Moon Recession: ದೂರ ಆಗುತ್ತಿರೋದ್ಯಾಕೆ ಪ್ರೀತಿಯ ಚಂದಮಾಮಾ? ದೂರವಾಗಿದೆಷ್ಟು ಚಂದ್ರ?

Published : Jul 28, 2026, 02:23 PM IST

ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನು ಪ್ರತಿವರ್ಷ ಭೂಮಿಯಿಂದ ನಿಧಾನವಾಗಿ ದೂರ ಸರಿಯುತ್ತಿದ್ದಾನೆ. ಚಂದ್ರನು ಭೂಮಿಯಿಂದ ಎಷ್ಟು ದೂರವಾಗಿದ್ದಾನೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಚಂದ್ರನ ಕುರಿತ ವಿಶೇಷ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

PREV
15
ದೂರ ಆಗುತ್ತಿರೋದ್ಯಾಕೆ ಚಂದಮಾಮಾ?

ನಮ್ಮೆಲ್ಲರ ಪ್ರೀತಿಯ ಚಂದಮಾಮಾ (Moon) ಶತಕೋಟಿ ವರ್ಷಗಳಿಂದ ಭೂಮಿಗೆ ಹತ್ತಿರವಾಗಿರುವ ಖಗೋಳಲೋಕದ ಗೆಳೆಯ. ಚಂದ್ರನು ಭೂಮಿಯ ಉಪಗ್ರಹವಾಗಿದ್ದು, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭೂಮಿಯಿಂದ ಚಂದ್ರ ಹಂತ ಹಂತವಾಗಿ ದೂರವಾಗುತ್ತಿದ್ದಾನೆ. ಬರೀಗಣ್ಣಿಯಿಂದ ಇದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ವಿಜ್ಞಾನಿಗಳು ದೂರವಾಗುತ್ತಿರುವ ಚಂದ್ರನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

25
ಭೂಮಿಯ ವೇಗ

ಚಂದ್ರನ ಗುರುತ್ವಾಕರ್ಷಣೆಯಿಂದಾಗಿ ಸಮುದ್ರದಲ್ಲಿ ಉಬ್ಬರವಿಳಿತ ಉಂಟಾಗುತ್ತದೆ. ಚಂದ್ರನ ಕಕ್ಷೆಗಿಂತ ಭೂಮಿ ವೇಗದಿಂದ ತಿರುಗುವ ಕಾರಣ,ಮ ಉಬ್ಬರವಿಳಿತದ ಶಕ್ತಿ ಚಂದ್ರನಿಗೆ ವರ್ಗಾವಣೆಯಾಗುತ್ತದೆ. ಭೂಮಿಯಿಂದ ವರ್ಗಾವಣೆಯಾದ ಶಕ್ತಿಯು ಚಂದ್ರನನ್ನು ಹೆಚ್ಚಿನ ಕಕ್ಷೆಗೆ ತಳ್ಳುತ್ತವೆ.

35
ಕಾರಣ ಏನು?

ಭೂಮಿಯ ಮೇಲಾಗುವ ದೊಡ್ಡಮಟ್ಟದ ಘರ್ಷಣೆಗಳು ಅಂದ್ರೆ ಭೂಕಂಪ, ಜ್ವಾಲಾಮುಖಿಯಂತಹ ಬದಲಾವಣೆಗಳು ಚಂದ್ರನ ಕಕ್ಷೆಯ ವಿಕಾಸದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಭೂಮಿಯ ಒಡಲಾಳದಲ್ಲಿಯೂ ಆಗುತ್ತಿರುವ ದೊಡ್ಡ ಬದಲಾವಣೆಗಳು ಸಹ ಚಂದ್ರನ ಮೇಲೆ ಪರಿಣಾಮ ಬೀರುತ್ತಿದೆ.

45
ಚಂದ್ರನ ಚಲನೆ?

ಚಂದ್ರನ ತನ್ನ ಜೀವಿತಾವಧಿಯಲ್ಲಿ ಸರಾಸರಿ 70 ರಿಂದ 80 ವರ್ಷಗಳಲ್ಲಿ ಕೇವಲ ಮೂರು ಮೀಟರ್‌ಗಳಷ್ಟು ಚಲಿಸುತ್ತಾನೆ. ಆದ್ರೆ ಈ ಸಂಬಂಧ ನಿಖರವಾದ ಉಪಕರಣಗಳಿಲ್ಲದ ಕಾರಣ ಚಲಿಸುವಿಕೆ ಪ್ರಮಾಣವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂಬುವುದು ವಿಜ್ಞಾನಿಗಳ ಮಾತಾಗಿದೆ. ಸದ್ಯ ಚಂದ್ರನು ಭೂಮಿಯಿಂದ ಸುಮಾರು 3.8 ಸೆಂಟಿ ಮೀಟರ್‌ನಷ್ಟು ದೂರವಾಗಿರೋದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಇದನ್ನೂ ಓದಿ: ನಿರ್ಬಂಧಿತ ಬಿಸಿ ನೀರಿನ ಬುಗ್ಗೆಯ ಜೀವಂತ ಕಾಮನ ಬಿಲ್ಲಿನ ಮೇಲೆ ಓಡಾಡಿದ ಪ್ರವಾಸಿಗರು, ವಿಸ್ಮಯ ತಾಣದ ರಹಸ್ಯ

55
ದಿನಕ್ಕೆ ಎಷ್ಟು ಗಂಟೆ?

ಹೇಗೆ ಚಂದ್ರನ ಶಕ್ತಿ ಹೆಚ್ಚಾಗುತ್ತೋ ಹಾಗೆಯೇ ಭೂಮಿಯ ವೇಗ ಕಡಿಮೆಯಾಗುತ್ತದೆ. ಸುಮಾರು ನೂರಾರು ಕೋಟಿ ವರ್ಷಗಳ ಹಿಂದೆ ಒಂದು ದಿನ 19 ಗಂಟೆಯಾಗಿತ್ತು. ಸದ್ಯ ಒಂದು ದಿನ 24 ಗಂಟೆಯಾಗಿದೆ. ಸುಮಾರು 600 ಮಿಲಿಯನ್ ವರ್ಷಗಳಲ್ಲಿ ಚಂದ್ರ ತುಂಬಾ ಚಿಕ್ಕದಾಗಿ ಕಾಣುತ್ತದೆ.

ಇದನ್ನೂ ಓದಿ: 850 ವರ್ಷಗಳ ಬಳಿಕ ಅಪರೂಪದ ಘಟನೆ, ಖಗೋಳ ಕೌತುಕ ನೋಡಲು 2 ವರ್ಷ ಮುನ್ನವೇ ಈ ನಗರದಲ್ಲಿ ಹೋಟೆಲ್‌ಗಳು ಸೋಲ್ಡ್ ಔಟ್!

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories