ವಾಲ್ ಆಫ್ ಫೇಮ್ ಗೌರವ; ಪ್ರಶಸ್ತಿ ಗೆದ್ದು ಸಂಭ್ರಮಿಸಿದ 50 ಸಾಧಕರು

Published : Oct 12, 2022, 10:17 AM IST

ಬೆಂಗಳೂರಿನ ಶಾಂಗ್ರೀಲಾ ಹೋಟೆಲ್‌ನಲ್ಲಿ 50 ಸಾಧಕರಿಗೆ ವಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

PREV
18
 ವಾಲ್ ಆಫ್ ಫೇಮ್ ಗೌರವ; ಪ್ರಶಸ್ತಿ ಗೆದ್ದು ಸಂಭ್ರಮಿಸಿದ 50 ಸಾಧಕರು

ಬೆಂಗಳೂರಿನ ಶಾಂಗ್ರೀಲಾ ಹೋಟೆಲ್‌ನಲ್ಲಿ ಸಾಧಕರಿಗೆ ವಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ 50 ಸಾಧಕರು ಒಂದು ಕಡೆ ಸೇರಿದ್ದರು.   ನಂದಿನಿ ನಾಗರಾಜ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 40ಕ್ಕು ಹೆಚ್ಚು ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಿ ಗುರುತಿಸಿಕೊಂಡಿದ್ದ ಗಣ್ಯರನ್ನು ಗೌರವಿಸಿ ಪ್ರಶಸ್ತಿ ನೀಡಲಾಯಿತು. 

28

ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಇತಿ ಆಚಾರ್ಯ ಪಡೆದರೆ, ಅತ್ಯುತ್ತಮ ನಟ ಪ್ರಶಸ್ತಿ ಕಾಕ್ರೋಚ್ ಸುಧಿ ಅವರಿಗೆ ಕೊಡಲಾಯಿತು. ಧನಲಕ್ಷ್ಮಿ ಅವರಿಗೆ ಸ್ವಾವಲಂಬಿ ಮಹಿಳೆ ಪ್ರಶಸ್ತಿ ಸಿಕ್ಕಿದೆ. 

38

ಮೋಟಿವೇಶನ್ ಸ್ಪೀಕರ್ ವಿಸ್ಮಯಾ, ಜೀವನದಲ್ಲಿ ಉತ್ಸಾಹವೇ ಇಲ್ಲದೆ ಬದುಕು ಬೇಡ, ಇನ್ನು ಸಾವೇ ಗತಿ ಎಂದುಕೊಂಡಿದ್ದ ಲಕ್ಷಾಂತರ ಜನರ ಮನಪರಿವರ್ತನೆ ಮಾಡಿರುವ ಮೋಟಿವೇಶನ್ ಸ್ಪೀಕರ್  ವಿಸ್ಮಯಾ ಗೌಡ ಅವರಿಗೆ ಇಲ್ಲಿ ಪ್ರಶಸ್ತಿ ಸಿಕ್ಕಿದೆ.

48

ಅತ್ಯುತ್ತಮ ಆಂಕರ್ ಆಗಿ ನಿರಂಜನ್ ದೇಶಪಾಂಡೆ, ಇಂಟರ್ನ್ಯಾಷನಲ್ ಅಥ್ಲೀಟ್ ರೋಷನ್, ಬೆಸ್ಟ್ ವೆಡ್ಡಿಂಗ್  ಡೆಸ್ಟಿನೇಷನ್ ಅರುಣ್, ಟ್ರೆಂಡ್ ಸೆಟ್ಟರ್ ಶಿಲ್ಪಾ, ಅತ್ಯುತ್ತಮ ಸಮಾಜ ಸೇವೆ ಜಯರಾಜ್, ಇನ್ನೋವೇಶನ್ ಸಂಗೀತಗಾರ ಅನೀಶ್, ಉತ್ತಮ ಅರ್ ಜೆ ಪಟಾಕಿ ಶೃತಿ, ಸಮಾಜ ಸೇವೆಯಲ್ಲಿ ನಟಿ ಕಾರುಣ್ಯ ರಾಮ್, ಉತ್ತಮ ಮೊಡೆಲ್ ಪ್ರಿಯಾಂಕ ಗಿರೀಶ್, ಫಿಟ್ನೆಸ್ ಸ್ಪೂರ್ತಿ ವನಿತಾ ಅಶೋಕ್, ಉತ್ತಮ ವೈದ್ಯರು ಗಣೇಶ್ , ಫ್ಯಾಷನ್ ಐಕಾನ್ ಶ್ವೇತ ಮೌರ್ಯ ಪಡೆದುಕೊಂಡಿದ್ದಾರೆ.

