ಬೆಂಗಳೂರು(ಆ. 08) ಹಿರಿಯ ನಟಿ ಲೀಲಾವತಿ ಮನೆಗೆ ಕನ್ನಡ ನಟಿಯರು ಭೇಟಿ ನೀಡಿದ್ದಾರೆ. ಕಾಲುಜಾರಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ್ದಾರೆ. ಕಲಾವಿದರಾದ ಸುಧಾರಾಣಿ, ಶ್ರುತಿ ಹಾಗೂ ಮಾಳವಿಕ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಆರೋಗ್ಯ ವಿಚಾರಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡಿದ್ದಾರೆ 83 ವಯಸ್ಸಿನ ಹಿರಿಯ ಜೀವ ಪೆಟ್ಟಿನಿಂದ ಚೇತರಿಕೆ ಕಂಡಿದ್ದಾರೆ. ಮನೆಗೆ ಭೇಟಿ ನೀಡಿದವರನ್ನು ಬರಮಾಡಿಕೊಂಡ ಲೀಲಾವತಿ ಮತ್ತು ವಿನೋದ್ ರಾಜ್ ಲೀಲಾವತಿಯವರು ಹಳೆಯ ಗೀತೆಯನ್ನು ಹಾಡಿ ನಟಿಮಣಿಯರಿಗೆ ಆಶೀರ್ವಾದ ಮಾಡಿದರು. Sandalwood Actress Shruthi, Sudharani visits senior artist leelavathi House Nelamangala Bengaluru ಮನೆಗೆ ಬಂದವರನ್ನು ಹಾಡಿ ರಂಜಿಸಿದ ಲೀಲಾವತಿ