕೋನದಲ್ಲಿ ಓರೆಯಾಗಿದ್ದು (ಟಿಲ್ಡೆಡ್), ದೇಶದ ಮೊದಲ ‘ಟಿಲ್ಟೆಡ್ ಎಲ್ಇಡಿ ತಾರಾಲಯ’ದ ವಿಶೇಷತೆಗಳ ಬಗ್ಗೆ ಇಲ್ಲಿ ನೀಡಲಾಗಿದೆ.
ಮೈಸೂರಿನಲ್ಲಿ ‘ಕಾಸ್ಮೋಸ್-ಮೈಸೂರು ತಾರಾಲಯ’ವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದು ಭಾರತದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯ. ಎಲ್ಇಡಿ ಡೋಮ್ 15 ಡಿಗ್ರಿ ಕೋನದಲ್ಲಿ ಓರೆಯಾಗಿದ್ದು (ಟಿಲ್ಡೆಡ್), ವೀಕ್ಷಕರಿಗೆ ಅತ್ಯಂತ ಉತ್ತಮ ಹಾಗೂ ನೈಜ ಆಕಾಶಕಾಯಗಳ ಅನುಭವ ನೀಡುತ್ತದೆ. ಇದು ಖಗೋಳ ಅಧ್ಯಯನಕ್ಕೆ ಹೊಸ ದಿಕ್ಕು ನೀಡಲಿದೆ. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯಪಾಲೆ ಡಾ. ಸುಧಾ ಯಾದವ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ , ಸಂಸದ ಯಧುವೀರ್ ಒಡೆಯರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಯೋಜನೆಯ ಉದ್ದೇಶ ರೂಪುರೇಷೆ ಮತ್ತು ಪ್ಲಾನಿಟೇರಿಯಂ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಪ್ರಧಾನಿ ಅವರಿಗೆ ಇಂಚಿಚೂ ಪರಿಚಯ ಮಾಡಿದರು. ಬಳಿಕ ಗಣ್ಯರೆಲ್ಲರೂ ತಾರಾಲಯದಲ್ಲಿ ಕೂತು ಡೆಮೋ ವೀಕ್ಷಿಸಿದರು.
ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ (IIA) ಮೈಸೂರು ವಿಶ್ವವಿದ್ಯಾಲಯದೊಂದಿಗೆ ಮಾಡಿಕೊಂಡ ಒಪ್ಪಂದದ ಅನ್ವಯ, ವಿವಿಗೆ ಸೇರಿದ 3 ಎಕರೆ ಪ್ರದೇಶದಲ್ಲಿ ಈ ಬೃಹತ್ ಯೋಜನೆಯನ್ನು ಸಾಕಾರಗೊಳಿಸಿದೆ.
ಅತ್ಯಾಧುನಿಕ ತಂತ್ರಜ್ಞಾನ: 15 ಮೀಟರ್ ವ್ಯಾಸ ಹೊಂದಿರುವ ಈ ಗುಮ್ಮಟವು 15 ಡಿಗ್ರಿ ಕೋನದಲ್ಲಿ ಓರೆಯಾಗಿದ್ದು, ವೀಕ್ಷಕರಿಗೆ ಅಂತರಿಕ್ಷದ ನೈಜ ಅನುಭವ ನೀಡಲಿದೆ. ಇದರಲ್ಲಿ 8ಕೆ (8K) ರೆಸಲ್ಯೂಶನ್ ಹಾಗೂ 42 ಮೆಗಾಪಿಕ್ಸೆಲ್ ಸಾಮರ್ಥ್ಯದ ಅತ್ಯುನ್ನತ ದೃಶ್ಯ ಪ್ರದರ್ಶನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ವಿಶ್ವದರ್ಜೆಯ ಸೌಲಭ್ಯಗಳು: ತಾರಾಲಯದ ಆವರಣದಲ್ಲಿ ತಲಾ 160 ಆಸನಗಳ ಸಾಮರ್ಥ್ಯವಿರುವ ಸುಸಜ್ಜಿತ ಸ್ಕೈ ಥಿಯೇಟರ್ ಮತ್ತು ಉಪನ್ಯಾಸ ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಪ್ರಯೋಗಾಲಯ ಸೌಲಭ್ಯವುಳ್ಳ ತರಗತಿಗಳು, ಕಂಪ್ಯೂಟರ್ ತರಬೇತಿ ಕೇಂದ್ರ, ವಸ್ತು ಸಂಗ್ರಹಾಲಯ, ಪ್ರದರ್ಶನ ಸಭಾಂಗಣ, ಹೊರಾಂಗಣ ಪ್ರದರ್ಶನ ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.
36
ಅನುದಾನ ಮತ್ತು ಸಂಸ್ಥೆಗಳ ಸಹಯೋಗ
ಈ ಮಹತ್ವಾಕಾಂಕ್ಷಿ ವೈಜ್ಞಾನಿಕ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ರಾಜ್ಯಸಭಾ ಸದಸ್ಯರ ನಿಧಿಯಿಂದ (MPLADS) ಪ್ರಮುಖ ಆರ್ಥಿಕ ನೆರವು ಲಭಿಸಿದೆ. ಇದರೊಂದಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪರಮಾಣು ಶಕ್ತಿ ಇಲಾಖೆ ಹಾಗೂ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಗಳು ಈ ಯೋಜನೆಗೆ ಕೈಜೋಡಿಸಿವೆ.