58

ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್, ನಟಿ ಶೃತಿ ಹರಿಹರನ್, ಇತಿ ಆಚಾರ್ಯ, ಕಾರುಣ್ಯ ರಾಮ್, ಆಂಕರ್ ನಿರಂಜನ್ ದೇಶಪಾಂಡೆ, ಶಾನ್ವಿ ಶ್ರೀವಾಸ್ತವ್, ಅಗ್ನಿ ಶ್ರೀಧರ್, ಐಪಿಎಸ್ ಭಾಸ್ಕರ್ ರಾವ್ , ಆಯೋಜಕಿ ನಂದಿನಿ ನಾಗರಾಜ್ ಇದ್ದರು. 

68

ನಟ ಡಾಲಿ ಧನಂಜಯ್ ಮಾತನಾಡಿ, ಸಾಧಕರಿಗೆ ಸನ್ಮಾನ ಸಿಕ್ಕರೆ ಅವರಿಗೆ ಕೆಲಸ ಮಾಡಲು ಇನ್ನಷ್ಟು ಉತ್ಸಾಹ ಸಿಗಲಿದೆ.  ನಮ್ಮ ಸಿನಿಮಾ 'ಹೆಡ್ ಬುಷ್ ' ಅಕ್ಟೋಬರ್ 21 ಕ್ಕೆ ಬಿಡುಗಡೆಯಾಗಲಿದೆ. ಎಲ್ಲರೂ ಸಿನಿಮಾ ನೋಡಿ ' ಎಂದರು.

78

ಅಗ್ನಿ ಶ್ರೀಧರ್ ಮಾತನಾಡಿ, ಹೆಡ್ ಬುಷ್ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ. ಕಷ್ಟ ಪಟ್ಟು ಈ ಸಿನಿಮಾ ಮಾಡಿದ್ದೇವೆ. ಧನಂಜಯ್ ಈ ಸಿನಿಮಾ ಮಾಡಲು ನನಗೆ ಧೈರ್ಯ ಕೊಟ್ಟರು. ಚೆನ್ನಾಗಿ ಮೂಡಿಬಂದಿದೆ ಎಂದರು. 

88

ಆಯೋಜಕಿ ನಂದಿನಿ ನಾಗರಾಜ್ ಮಾತನಾಡಿ, ಈ ವರ್ಷ 50 ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಮುಂದಿನ ವರ್ಷ ಇನ್ನಷ್ಟು ಸಾಧಕರಿಗೆ ಸನ್ಮಾನ ಮಾಡಲು ಅವಕಾಶ ಸಿಗಲಿದೆ. ಸಾಧಕರಿಗೆ ಧನ್ಯವಾದಗಳು ಎಂದರು. ನಟಿ ಶೃತಿ ಹರಿಹರನ್ ಮಾತನಾಡಿ, ಹೆಚ್ಚು ಹೆಚ್ಚು ಸಾಧಕರನ್ನು ಇಲ್ಲಿ ನೋಡಿ ಖುಷಿಯಾಯಿತು ಎಂದರು. ನಟಿ ಕಾರುಣ್ಯ ರಾಮ್, ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲು ಈ ಪ್ರಶಸ್ತಿ ಸ್ಫೂರ್ತಿಯಾಗಿದೆ ಎಂದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories