ಪತ್ನಿ ಜೊತೆ ಮಾಲ್ಡೀವ್ಸ್‌ನಲ್ಲಿ ನಿರೂಪ್ ಜಾಲಿ ಟ್ರಿಪ್: ನಿಮ್ಮ ಮೇಲೆ ಯಾರ ದೃಷ್ಟಿ ಬೀಳದಿರಲಿ ಎಂದ ಫ್ಯಾನ್ಸ್!

Published : Oct 06, 2023, 08:25 AM IST

ಸ್ಯಾಂಡಲ್‌ವುಡ್ ನಟ ನಿರೂಪ್ ಭಂಡಾರಿ ಜಾಲಿ ಮೂಡ್​ನಲ್ಲಿದ್ದು, ಇದೀಗ ಮಾಲ್ಡೀವ್ಸ್‌ನಲ್ಲಿ ಪತ್ನಿ ಜೊತೆ ಕಾಲ ಕಳೆಯುತ್ತಿದ್ದಾರೆ. ಪ್ರವಾಸಿಗರ ಮತ್ತು ನಟ-ನಟಿಯರ ನೆಚ್ಚಿನ ತಾಣವಾಗಿರುವ ಮಾಲ್ಡೀವ್ಸ್‌ನಲ್ಲಿ ನಿರೂಪ್ ಬೀಡು ಬಿಟ್ಟಿದ್ದಾರೆ. 

PREV
15
ಪತ್ನಿ ಜೊತೆ ಮಾಲ್ಡೀವ್ಸ್‌ನಲ್ಲಿ ನಿರೂಪ್ ಜಾಲಿ ಟ್ರಿಪ್: ನಿಮ್ಮ ಮೇಲೆ ಯಾರ ದೃಷ್ಟಿ ಬೀಳದಿರಲಿ ಎಂದ ಫ್ಯಾನ್ಸ್!

ರಂಗಿತರಂಗ, ರಾಜರಥ, ವಿಕ್ರಾಂತ್ ರೋಣ ಸಿನಿಮಾಗಳ ಮೂಲಕ ಗಮನ ಸೆಳೆದ ನಟ ನಿರೂಪ್ ಭಂಡಾರಿ ಸದ್ಯ ವೆಕೇಷನ್ ಮೂಡ್‌ನಲ್ಲಿದ್ದಾರೆ. ಪತ್ನಿ ಮಾಲ್ಡೀವ್ಸ್‌ನಲ್ಲಿ ಮೋಜು ಮಸ್ತಿ ಮಾಡ್ತಿದ್ದಾರೆ. ಮಾಲ್ಡೀವ್ಸ್ ಸುಂದರ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಶೇರ್ ಮಾಡಿದೆ. 

25

ನಟ ವೈಟ್ ಶರ್ಟ್ ಹಾಗೂ ಕ್ರೀಮ್ ಕಲರ್ ಪ್ಯಾಂಟ್ ಧರಿಸಿಕೊಂಡು ಕುಳಿತು ಮಾಲ್ಡೀವ್ಸ್​ನಲ್ಲಿ ಚಿಲ್ ಮಾಡಿದ್ದಾರೆ. ಈ ಫೋಟೋವನ್ನು ಅವರ ಪತ್ನಿ ಶೇರ್ ಮಾಡಿದ್ದಾರೆ.

35

ನಿರೂಪ್ ಅವರು ಶೇರ್​ ಮಾಡಿಕೊಂಡಿರೋ ಫೋಟೋಗಳನ್ನು ನೋಡಿ ನೆಟ್ಟಿಗರು ಬಗೆ ಬಗೆಯಾಗಿ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಯೂಟಿಫುಲ್ ಕಪಲ್​, ನಿಮ್ಮ ಮೇಲೆ ಯಾರ ದೃಷ್ಟಿ ಬೀಳದಿರಲಿ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. 

45

ಸೆಲೆಬ್ರಿಟಿಗಳಿಗೆ ಮಾಲ್ಡೀವ್ಸ್ ಅಚ್ಚುಮೆಚ್ಚಿನ ತಾಣ. ಸ್ಯಾಂಡಲ್​ವುಡ್ ಮಾತ್ರವಲ್ಲದೆ, ಟಾಲಿವುಡ್, ಬಾಲಿವುಡ್ ಸ್ಟಾರ್​ಗಳೂ ಕೂಡಾ ಮಾಲ್ಡೀವ್ಸ್​ ಪ್ರವಾಸಕ್ಕೆ ಹೋಗುತ್ತಲೇ ಇರುತ್ತಾರೆ.

55

ಸದ್ಯ ದಿಗಂತ್ ಜೊತೆ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ನಿರೂಪ್ ಭಂಡಾರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಗಂತ್ ಜೊತೆಯಾಗಿ ನಿಧಿ ಸುಬ್ಬಯ್ಯ ನಟಿಸಿದ್ದಾರೆ. ಹೊಸ ಬಗೆಯ ಕಥೆಗಳನ್ನ ನಿರೂಪ್ ಕೇಳ್ತಿದ್ದಾರೆ. ಸದ್ಯದಲ್ಲೇ ಮತ್ತಷ್ಟು ಹೊಸ ಸಿನಿಮಾಗಳ ಅಪ್‌ಡೇಟ್ ಜೊತೆ ನಿರೂಪ್ ಕಾಣಿಸಿಕೊಳ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories