ಫೆಬ್ರವರಿ 14 ಪ್ರೇಮಿಗಳ ಪಾಲಿಗೆ ಹಬ್ಬದ ದಿನ. ಜೋಡಿ ಹಕ್ಕಿಗಳು ಈ ದಿನವನ್ನು ಆಚರಿಸುತ್ತಾರೆ, ಸಂಭ್ರಮಿಸುತ್ತಾರೆ, ಗಿಫ್ಟ್ ಎಕ್ಸೇಂಜ್ ಮಾಡಿಕೊಳ್ಳುತ್ತಾರೆ. ಕೇವಲ ಲವರ್ಸ್ ಮಾತ್ರವಲ್ಲದೇ ಪ್ರೀತಿ ಪಾತ್ರರ ಜೊತೆಯೂ ಪ್ರೇಮಿಗಳ ದಿನ ಆಚರಿಸಬಹುದು ಎಂದಿದ್ದಾರೆ ನಟಿ ಸಂಯುಕ್ತ ಹೆಗ್ಡೆ.
27
ಕಿರಿಕ್ ಪಾರ್ಟಿಯ ನಟಿ ಸಂಯುಕ್ತ ಹೆಗ್ಡೆ ಅಮ್ಮನ ಜೊತೆಗಿನ ಸುಂದರ ಫೋಟೋಗಳನ್ನು ಶೇರ್ ಮಾಡಿ ಪ್ರೇಮಿಗಳ ದಿನಕ್ಕೆ ವಿಶ್ ಮಾಡಿದ್ದಾರೆ. ಅಮ್ಮನ ಜೊತೆ ಇರುವ ತರಹೇವಾರಿ ಫೋಟೋಗಳನ್ನು ಸಂಯುಕ್ತಾ ಹಂಚಿಕೊಂಡಿದ್ದಾರೆ. ಸಂಯುಕ್ತ ಫೋಟೋಗಳಿಗೆ ಅಭಿಮಾನಿಗಳಿಂಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
37
ನಟಿ ಸಂಯುಕ್ತ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಟ್ ಅಂಡ್ ಬೋಲ್ಡ್ ನಟಿ ಸಂಯುಕ್ತಾ ಇದೀಗ ಶೇರ್ ಮಾಡಿರುವ ಫೋಟೋಗಳು ಅಭಿಮಾನಿಗಳ ಹೃದಯ ಗೆದ್ದಿದೆ.
47
ತಾಯಿ ಜೊತೆಗಿನ ಸುಂದರ ಫೋಟೋಗಳನ್ನು ಶೇರ್ ಮಾಡಿ ಪ್ರೇಮಿಗಳ ದಿನದ ವಿಶ್ ತಿಳಿಸಿದ್ದಾರೆ. ಫೋಟೋಗಳ ಜೊತೆಗೆ ಸುಂದರ ಸಾಲನ್ನು ಶೇರ್ ಮಾಡಿದ್ದಾರೆ. 'ನನ್ನ ಹೃದಯವನ್ನು ಎಂದಿಗೂ ಬ್ರೇಕ್ ಮಾಡದ ನನ್ನ ಪ್ರೀತಿಗೆ ಪ್ರೇಮಿಗಳ ದಿನದ ಶುಭಾಶಯಗಳು ಅಮ್ಮಾ. ನಾನು ಗೌರವವನ್ನು ಪ್ರೀತಿಸುತ್ತೇನೆ ಮತ್ತು ನನ್ನ ಜೀವನದಲ್ಲಿ ಹೆಚ್ಚು ಪ್ರೀತಿಸುತ್ತೇನೆ ನೀನು ನನ್ನ ಸುರಕ್ಷಿತ ಸ್ಥಳ' ಎಂದು ಬರೆದುಕೊಂಡಿದ್ದಾರೆ.
57
ಸಂಯುಕ್ತಾ ಫೋಟೋಗಳಿಗೆ ಮೆಚ್ಚುಗೆಯ ಕಾಮೆಂಟ್ ಹರಿದುಬರುತ್ತಿದೆ. ಬೆಸ್ಟ್ ಫೀಲಿಂಗ್ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಕಾಮೆಂಟ್ ಮಾಡಿ ಸುಂದರವಾಗಿದೆ, ತಾಯಿ ಯಾವತ್ತೂ ಮಕ್ಕಳ ಹೃದಯ ಬ್ರೇಕ್ ಮಾಡಲ್ಲ ಎಂದು ಹೇಳುತ್ತಿದ್ದಾರೆ.
67
ನಟಿ ಸಂಯುಕ್ತಾ ಸದಾ ಫಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸಿಕ್ಕಾಪಟ್ಟೆ ಬೋಲ್ಡ್ ನಟಿ ಸಂಯುಕ್ತಾ ವಿದೇಶಿ ಯುವಕನ ಜೊತೆ ಡೇಟಿಂಗ್ ಮಾಡುತ್ತಿದ್ದರು. ಬ್ರೇಕಪ್ ಮಾಡಿಕೊಂಡಿರುವ ನಟಿ ಸಿಂಗಲ್ ಆಗಿದ್ದಾರೆ. ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಆಗಾಗ ಪರೋಕ್ಷವಾಗಿ ಹೇಳುತ್ತಿರುತ್ತಾರೆ.
77
ಸದ್ಯ ಸಂಯುಕ್ತ ಕನ್ನಡದದ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಣಾ ಮತ್ತು ಕ್ರೀಮ್. 2019ರ ಬಳಿಕ ಸಂಯುಕ್ತ ಮತ್ತೆ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರಿಕ್ ಪಾರ್ಟಿ ಬಳಿಕ ಸಂಯುಕ್ತಾ ಒಂದಿಷ್ಟು ವಿವಾದಗಳನ್ನು ಮಾಡಿಕೊಂಡಿದ್ದರು. ವಿವಾದಗಳ ಬಳಿಕ ಕನ್ನಡ ಸಿನಿಮಾರಂಗದಿಂದ ದೂರ ಆದರು. ಇದೀಗ ಮತ್ತೆ ಕನ್ನಡ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ.