ಉಮಾಪತಿ ಫಿಲಂ ಸಿಟಿ ನಿರ್ಮಾಣಕ್ಕೆ ಭೂಮಿ ಪೂಜೆ; 25 ಎಕರೆಯಲ್ಲಿ 175 ಕೋಟಿ ವೆಚ್ಚದ ಯೋಜನೆ!

First Published | Aug 14, 2021, 1:11 PM IST

ಬೆಂಗಳೂರಿನಲ್ಲಿ ಶುರುವಾಗುತ್ತಿದೆ ಫಿಲಂ ಸಿಟಿ. ಕುಟುಂಬಸ್ಥರ ಜೊತೆ ಭೂಮಿ ಪೂಜೆ ಮಾಡಿದ ನಿರ್ಮಾಪಕ ಉಮಾಪತಿ.

ಬಹು ಕೋಟಿ ವೆಚ್ಚದ ಚಿತ್ರನಗರಿ ನಿರ್ಮಾಣಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಚಾಲನೆ ನೀಡಿದ್ದಾರೆ.
ನಾಗರಪಂಚಮಿ ಹಬ್ಬದ ಪ್ರಯುಕ್ತ ತಮ್ಮ ಕುಟುಂಬದ ಜತೆಗೂಡಿ ಭೂಮಿ ಪೂಜೆ ನೆರವೇರಿಸಿದ್ದಾರೆ.
Tap to resize

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರವಿಶಂಕರ್‌ ಆಶ್ರಮದ ಬಳಿ ಇರುವ ಉತ್ರಿ ಎಂಬಲ್ಲಿ 25 ಎಕರೆ ಜಾಗದಲ್ಲಿ ಸುಮಾರು 175 ಕೋಟಿ ವೆಚ್ಚದಲ್ಲಿ ಉಮಾಪತಿ ಫಿಲಂ ಸಿಟಿ ನಿರ್ಮಿಸುತ್ತಿದ್ದಾರೆ ಉಮಾಪತಿ.
ಮುಂದಿನ ವರ್ಷದಿಂದ ಎಲ್ಲಾ ರೀತಿಯ ಚಿತ್ರೀಕರಣಕ್ಕೆ ಲಭ್ಯವಾಗುವಂತೆ ಫಿಲಂ ಸಿಟಿ ನಿರ್ಮಾಣ ಕಾರ್ಯವನ್ನು ಮುಗಿಸುವ ಯೋಜನೆ ಉಮಾಪತಿ ಅವರದ್ದು. ಇದು ತಮ್ಮ ಕನಸಿನ ಯೋಜನೆ ಎನ್ನುತ್ತಾರೆ ಉಮಾಪತಿ.
'ರಾಬರ್ಟ್' ನಂತರ 'ಮದಗಜ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಉಮಾಪತಿ.
ಉಮಾಪತಿ ಅವರು ಫಿಲಂ ಸಿಟಿ ಯೋಜನೆಗೆ ಅನೇಕ ನಿರ್ದೇಶಕರು ಹಾಗೂ ನಿರ್ಮಾಪಕರು ಸಂತಸ ವ್ಯಕ್ತ ಪಡಿಸಿದ್ದಾರೆ.

Latest Videos

click me!