ಸ್ಕೈ ಥಿಯೇಟರ್ನಲ್ಲಿ ‘ನಮ್ಮ ಮನೆ, ನಮ್ಮ ಕಾಸ್ಮಾಸ್’ ವಿಶೇಷ ಪ್ರದರ್ಶನ
ಸ್ಕೈ ಥಿಯೇಟರ್ನಲ್ಲಿ ನಡೆಯುವ ಪ್ರತಿಯೊಂದು ಖಗೋಳಶಾಸ್ತ್ರ ಪ್ರದರ್ಶನಕ್ಕೂ ಮುನ್ನ, ಮೈಸೂರಿನ ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಪರಂಪರೆ ಹಾಗೂ ವಿಜ್ಞಾನ ಮತ್ತು ಖಗೋಳಶಾಸ್ತ್ರದೊಂದಿಗೆ ನಗರಕ್ಕಿರುವ ನಂಟನ್ನು ಪರಿಚಯಿಸುವ ‘ನಮ್ಮ ಮನೆ, ನಮ್ಮ ಕಾಸ್ಮಾಸ್’ ಎಂಬ ವಿಶೇಷ ಪರಿಚಯಾತ್ಮಕ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಆಳವಾದ ಸಂಶೋಧನಾ ಮಾಹಿತಿ, ಆಕರ್ಷಕ ನಿರೂಪಣೆ, ಸುಮಧುರ ಸಂಗೀತ ಮತ್ತು ಅದ್ಭುತ ದೃಶ್ಯ ವೈಭವವನ್ನು ಒಳಗೊಂಡಿರುವ ಈ ಚಿತ್ರವು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.
56
ಸಾರ್ವಜನಿಕ ಒಳಗೊಳ್ಳುವಿಕೆ ಮತ್ತು ಪ್ರಾಚೀನ ಹಸ್ತಪ್ರತಿಗಳ ಸಂಶೋಧನೆ
2022ರಿಂದಲೇ ಮೈಸೂರು ಭಾಗದಲ್ಲಿ ನಡೆದುಕೊಂಡು ಬಂದಿರುವ ವಿವಿಧ ಸಾರ್ವಜನಿಕ ಸಹಭಾಗಿತ್ವದ ಕಾರ್ಯಕ್ರಮಗಳ ತಳಹದಿಯ ಮೇಲೆ ಈ ತಾರಾಲಯ ರೂಪುಗೊಂಡಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿ ಮೂಡಿಸುವ ಜಾಗೃತಿ ಕಾರ್ಯಕ್ರಮಗಳು, ದೂರದರ್ಶಕದ (ಟೆಲಿಸ್ಕೋಪ್) ಮೂಲಕ ರಾತ್ರಿ ಆಕಾಶ ವೀಕ್ಷಣೆ, ಪ್ರಾಯೋಗಿಕ ವಿಜ್ಞಾನ ಚಟುವಟಿಕೆಗಳು, ನಾಗರಿಕ ವಿಜ್ಞಾನ ಉಪಕ್ರಮಗಳು ಹಾಗೂ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.
66
ವಿಜ್ಞಾನ ಮತ್ತು ಸಮಾಜವನ್ನು ಬೆಸೆಯುವ ಪ್ರಮುಖ ಜ್ಞಾನಕೇಂದ್ರ
ಪ್ರಾಚೀನ ಭಾರತೀಯ ಖಗೋಳಶಾಸ್ತ್ರದ ಇತಿಹಾಸದಿಂದ ಹಿಡಿದು ಆಧುನಿಕ ಖಗೋಳ ಭೌತಶಾಸ್ತ್ರದ ಬೆಳವಣಿಗೆಗಳನ್ನು ತಿಳಿಸುವ ಸ್ಥಿರ ಮತ್ತು ಚಲನಶೀಲ ಮಾದರಿಗಳು ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಾರ್ವಜನಿಕರ ಜ್ಞಾನಾರ್ಜನೆಗೆ ತೆರೆದುಕೊಂಡಿವೆ. ಇದರ ಜೊತೆಗೆ, ಪ್ರಾಚ್ಯವಿದ್ಯಾ ಸಂಶೋಧನಾಲಯ ವಿಭಾಗದ ಸಹಯೋಗದಲ್ಲಿ ಮಧ್ಯಕಾಲೀನ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಹಸ್ತಪ್ರತಿಗಳನ್ನು ಗುರುತಿಸಿ, ಅನುವಾದಿಸಿ ವಿಶ್ಲೇಷಿಸುವ ಮಹತ್ವದ ಕಾರ್ಯವೂ ನಡೆದಿದೆ. ಈವರೆಗೆ ಸುಮಾರು 50 ಅಪರೂಪದ ಹಸ್ತಪ್ರತಿಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ನಾಲ್ಕು ಹಸ್ತಪ್ರತಿಗಳನ್ನು ಮೊದಲ ಬಾರಿಗೆ ಸವಿಸ್ತಾರವಾಗಿ ವಿಶ್ಲೇಷಿಸಲಾಗಿದೆ. ಒಟ್ಟಾರೆಯಾಗಿ, ಕಾಸ್ಮಾಸ್-ಮೈಸೂರು ತಾರಾಲಯವು ವಿಜ್ಞಾನ ಮತ್ತು ಸಮಾಜವನ್ನು ಬೆಸೆಯುವ ಪ್ರಮುಖ ಜ್ಞಾನಕೇಂದ್ರವಾಗಿ ಹೊರಹೊಮ್ಮಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.