ರಂಗನಾಯಕಿ
ಇದು ಕೂಡ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಕಾದಂಬರಿ ಆಧಾರಿತ ಚಿತ್ರ. ಈ ಸಿನಿಮಾದಲ್ಲಿ ಆರತಿಯೇ ರಂಗನಾಯಕಿ. ನಟಿಯಾಗ ಬಯಸಿದ ಹೆಣ್ಣೊಬ್ಬರು, ಹೇಗೆ ತನ್ನ ಗಂಡನಿಂದ ದೂರ ಆಗುತ್ತಾಳೆ, ಬಳಿಕ ಸಿನಿಮಾದಿಂದ ಜನಪ್ರಿಯತೆ ಪಡೆಯುತ್ತಾಳೆ. ಕೊನೆಗೆ ಆಕೆಯ ಮಗನಿಗೆ ಆಕೆಯ ಮೇಲೆ ಒಲವಾಗುವುದು ಈ ಸಿನಿಮಾದ ಕಥೆ.
210
ಕಾನೂರು ಹೆಗ್ಗಡತಿ
ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಿತ್ರವೇ ಕಾನೂರು ಹೆಗ್ಗಡತಿ. ಈ ಸಿನಿಮಾದಲ್ಲಿ ತಾರಾ ಹೆಗ್ಗಡತಿಯಾಗಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಗಂಡ ತೀರಿ ಹೋದ ಮೇಲೆ ಅವರ ಸ್ಥಾನದಲ್ಲಿ ತಾನು ನಿಂತು ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಹೆಗ್ಗಡತಿಯ ಸ್ಥಿತಿ ಮುಂದೇನಾಗುತ್ತೆ ಅನ್ನೊದೆ ಕಥೆ.
310
ಶರಪಂಜರ
ತ್ರಿವೇಣಿಯವರ ಕಾದಂಬರಿ ಆಧಾರಿತ, ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು. ಈ ಚಿತ್ರದಲ್ಲಿ ಕಲ್ಪನಾ ಹಾಗೂ ಗಂಗಾಧರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಲೈಂಗಿಕ ಕಿರುಕುಳ, ಪುರುಷರ ಅಹಂ, ಮಹಿಳೆಯ ಮಾನಸಿಕ ತಲ್ಲಣದ ಕುರಿತು ಚಿತ್ರಿಸಲಾಗಿದೆ.
410
ಗೆಜ್ಜೆ ಪೂಜೆ
‘ಗೆಜ್ಜೆ ಪೂಜೆ’ ಎಂ.ಕೆ.ಇಂದಿರಾ ಅವರ ಕಾದಂಬರಿ. ಇದೆ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ಪುಟ್ಟಣ್ಣ ಕಣಗಲ್ ಅದೇ ಹೆಸರಿನಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾ ನಾಯಕಿ ಕಲ್ಪನಾ. ವೇಶ್ಯಾವಾಟಿಕೆ ಎಂಬ ಸಾಮಾಜಿಕ ಪಿಡುಗಿನ ಭೀಕರತೆಯನ್ನು ವಿವರಿಸಿದ ಸಿನಿಮಾ ಇದಾಗಿತ್ತು.
510
ಬೆಂಕಿಯಲ್ಲಿ ಅರಳಿದ ಹೂವು
ಸುಹಾಸಿನಿ ಅಭಿನಯದ ಸಿನಿಮಾ ಇದಾಗಿದೆ. ಈ ಕಥೆ ಪೂರ್ತಿಯಾಗಿ ಸುಹಾಸಿನಿಯ ಪಾತ್ರದ ಹಿಂದೆ ಸುತ್ತುತ್ತೆ. ತನ ಕುಟುಂಬಕ್ಕಾಗಿ ಕವಿತಾ ಏನೆಲ್ಲಾ ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತೆ ಅನ್ನೋದು ಚಿತ್ರದ ಕಥೆ.
