ಇನ್ನು, ಪ್ರಗ್ಯಾನ್ ಪ್ರತಿ ಸೆಕೆಂಡಿಗೆ ಒಂದು ಸೆಂಟಿಮೀಟರ್ ವೇಗದಲ್ಲಿ ಚಲಿಸುತ್ತದೆ. ಇದು ಹಾದುಹೋಗುವಾಗ, ಅದು ಬಾಹ್ಯಾಕಾಶ ಸಂಸ್ಥೆಯ ಲೋಗೋ ಮತ್ತು ಭಾರತದ ರಾಷ್ಟ್ರೀಯ ಲಾಂಛನವನ್ನು ಚಂದ್ರನ ಮೇಲ್ಮೈಯಲ್ಲಿ ಮುದ್ರಿಸುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ. ಈ ಮಾಹಿತಿ ನೀಡಿದ ಹಿನ್ನೆಲೆ, ಭಾರತದ ರಾಷ್ಟ್ರೀಯ ಲಾಂಛನ ಮತ್ತು ಇಸ್ರೋದ ಲಾಂಛನದ ಮುದ್ರೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿತ್ರವು ಈ ಎರಡು ಚಿಹ್ನೆಗಳ ಮುದ್ರೆಗಳನ್ನು ಹೊಂದಿರುವ ಎರಡು ಸಮಾನಾಂತರ ಚಕ್ರ ಟ್ರ್ಯಾಕ್‌ಗಳನ್ನು ತೋರಿಸುತ್ತಿದೆ.