ಪ್ಯಾಂಟ್ ಬಟನ್ ಬಿಚ್ಚಿ ಪೋಸ್ ಕೊಟ್ಟ ರಾಗಿಣಿ ದ್ವಿವೇದಿ: ತುಪ್ಪದ ಬೆಡಗಿ ಹಾಟ್‌ನೆಸ್‌ಗೆ ಫ್ಯಾನ್ಸ್ ಫಿದಾ!

Published : May 11, 2024, 01:33 PM IST

ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಲುಕ್ ಅಲ್ಲಿ ಹೊಳೆಯುತ್ತಿದ್ದಾರೆ. ಮೋಹಕ ನೋಟ, ಮಾದಕ ಹೊಳಿಪಿನೊಂದಿಗೆ ಕಣ್ಮನ ಸೆಳೆಯುತ್ತಿದ್ದಾರೆ.

PREV
17
ಪ್ಯಾಂಟ್ ಬಟನ್ ಬಿಚ್ಚಿ ಪೋಸ್ ಕೊಟ್ಟ ರಾಗಿಣಿ ದ್ವಿವೇದಿ: ತುಪ್ಪದ ಬೆಡಗಿ ಹಾಟ್‌ನೆಸ್‌ಗೆ ಫ್ಯಾನ್ಸ್ ಫಿದಾ!

ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ಹೊಸ ಹಾಟ್ ಪೋಟೋಶೂಟ್ ಮಾಡಿಸಿದ್ದು, ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ತುಪ್ಪದ ಬೆಡಗಿ ಎಂದರೆ ತಟ್ಟನೆ ನೆನಪಾಗುವುದು ರಾಗಿಣಿ ದ್ವಿವೇದಿ.

27

ಜೀನ್ಸ್ ಪ್ಯಾಂಟ್, ಕ್ರಾಪ್ ಟಾಪ್ ತೊಟ್ಟು ರಾಗಿಣಿ ಕ್ಯಾಮರಾ ಮುಂದೆ ನಿಂತಿದ್ದಾರೆ. ಆದರೆ ಜೀನ್ಸ್ ಪ್ಯಾಂಟ್ ಬಟನ್ ತೆಗೆದು ಮಾದಕ ನೋಟ ಬೀರಿದ್ದಾರೆ. ಆಕೆ ಬೋಲ್ಡ್‌ನೆಸ್ ನೋಡಿ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. 

37

ರಾಗಿಣಿಯ ಈ ಬಿಂದಾಸ್ ಫೋಟೊಶೂಟ್‌ಗೆ ತರಹೇವಾರಿ ಕಾಮೆಂಟ್ಸ್ ಬರ್ತಿದೆ. ಕೆಲವರು ಕೆಟ್ಟ ಕೆಟ್ಟ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಆದರೆ ತುಪ್ಪದ ಹುಡುಗಿ ಮಾತ್ರ ಅದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೆಲವೇ ಗಂಟೆಗಳಲ್ಲಿ ಈ ಹಾಟ್ ಫೋಟೊಗಳಲ್ಲಿ ಸಾವಿರಾರು ಲೈಕ್ಸ್ ಬಂದಿದೆ.

47

ಈ ವರ್ಷ ರಾಗಿಣಿ ನಟನೆಯ 'ಈ-ಮೇಲ್' ಸಿನಿಮಾ ಬಂದು ಹೋಗಿದ್ದು ಯಾರಿಗೂ ಗೊತ್ತಾಗಲಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೊಶೂಟ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಹೊಸ ಫೋಟೊಶೂಟ್‌ನಲ್ಲಿ ಆಕೆಯ ಅವತಾರ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

57

ಇತ್ತೀಚೆಗೆ ಸಾಲು ಸಾಲು ಫೋಟೋಶೂಟ್‌ನಲ್ಲಿ ರಾಗಿಣಿ ಕಾಣಿಸಿಕೊಂಡಿದ್ದಾರೆ. ಪ್ರತಿ ದಿನ ಒಂದೊಂದು ಲುಕ್‌ನಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿ ಶೇರ್ ಮಾಡುತ್ತಿದ್ದಾರೆ. ಸದ್ಯ ಆಕೆ ಕೈಯಲ್ಲಿ ದೊಡ್ಡ ಸಿನಿಮಾಗಳು ಯಾವ್ದು ಇಲ್ಲ. ಮಲಯಾಳಂನಲ್ಲಿ ಮೋಹನ್ ಲಾಲ್ ಜೊತೆ 'ವೃಷಭ' ಚಿತ್ರದಲ್ಲಿ ಮಾತ್ರ ಬಣ್ಣ ಹಚ್ಚಿದ್ದಾರೆ.

67

ಸ್ಯಾಂಡಲ್‌ವುಡ್‌ನಲ್ಲಿ ವೀರ ಮದಕರಿ ಸಿನಿಮಾ ಮೂಲಕ ಕಾಲಿಟ್ಟ ನಟಿ ರಾಗಿಣಿ ದ್ವಿವೇದಿ, ಕೆಂಪೇಗೌಡ ಸಿನಿಮಾ ಮೂಲಕ ಖ್ಯಾತಿ ಗಳಿಸಿದರು. ಕಿಚ್ಚ ಸುದೀಪ್ ಅವರ ಜೋಡಿಯಾಗಿ ಚಿತ್ರರಂಗಕ್ಕೆ ಬಂದ ಅವರು, ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು.

77

ಕನ್ನಡ ನಿರ್ದೇಶಕ 'ನಂದ ಕಿಶೋರ್' ಸಾರಥ್ಯದ 'ವೃಷಭ' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ರಾಗಿಣಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories