ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಏನು ಮಾಡುತ್ತಿದೆ? ಫೋಟೋ ಕಳುಹಿಸಿದ ಪ್ರಗ್ಯಾನ್ ರೋವರ್!

First Published | Aug 30, 2023, 3:32 PM IST

ಭಾರತ ಚಂದ್ರನ ಮೇಲೆ ಕಾಲಿಟ್ಟು ಒಂದು ವಾರ ಕಳೆದಿದೆ. ಇದೀಗ ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಅಧ್ಯಯನ ನಡೆಸುತ್ತಿದೆ. ಇದರ ಜೊತೆಗೆ ಕುತೂಹಲಕ್ಕೆ ಉತ್ತರವಾಗಿ ಹಲವು ಫೋಟೋಗಳನ್ನು ಕಳುಹಿಸುತ್ತಿದೆ.  ಇದೀಗ ಚಂದ್ರನ ಮೇಲಿರುವ ವಿಕ್ರಮ್ ಲ್ಯಾಂಡರ್ ಫೋಟೋವನ್ನು ಇಸ್ರೋಗೆ ಕಳುಹಿಸಿದೆ. ಇದು ಚಂದ್ರನ ಮೇಲೆ ಇಳಿದ ಬಳಿಕ ವಿಕ್ರಮ್ ಲ್ಯಾಂಡರ್‌ನ ಮೊದಲ ಸಂಪೂರ್ಣ  ಫೋಟೋ ಆಗಿದೆ.

ಇಸ್ರೋದ ಚಂದ್ರಯಾನ 3 ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆಗಸ್ಟ್23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ ಲ್ಯಾಂಡರ್ ಒಳಗಿನಿಂದ ಪ್ರಗ್ಯಾನ್ ರೋವರ್ ಹೊರಬಂದು ಅಧ್ಯಯನ ಆರಂಭಿಸಿತ್ತು.

ಈಗಾಗಲೇ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್‌ನಲ್ಲಿ ಅಳವಡಿಸಿರುವ ಕ್ಯಾಮರಾ ಮೂಲಕ ಹಲವು ಫೋಟೋಗಳನ್ನು ಸೆರೆ ಹಿಡಿದು ಇಸ್ರೋ ಕೇಂದ್ರಕ್ಕೆ ರವಾನಿಸಿದೆ.  ಇದೀಗ ವಿಕ್ರಮ್ ಲ್ಯಾಂಡರ್ ಫೋಟೋವನ್ನು ರೋವರ್ ಕಳುಹಿಸಿದೆ.

Latest Videos


ಇಂದು ಬೆಳಗ್ಗೆ ಪ್ರಗ್ಯಾನ್ ರೋವರ್‌ನಲ್ಲಿ ಅಳವಡಿಸಿರುವ ನ್ಯಾವಿಗೇಶನ್ ಕ್ಯಾಮರಾ ಮೂಲಕ ವಿಕ್ರಮ್ ಲ್ಯಾಂಡರ್ ಫೋಟೋವನ್ನು ಭಾರತಕ್ಕೆ ಕಳುಹಿಸಿದೆ.  ಈ ಕ್ಯಾಮರಾವನ್ನು ಇಸ್ರೋದ ಚಂದ್ರಯಾನ 3 LEOS ಅಭಿವೃದ್ಧಿ ಪಡಿಸಿದೆ.

ನಿನ್ನೆ ಪ್ರಗ್ಯಾನ್ ರೋವರ್ ಚಂದ್ರನ ಮೇಲಿರುವ ಬೃಹದಾಕಾರದ ಕುಳಿ ಫೋಟೋವನ್ನು ಇಸ್ರೋ ಕೇಂದ್ರಕ್ಕೆ ಕಳುಹಿಸಿತ್ತು.  ಅಧ್ಯಯನಕ್ಕಾಗಿ ಚಂದ್ರನ ಮೇಲೆ ಚಲಿಸುತ್ತಿದ್ದ ರೋವರ್‌ಗೆ ಕುಳಿ ಎದುರಾಗಿತ್ತು. 

ಈ ವೇಳೆ ನ್ಯಾವಿಗೇಶನ್ ಕ್ಯಾಮರಾ ಪತ್ತೆ ಹಚ್ಚಿ ರೋವರ್ ಮಾರ್ಗ ಬದಲಿಸಿತ್ತು. ಚಂದ್ರನ ಮೇಲಿನ ಕುಳಿ ಹಾಗೂ ಮಾರ್ಗ ಬದಲಿಸಿದ ಫೋಟೋವನ್ನು ರೋವರ್ ಇಸ್ರೋ ಕೇಂದ್ರಕ್ಕೆ ಕಳುಹಿಸಿತ್ತು.

ಚಂದ್ರನ ದಕ್ಷಿಣ ಧ್ರುವದಲ್ಲಿ ಆಮ್ಲಜನಕ, ಸಲ್ಫರ್ ಸೇರಿದಂತೆ 9 ಧಾತುಗಳನ್ನು ಪತ್ತೆ ಹಚ್ಚಿದ ಮಾಹಿತಿಯನ್ನು ಪ್ರಗ್ಯಾನ್ ರೋವರ್  ಇಸ್ರೋಗೆ ಕಳುಹಿಸಿದೆ. ಇದು ಚಂದ್ರನ ಅಧ್ಯಯನಕ್ಕೆ ಬಹುದೊಡ್ಡ ಪುಷ್ಠಿ ನೀಡಿದೆ.

ಇತ್ತೀಚೆಗೆ ಚಂದ್ರನ ಮೇಲಿರುವ ತಾಪಮಾನದ ನಿಖರ ಮಾಹಿತಿಯನ್ನು ರೋವರ್ ಇಸ್ರೋಗೆ ರವಾನಿಸಿತ್ತು. ಇದೇ ಮೊದಲ ಬಾರಿಗೆ ಜಗತ್ತಿಗೆ ಚಂದ್ರನ ಮೇಲಿನ ತಾಪಮಾನ ಮಾಹಿತಿಯನ್ನು ಭಾರತ ಬಹಿರಂಗಪಡಿಸಿತ್ತು.

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುತ್ತಿದ್ದಂತೆ ಕೆಲ ಫೋಟೋಗಳನ್ನು ಲ್ಯಾಂಡರ್ ಕಳುಹಿಸಿತ್ತು. ಇಷ್ಟೇ ಅಲ್ಲ ಪ್ರಗ್ಯಾನ್ ರೋವರ್ , ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ವಿಡಿಯೋವನ್ನು ಕಳುಹಿಸಲಾಗಿತ್ತು.

click me!