ಕನ್ನಡ ಚಿತ್ರರಂಗದ ಅದ್ಭುತ ನಟ ನಿಹಾಲ್ ಮತ್ತು ಖ್ಯಾತ ನಿರ್ದೇಶಕಿ ರಿಷಿಕಾ ಶರ್ಮಾ ಫೆಭ್ರವರಿ 15ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ.
26
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ.
36
ರಿಷಿಕಾ ಮತ್ತು ವಿಹಾಲ್ 9 ವರ್ಷಗಳ ಕಾಲ ಪ್ರೀತಿಸಿದ್ದರು ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಫೋಟೋ ಹಂಚಿಕೊಂಡು ಮದುವೆ ಬಗ್ಗೆ ತಿಳಿಸಿದ್ದರು.
46
ಕನ್ನಡ ಚಿತ್ರರಂಗದಲ್ಲಿ ಭೀಷ್ಮ ಎಂದೇ ಹೆಸರು ಪಡೆದಿರುವ ಜಿವಿ ಅಯ್ಯರ್ ಅವರ ಮೊಮ್ಮಗಳು ರಿಷಿಕಾ ಶರ್ಮಾ. ನಿರ್ದೇಶನ ಕ್ಷೇತ್ರದಲ್ಲಿ ಸೈ ಎನ್ನಿಸಿಕೊಂಡಿದ್ದಾರೆ.
56
ಫೆ.15ರಂದು ಬೆಳಗ್ಗೆ 9 ಗಂಟೆಯಿಂದ 9.45ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಿಹಾಲ್ ರಜಪುತ ಎಂಬುವವರನ್ನು ಮದುವೆ ಆಗಿದ್ದಾರೆ.
66
'ಮಿಲಿಯನ್ ಸಣ್ಣ ಪುಟ್ಟ ಕ್ಷಣಗಳು ನಮ್ಮ ಪ್ರೀತಿಯನ್ನು ಬ್ಯೂಟಿಫುಲ್ ಮಾಡಿದೆ. ನಮ್ಮ 9 ವರ್ಷದ ಸ್ನೇಹ- ಪ್ರೀತಿಗೆ ಇದಾಗಿತ್ತು. ಹರಸಿ ಹಾರೈಸಿ, ನಿಮ್ಮ ಪ್ರೀತಿ ವಿಶ್ವಾನ ಸದಾ ಮುನ್ನೊಡುವೆ' ಎಂದು ಬರೆದುಕೊಂಡಿದ್ದಾರೆ.