ಸ್ಯಾಂಡಲ್‌ವುಡ್ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು. ಹಾಟ್ ಫೋಟೋ ಹಂಚಿಕೊಂಡಿದ್ದಾರೆ.
ಶುಗರ್ ಆಂಡ್ ಸ್ಪೈಸ್. ಸಮ್ಮರ್ ತುಂಬಾನೇ ಬೇಗ ಬಂದಿದೆ ಎಂದು ರಾಗಿಣಿ ದ್ವಿವೇದಿ ಬರೆದುಕೊಂಡಿದ್ದಾರೆ. ಗ್ರೀನ್ ಬಣ್ಣದ ಸ್ವಿಮ್‌ಸೂಟ್ ಧರಿಸಿ ವೈಟ್ ಬಣ್ಣದ ಬಾತ್ ಟಬ್‌ನಲ್ಲಿ ಕುಳಿತುಕೊಂಡಿದ್ದಾರೆ.
ರಾಗಿಣಿ ಫಿಟ್ನೆಸ್ ಮತ್ತು ಹಾಟ್ ಲುಕ್ ನೋಡಿ ಕೆಲವರು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ಈ ರೀತಿ ಹಾಕುವುದರಿಂದ ಅವಕಾಶ ಸಿಗುವುದಿಲ್ಲ ಎಂದು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.
ಸದ್ಯ ರಾಗಿಣಿ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಿಂದಿ ಸಿನಿಮಾ ಸಹಿ ಮಾಡಿ ಲಂಡನ್‌ನಲ್ಲಿ ಚಿತ್ರೀಕರಣ ಕೂಡ ಆರಂಭಿಸಿದ್ದಾರೆ ಎನ್ನಲಾಗಿದೆ.
ರಾಗಿಣಿ ಸಹಿ ಮಾಡಿರುವ ಹಿಂದಿ ಚಿತ್ರದ ಹೆಸರು ವಾಲ್ಕೇರ್ ಹೌಸ್ ಎಂದು. ಈಗಾಗಲೇ ಲಂಡನ್‌ನಲ್ಲಿ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇದು ಹಾರರ್ ಸಿನಿಮಾ.
ಬಾಲಿವುಡ್ ಸೇರಿದಂತೆ ಈ ವರ್ಷ ತಮ್ಮ ನಟನೆಯ ಆರಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರಲಿವೆ. 2023 ನನ್ನ ಪಾಲಿಗೆ ಅದೃಷ್ಟದ ವರ್ಷ ಆಗಲಿದೆ. ಚಳಿ ಪ್ರದೇಶದಲ್ಲಿ ಹಿಂದಿ ಚಿತ್ರದ ಶೂಟಿಂಗ್ ಮಾಡಿದ್ದೇವೆ ಎಂದು ಚಿತ್ರದ ಶೂಟಿಂಗ್ ಅನುಭವವನ್ನು ರಾಗಿಣಿ ಮಾಧ್ಯಮಗಳ ಮುಂದೆ ಹಂಚಿಕೊಂಡರು.