ನಟಿ, ಮಾಡಲ್ ಹಾಗೂ ಫ್ಯಾಷನ್ ಡಿಸೈನರ್ ಪವಿತ್ರಾ ಗೌಡ ತಮ್ಮ ರೆಡ್ ಕಾರ್ಪೆಟ್ 777 ಸ್ಟುಡಿಯೋವನ್ನು ರೀ-ಓಪನ್ ಅದ್ಧೂರಿಯಾಗಿ ಮಾಡಿದ್ದಾರೆ.
27
ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ಪವಿತ್ರಾ ಗೌಡ ಫ್ಯಾಷನ್ ಸ್ಟುಡಿಯೋವನ್ನು ಮಗಳು ನಡೆಸುತ್ತಿದ್ದಳು ಆದರೆ ತಿಂಗಳು ಹೆಚ್ಚಾಗುತ್ತಿದ್ದಂತೆ ಬಂದ್ ಮಾಡುವ ಪರಿಸ್ಥಿತಿ ಎದುರಾಗಿತ್ತು.
37
ಜಾಮೀನು ಪಡೆದು ಹೊರ ಬಂದಿರುವ ಪವಿತ್ರಾ ಗೌಡ ಅನುಮಪತಿ ಪಡೆದು ಹೊರ ರಾಜ್ಯಕ್ಕೆ ಪ್ರಯಾಣ ಮಾಡಿ ತಮ್ಮ ಅಂಗಡಿಗೆ ಬೇಕಿರುವ ವಿವಿಧ ಮಟೀರಿಯಲ್‌ಗಳನ್ನು ಖರೀದಿಸಿದ್ದಾರೆ.
47
ಫೆಬ್ರವರಿ 14ರಂದು ರಾಜರಾಜೇಶ್ವರಿ ನಗರದಲ್ಲಿ ಇರುವ ಸ್ಟುಡಿಯೋದಲ್ಲಿ ಗಣಪತಿ ಹೋಮ ಮತ್ತು ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿಸಿದ್ದಾರೆ. ಈ ಸಂಭ್ರಮದಲ್ಲಿ ಪವಿತ್ರಾ ಆಪ್ತರು ಮಾತ್ರ ಭಾಗಿಯಾಗಿದ್ದರು.
57
ನೀಲಿ ಬಣ್ಣ ರೇಶ್ಮೆ ಸೀರೆಯಲ್ಲಿ ಪವಿತ್ರಾ ಗೌಡ ಕಾಣಿಸಿಕೊಂಡರೆ ಪಿಂಕ್ ಬಣ್ಣದ ರೇಶ್ಮೆ ಸೀರೆಯಲ್ಲಿ ತಾಯಿ ಮಿಂಚಿದ್ದಾರೆ. ಇಬ್ಬರೂ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
67
'ಅಮ್ಮ ನೀನು ನನ್ನ ದೊಡ್ಡ ಶಕ್ತಿ. ನಿನ್ನನ್ನು ನೋಡಿ ನಾನು ಗಟ್ಟಿಗಿತ್ತಿಯಾಗುತ್ತಿರುವೆ. ನನ್ನ ಜೀವನದಲ್ಲಿ ಮೇಲೆ ಕೆಳಗೆ ನೋಡುತ್ತಿರುವಾಗ ನನ್ನ ಪರ ನಿಂತಿದ್ದು ನೀನೇ. ಆಕೆಯ ನಿಜವಾದ ಶಕ್ತಿನೇ ತಾಳ್ಮೆ' ಎಂದು ಪವಿತ್ರಾ ಬರೆದುಕೊಂಡಿದ್ದಾರೆ.
77
ಸ್ಟುಡಿಯೋ ಓಪನಿಂಗ್ ಅದ್ಧೂರಿಯಾಗಿ ನಡೆದರೂ ಕೂಡ ಕೆಲವೇ ಕೆಲವು ಸ್ನೇಹಿತರನ್ನು ಪವಿತ್ರಾ ಆಹ್ವಾನಿಸಿದ್ದರು. ಅಲ್ಲದೆ ಯಾರೇ ಸ್ಟುಡಿಯೋ ಪ್ರವೇಶಿಸಬೇಕು ಅಂದ್ರೂ ಸೆಕ್ಯೂರಿಟಿ ದಾಟಬೇಕಿತ್ತು.