ಊಟಿ: ಫ್ರೆಂಡ್ಸ್, ರಾಯನ್ ಜೊತೆ ಮೇಘನಾ ರಾಜ್ ಮಸ್ತಿ, ಫೋಟೋಸ್ ವೈರಲ್

First Published | May 19, 2023, 3:39 PM IST

ಫ್ರೆಂಡ್ಸ್ ಫ್ಯಾಮಿಲಿ ಜೊತೆ ಊಟಿಯಲ್ಲಿ ಮಕ್ಕಳ ಬೇಸಿಗೆ ದಿನ ಕಳೆಯುತ್ತಿರುವ ಮೇಘನಾ ರಾಜ್. ರಾಯನ್ ಪೋಸ್‌ ನೋಡಿ ಎಂದ ನೆಟ್ಟಿಗರು...

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ಮತ್ತು ಪುತ್ರ ರಾಯನ್ ರಾಜ್ ಸರ್ಜಾ ಬೇಸಿಗೆ ರಜೆಯನ್ನು ಊಟಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. 

ಮೇಘನಾ ರಾಜ್‌ ಜೊತೆ ನಟ ಪ್ರಜ್ವಲ್ ದೇವರಾಜ್, ರಾಗಿಣಿ ಪ್ರಜ್ವಲ್ ಮತ್ತು ನಿರ್ದೇಶಕ ಪನ್ನಗಾಭರಣ ಫ್ಯಾಮಿಲಿ ಕೂಡ ತೆರಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.

Tap to resize

'ನಾವು...ನಾವುಗಳು ಮಾತ್ರ. ನಾವು ಸ್ನೇಹಿತರನೇ ಕುಟುಂಬವಾಗಿ ಆಯ್ಕೆ ಮಾಡಿಕೊಂಡಿದ್ದೀವಿ' ಎಂದು ಮೇಘನಾ ಬರೆದುಕೊಂಡಿದ್ದಾರೆ. 

ಚಿರಂಜೀವಿ ಸರ್ಜಾ ಅಗಲಿದ ನಂತರ ಜೀವನ ಪ್ರತಿಯೊಂದು ಕ್ಷಣದಲ್ಲೂ ಮೇಘನಾ ರಾಜ್‌ ಜೊತೆ ನಿಂತವರು ಸ್ನೇಹಿತರು. ಹೀಗಾಗಿ ಎಲ್ಲೇ ಹೋದರು ಜೊತೆಗಿರುತ್ತಾರೆ. 

ಸದ್ಯ ಮೇಘನಾ ರಾಜ್‌ ಮತ್ತು ಡೈನಾಮಿಕ್ ಪ್ರಿನ್ಸ್‌ ಪ್ರಜ್ವಲ್ ದೇವರಾಜ್‌ ನಟಿಸುತ್ತಿರುವ ತತ್ಸಮ ತದ್ಭವ ಸಿನಿಮಾವನ್ನು ಸ್ನೇಹಿತರ ಪನ್ನಗಾಭರಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

ಮೇಘನಾ ರಾಜ್ ಸದಾ ಖುಷಿಯಾಗಿರಬೇಕು ಜೀವನ ಎಂಜಾಯ್ ಮಾಡಬೇಕು ರಾಯನ್‌ ರಾಜ್‌ಗೆ ತಾಯಿ ಮಾತ್ರವಲ್ಲ ತಂದೆ ಪ್ರೀತಿಯನ್ನು ಕೊಡುತ್ತಿದ್ದಾರೆ ಸೂಪರ್ ಮಾಮ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

Latest Videos

click me!