ಯಶ್‌ ಸಿನಿಮಾ ಗಜಕೇಸರಿ ತೆಲುಗು ವರ್ಷನ್‌ ರಿಲೀಸ್‌ ಡೇಟ್ ಫಿಕ್ಸ್

First Published | Feb 24, 2021, 10:12 AM IST

ಮಾ.5ಕ್ಕೆ ಯಶ್‌ ಸಿನಿಮಾ ಗಜಕೇಸರಿ ತೆಲುಗು ವರ್ಷನ್‌ ರಿಲೀಸ್ | ಆಂಧ್ರಪ್ರದೇಶ, ತೆಲಂಗಾಣ ಎರಡೂ ರಾಜ್ಯಗಳಲ್ಲೂ ಬಿಗ್‌ ರಿಲೀಸ್‌

ಹೆಬ್ಬುಲಿ ಕೃಷ್ಣ ನಿರ್ದೇಶನದ ಗಜಕೇಸರಿ ಚಿತ್ರ ಮಾ.5ಕ್ಕೆ ತೆಲುಗಿನಲ್ಲಿ ಬಿಡುಗಡೆ ಆಗಲಿದೆ.
undefined
ಆಂಧ್ರಪ್ರದೇಶ, ತೆಲಂಗಾಣ ಎರಡೂ ರಾಜ್ಯಗಳಲ್ಲೂ ಬಿಗ್‌ ರಿಲೀಸ್‌ಗೆ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
undefined
Tap to resize

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗಜಕೇಸರಿ ನಿರ್ದೇಶಕ ಕೃಷ್ಣ, ‘ತೆಲುಗು ನಿರ್ಮಾಪಕ ರಾಮರಾವ್‌ ಈ ಚಿತ್ರದ ತೆಲುಗು ಹಕ್ಕನ್ನು ಕಳೆದ ವರ್ಷವೇ ಪಡೆದುಕೊಂಡಿದ್ದರು.
undefined
ಕೊರೋನಾ ಕಾರಣಕ್ಕೆ ರಿಲೀಸ್‌ ತಡವಾಗಿದೆ. ಇದೀಗ ಪ್ರಿ-ರಿಲೀಸ್‌ ಈವೆಂಟ್‌ಗೆ ಆಹ್ವಾನ ಬಂದಿದೆ. ಬಿಗ್‌ ರಿಲೀಸ್‌ಗೆ ಪ್ಲಾನ್‌ ಮಾಡಿಕೊಂಡಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ’ ಎಂದರು.
undefined
ಐತಿಹಾಸಿಕ ಚಿತ್ರ ಗಜಕೇಸರಿ 2014ರಲ್ಲೇ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಸಿನಿಮಾಟೋಗ್ರಾಫರ್‌ ಕೃಷ್ಣ ನಿರ್ದೇಶನದ ಮೊದಲ ಚಿತ್ರವಿದು.
undefined
ಯಶ್‌, ಅಮೂಲ್ಯ ಅಭಿನಯದ ಈ ಚಿತ್ರ ಹಿಂದೆ ‘ದ ಬಿಗ್‌ ಲಯನ್‌ ಗಜಕೇಸರಿ’ ಶೀರ್ಷಿಕೆಯಲ್ಲಿ ಹಿಂದಿಗೂ ಡಬ್‌ ಆಗಿತ್ತು.
undefined

Latest Videos

click me!