ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಿಂಡ್ರೆಲಾ ರಾಧಿಕಾ ಪಂಡಿತ್ ಹೊಸ ವರ್ಷ 2025 ಸಖತ್ ಸರಳವಾಗಿ ಆಚರಣೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ರಾಧಿಕಾ ಪಂಡಿತ್ ಹೊಸ ವರ್ಷ ಹೇಗಿತ್ತು ಎಂದು ಫೋಟೋ ಅಪ್ಲೋಡ್ ಮಾಡಿದ್ದಾರೆ. ಫೋಟೋದಲ್ಲಿ ನಾಲ್ವರನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
'ಕೋಸಿ ವೈಬ್ಸ್ ಆಂಡ್ ಹೊಸ ವರ್ಷದ ಶುಭಾಶಯಗಳು. ಈ ವರ್ಷ ಪೂರ್ತಿ ಖುಷಿ, ಪ್ರೀತಿ, ಸಂತೋಚದಿಂದ ತುಂಬಿರಲಿ. ನಮ್ಮಿಂದ ನಿಮಗೆ ಹೊಸ ವರ್ಷಗಳು' ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.
ಸೀಮೆಂಟ್ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕ್ರೀಮ್ ಬಣ್ಣದ ಟಾಪ್‌ನಲ್ಲಿ ರಾಧಿಕಾ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಜೀನ್ಸ್‌ಗೆ ಸಿಂಪಲ್ ಶರ್ಟ್ ಧರಿಸಿ ಮಿಂಚಿದ್ದಾರೆ ಯಶ್. ಮಕ್ಕಳಿಬ್ಬರು ಕಂಫರ್ಟ್ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಹುತೇಕ ಸಮಯ ಹೊಸ ವರ್ಷವನ್ನು ರಾಕಿಂಗ್ ದಂಪತಿಗಳು ಪ್ರಯಾಣ ಮಾಡಿ ವಿಶೇಷ ಸ್ಥಳದಲ್ಲಿ ಆಚರಿಸಿಕೊಳ್ಳುತ್ತಾರೆ. ಕಳೆದ ವರ್ಷ ಹಾಗೂ ಈ ವರ್ಷ ಸರಳವಾಗಿ ಆಚರಿಸಿದ್ದಾರೆ.
ಟಾಕ್ಸಿಕ್ ಸಿನಿಮಾದ ಚಿತ್ರೀಕರಣದಲ್ಲಿ ಯಶ್ ಸಖತ್ ಬ್ಯುಸಿಯಾಗಿದ್ದಾರೆ. 2025ರಲ್ಲಿ ಟಾಕ್ಸಿಕ್ ರಿಲೀಸ್ ಆಗಲಿದೆ. ಇದರ ಜೊತೆಗೆ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಯಶ್ ನಟಿಸಲಿದ್ದಾರಂತೆ.