ಮಗನೊಂದಿಗೆ ದುಬೈ ಪ್ರವಾಸ ಹೋದ ದರ್ಶನ್ ಪತ್ನಿ, ಸ್ಟೈಲಿಶ್ ಲುಕ್‌ಗೆ ಸೂಪರ್ ಅತ್ತಿಗೆ ಎಂದ ಫ್ಯಾನ್ಸ್!

Published : May 11, 2024, 04:11 PM IST

ದರ್ಶನ್ ತೂಗ್ ದೀಪ್ ಅವರ ಪತ್ನಿ ವಿಜಯಲಕ್ಷ್ಮಿ ಮಗ ವಿನೀಶ್ ಜೊತೆ ದುಬೈ ಪ್ರವಾಸದಲ್ಲಿದ್ದು, ಅಲ್ಲಿನ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.   

PREV
17
ಮಗನೊಂದಿಗೆ ದುಬೈ ಪ್ರವಾಸ ಹೋದ ದರ್ಶನ್ ಪತ್ನಿ,  ಸ್ಟೈಲಿಶ್ ಲುಕ್‌ಗೆ ಸೂಪರ್ ಅತ್ತಿಗೆ ಎಂದ ಫ್ಯಾನ್ಸ್!

ಸ್ಯಾಂಡಲ್ ವುಡ್ ನಟ ದರ್ಶನ್ ತೂಗ್ ದೀಪ್ (Darshan Thoogudeep) ಅವರ ಪತ್ನಿ ವಿಜಯಲಕ್ಷ್ಮಿ ಹೆಚ್ಚಾಗಿ ಟ್ರಾವೆಲ್ ಮಾಡುತ್ತಾ ಫೋಟೋ ಶೇರ್ ಮಾಡುತ್ತಿರುತ್ತಾರೆ. ಈ ಬಾರಿ ವಿಜಯಲಕ್ಷ್ಮಿ ಮಗನೊಂದಿಗೆ ದುಬೈಗೆ ಭೇಟಿ ನೀಡಿದ್ದಾರೆ. 
 

27

ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ವಿಜಯಲಕ್ಷ್ಮೀ (Vijayalakshmi Darshan) ದುಬೈನ ಸುಂದರ ತಾಣಗಳಲ್ಲಿ ಮಗನೊಂದಿಗೆ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. 
 

37

ವಿಜಯಲಕ್ಷ್ಮೀ ಬಿಳಿ ಬಣ್ಣದ ಮೇಲೆ ಪರ್ಪಲ್ ಬಣ್ಣದ ಫ್ಲೋರಲ್ ಡಿಸೈನ್ (Floral Design) ಇರುವಂತಹ ಡ್ರೆಸ್ ದರಿಸಿದ್ದು, ಅದಕ್ಕೆ ಮ್ಯಾಚ್ ಆಗುವಂತೆ ಕೊರಳಿಗೆ ದೊಡ್ಡದಾದ ಬಿಳಿ ಮುತ್ತಿನ ಹಾರವನ್ನು ಧರಿಸಿದ್ದು, ಸಖತ್ತಾಗಿ ಕಾಣಿಸುತ್ತಿದ್ದಾರೆ. 
 

47

ವಿಜಯಲಕ್ಷ್ಮಿ ತಮ್ಮ ಫ್ಯಾಮಿಲಿ ಜೊತೆ ದುಬೈ ಪ್ರವಾಸ ಮಾಡ್ತಿದ್ದಾರೆ. ಅವರು ಶೇರ್ ಮಾಡಿರೋ ಫೋಟೋಗಳಲ್ಲಿ ಜೊತೆಯಾಗಿ ಬೇರೋಬ್ಬರೂ ಇದ್ದಾರೆ, ಅಲ್ಲದೆ ಮಗ ವಿನೀಶ್ ದರ್ಶನ್(Vineesh Darshan) ಜೊತೆ ಮತ್ತಿಬ್ಬರು ಮಕ್ಕಳು ಇದ್ದಾರೆ. ಅದು ದರ್ಶನ್ ಅವರ ಸಹೋದರ ದಿನಕರ್ ತೂಗ್ ದೀಪ್ ಅವರ ಮಕ್ಕಳು ಎನ್ನಲಾಗುತ್ತಿದೆ. 
 

57

ಇನ್ನು ಮುದ್ದು ಮುದ್ದಾಗಿ ಕಾಣಿಸ್ತಿರೋ ವಿಜಯಲಕ್ಷ್ಮಿ ಫೋಟೋ ನೋಡಿ ಅಭಿಮಾನಿಗಳು ಅತ್ತಿಗೆ ಸೂಪರ್ ಆಗಿ ಕಾಣಿಸ್ತಿದ್ದೀರಿ, ಕ್ಯೂಟ್ ಆಗಿ ಕಾಣಿಸ್ತಿದ್ದೀರಿ ಅತ್ತಿಗೆ, ಅತ್ತಿಗೆಮ್ಮ ಎಂದು ಹಲವರು ಹಾರ್ಟ್ ಇಮೋಜಿ ಹಾಕಿ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. 
 

67

ವಿಜಯಲಕ್ಷ್ಮಿಯವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಒಂದಲ್ಲ ಒಂದು ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. ಹೆಚ್ಚಾಗಿ ತಮ್ಮ ಸ್ಟೈಲ್ (Style), ಡ್ರೆಸ್ಸಿಂಗ್ (Dressing)ನಿಂದಾಗಿ ಹೆಸರು ಪಡೆದಿರುವ ವಿಜಯಲಕ್ಷ್ಮೀ ಒಂಥರಾ ಫ್ಯಾಷನ್ ಐಕಾನ್ (Fashion Icon) ಎಂದೇ ಹೇಳಬಹುದು. 
 

77

ಇನ್ನು ವಿಜಯಲಕ್ಷ್ಮಿ ಕೆಲವೊಮ್ಮೆ ತಮ್ಮ ಖಾಸಗಿ ವಿಚಾರದಿಂದಲೂ ಸುದ್ದಿಯಲ್ಲಿರುತ್ತಾರೆ. ಕೆಲ ಸಮಯದ ಹಿಂದಷ್ಟೇ ವಿಜಯಲಕ್ಷ್ಮೀಯವರು ಪವಿತ್ರ ಗೌಡರ ಗಂಡನ ಜೊತೆಗಿನ ಫೋಟೋಗಳನ್ನು ಶೇರ್ ಮಾಡುವ ಮೂಲಕ ಭಾರಿ ಸುದ್ದಿಯಾಗಿದ್ದರು. ಬಳಿಕ ಆ ಸುದ್ದಿ ತಣ್ಣಗಾಗಿತ್ತು. 
 

Read more Photos on
click me!

Recommended Stories