ಸೊನ್ನೆ ಮಾತ್ರವಲ್ಲ ಆರ್ಯಭಟರ ಈ ಆವಿಷ್ಕಾರಗಳ ಬಗ್ಗೆ ನಿಮಗೆ ತಿಳಿದಿದೆಯೇ

First Published Aug 25, 2023, 4:02 PM IST

ಸೊನ್ನೆಯನ್ನು ಕಂಡುಹಿಡಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ. ಅದನ್ನು ಕಂಡುಹಿಡಿದದ್ದು ಶ್ರೇಷ್ಠ ಗಣಿತಜ್ಞ ಆರ್ಯಭಟ. ಇದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಆದರೆ ಅವರು ಆವಷ್ಕರಿಸಿದ ಇತರ ವಿಷಯಗಳ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಕುರಿತು ಇಲ್ಲಿದೆ ಮಾಹಿತಿ.

ಆರ್ಯಭಟ ಖಗೋಳಶಾಸ್ತ್ರ ಮತ್ತು ಗಣಿತ ವಿಷಯಕ್ಕೆ ನೀಡಿದ ಕೊಡುಗೆಗಳಿಂದ ನಮ್ಮ ದೇಶವು ಹೆಮ್ಮೆ ಪಡೆಯುವಂತಾಗಿದೆ. ಅವರು ನೀಡಿರುವ ಹಲವಾರು ಸಂಶೋಧನೆಗಳ ಅವಿಷ್ಕಾರಗಳು ಈಗಿನ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶನವಾಗಿದೆ.

ಆರ್ಯಭಟರು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರು ಸಂಖ್ಯಾವ್ಯವಸ್ಥೆ ಮತ್ತು ಶೂನ್ಯವನ್ನು ಕಂಡುಹಿಡಿದರು. ಇದರ ಜೊತೆಗೆ ಪೈನ್ ಮೌಲ್ಯವನ್ನು ಸಹ ಕಂಡುಹಿಡಿದು ಜಗತ್ತಿಗೆ ಭಾರತದ ಬಗ್ಗೆ ತಿಳಿಸಿದರು.

ಆರ್ಯಭಟ ತಮ್ಮ ಕೃತಿಗಳಲ್ಲಿ ಸರಿಯಾಗಿ ಭೂಮಿಯು ಸೂರ್ಯನ ಸುತ್ತ ನಿರ್ದಿಷ್ಟ ಅಕ್ಷದಲ್ಲಿ ತಿರುಗುತ್ತದೆ ಎಂಬುದನ್ನು ತಿಳಿಸಿದ್ದಾರೆ ಮತ್ತು ನಕ್ಷತ್ರಗಳ ಚಲನೆಯು ಭೂಮಿಯ ಪರಿಭ್ರಮಣೆಯಿಂದ ಉಂಟಾಗುವ ಸಾಪಕ್ಷ ಚಲನೆಯಿಂದ ಕಾಣಿಸಿದೆ ಎಂದು ಹೇಳಿದ್ದಾರೆ. 

ಒಂದು ಕಾಲದಲ್ಲಿ ಆಕಾಶವೇ ತಿರುಗುತ್ತದೆ ಎಂಬ ನಂಬಿಕೆಗೆ ವಿರುದ್ಧವಾಗಿ ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ ಎಂಬುದನ್ನು ಅವರು ತಿಳಿಸಿದ್ದಾರೆ. ಹಲವಾರು ಪುರಾವೆಗಳೊಂದಿಗೆ ಸೂರ್ಯನ ಸುತ್ತ ಎಲ್ಲಾ ಗ್ರಹಗಳು ತಿರುಗುತ್ತದೆ ಎಂಬುದನ್ನು ಹೇಳಿದ್ದಾರೆ. 

aryabhata 05

ಆರ್ಯಭಟರ ಖಗೋಳ ಶಾಸ್ತ್ರದ ಸಂಶೋಧನೆಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಚಂದ್ರ ಮತ್ತು ಗ್ರಹಗಳು ಸೂರ್ಯನ ಬೆಳಕನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ಅವರು ಕಂಡು ಹಿಡಿದಿದ್ದಾರೆ. ಹಾಗೂ ದಿನ ಮತ್ತು ವರ್ಷದ ನಿಖರವಾದ ಸಮಯದ ಲೆಕ್ಕಾಚಾರವನ್ನು ಕಂಡು ಹಿಡಿದಿದ್ದಾರೆ.

click me!