610
ಮೊಗ್ಗಿನ ಮನಸು
ರಾಧಿಕಾ ಪಂಡಿತ್ ಹಾಗೂ ಶುಭಾ ಪೂಂಜಾ ನಟಿಸಿರುವ ಮೊದಲ ಚಿತ್ರ ಇದಾಗಿದ್ದು. ಇದು ಈಗಷ್ಟೇ ಟೀನೇಜ್ ಗೆ ಕಾಲಿಟ್ಟಿ ಹುಡುಗಿಯರ ಮನಸಿನ ಭಾವನೆಗಳಿಗೆ ಕನ್ನಡಿ ಹಿಡಿಯುವಂತ ಸಿನಿಮಾ ಆಗಿದೆ.
710
ತಾಯಿ ಸಾಹೇಬ
ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಜಯಮಾಲಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಪ್ಪಾ ಸಾಹೇಬ ಎಂಬ ಸ್ವಾತಂತ್ರ ಹೋರಾಟಗಾರ ಮತ್ತು ಅವನ ಎರಡನೇ ಹೆಂಡತಿ ನರ್ಮದಾ ತಾಯಿಯವರ ಜೀವನದ ಕತೆ ಚಿತ್ರ ಹೇಳುತ್ತದೆ.
810
ದೇವೀರಿ
ಸಿನಿಮಾದ ಕಥೆಯು ತನ್ನ ಹೆತ್ತವರನ್ನು ಕಳೆದುಕೊಂಡ ಮತ್ತು ತನ್ನ ಕಿರಿಯ ಸಹೋದರನನ್ನು ನೋಡಿಕೊಳ್ಳಲು ಹೆಣಗಾಡುತ್ತಿರುವ ದೇವೇರಿ ಎಂಬ ಯುವತಿಯ ಸುತ್ತ ಸುತ್ತುತ್ತದೆ. ಅವಳು ಇತರರ ಶೋಷಣೆಗೆ ಹೇಗೆ ಬಲಿಯಾಗುತ್ತಾಳೆ ಅನ್ನೋದು ಕಥೆ.
910
ಅಭಿನೇತ್ರಿ
ಈ ಚಿತ್ರವು ನಟಿ ಕಲ್ಪನಾರ ಜೀವನ ಆಧಾರಿತ ಕಥೆಯಾಗಿದೆ. ಈ ಸಿನಿಮಾದಲ್ಲಿ ಪೂಜಾ ಗಾಂಧಿ ನಟಿಸಿದ್ದರು. ಕಡಿಮೆ ಅವಧಿಯಲ್ಲಿಯೇ ಉತ್ತುಂಗಕೇರಿದ ನಟಿ, ನಂತರ ಹಂತ ಹಂತವಾಗಿ ಕುಸಿಯುತಾ, ಕೊನೆಗೆ ತನ್ನ ಸಾವನ್ನು ತಾನೇ ಬರಮಾಡಿಕೊಂಡಿದ್ದು ಹೇಗೆ ಅನ್ನೋದನ್ನು ಈ ಕಥೆ ಹೇಳುತ್ತೆ.
1010
ನಾತಿಚರಾಮಿ
ಈ ಸಿನಿಮಾದಲ್ಲಿ ಶ್ರುತಿ ಹರಿಹರನ್ ನಟಿಸಿದ್ದಾರೆ. ಪತಿ ಸಾವನ್ನಪ್ಪಿದ ಬಳಿಕ, ಸಮಾಜಕ್ಕೆ ಹೆದರಿ ತನ್ನ ಅಸೆಗಳನ್ನು ಬಚ್ಚಿಟ್ಟು ಕುಳಿತ ಹೆಣ್ಣು, ಬಳಿಕ ಯಾವ ರೀತಿಯಾಗಿ ಸ್ವತಂತ್ರಳಾಗಿ ಬದುಕುತ್ತಾಳೆ ಅನ್ನೋದು ಕಥೆ.