ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಕುಟುಂಬ ಸಹ ಕೊರೋನಾದಿಂದ ಚೇತರಿಸಿಕೊಂಡಿತ್ತು.
ನನ್ನ ಜತೆ ಇಡೀ ಕುಟುಂಬ ಕ್ವಾರಂಟೈನ್ ಆಗಿದೆ ಎಂದು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತಿಳಿಸಿದ್ದರು.
ಕೊರೋನಾ ಎರಡನೇ ಅಲೆ ಆವರಿಸಿಕೊಂಡಿದ್ದುಹಲವರ ಬದುಕನ್ನು ಕಿತ್ತುಕೊಂಡಿದೆ.
ಶರ್ಮಿಳಾ ಸ್ಯಾಂಡಲ್ ವುಡ್ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿದವರು.
ಕೊರೋನಾ ಕಾಲದಲ್ಲಿ ನೆರವಿಗೆ ನಿಲ್ಲಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಎಂದು ಶರ್ಮಿಳಾ ಹೇಳುತ್ತಾರೆ.
ಅನಾಥಾಶ್ರಮದ ಮಕ್ಕಳಿಗೆ ಅಗತ್ಯ ಆಹಾರ ಮತ್ತು ಇತರೆ ಸಾಮಗ್ರಿ ವಿತರಣೆ ಮಾಡಿದ್ದಾರೆ.
ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿದ್ದವರ ಗುರುತಿಸಿ ನೆರವು ನೀಡಿದ್ದಾರೆ.
ಉಪೇಂದ್ರ, ಸುದೀಪ್, ದರ್ಶನ್, ಹರ್ಷಿಕಾ ಪೂಣಚ್ಚ, ರಾಗಿಣಿ, ಸಂಜನಾ, ಚರಣ್ ರಾಜ್ ಸಹ ಒಂದಿಲ್ಲೊಂದು ರೀತಿ ನೆರವು ನೀಡಿಕೊಂಡು ಬಂದಿದ್ದಾರೆ.