2020: ಈ ವರ್ಷ ಕಾದು ನೋಡಬಹುದಾದ ಟಾಪ್ 20 ಚಿತ್ರಗಳಿವು

First Published Jan 4, 2020, 3:20 PM IST

ವರ್ಷ ಕಳೆದು ಮತ್ತೊಂದು ವರ್ಷಕ್ಕೆ ಕಾಲಿಡುವ ಹೊತ್ತಿನಲ್ಲಿ ಹೊಸ ಲೆಕ್ಕಾಚಾರಗಳು, ಹೊಸ ಕನಸುಗಳು, ಹೊಸ ಯೋಜನೆಗಳು, ಹೊಸ ನಿರ್ಧಾರಗಳ ಸುತ್ತ ಮಾತು- ಕತೆ ನಡೆಯುತ್ತವೆ. ಹಾಗೆ ಚಿತ್ರರಂಗದಲ್ಲೂ 2020 ಹೊಸ ವರ್ಷಕ್ಕಾಗಿ ಟಾಪ್ 20 ಸಿನಿಮಾಗಳು ಕಾದಿವೆ. ಅವುಗಳನ್ನು ಕಾದು ನೋಡಬಹುದು ಎಂಬುದಕ್ಕೆ ಹಲವು ಕಾರಣಗಳಿವೆ.

ನಟ ದರ್ಶನ್ ತಮ್ಮ ಹಿಂದಿನ ಚಿತ್ರಗಳ ರೀತಿ 'ರಾಬರ್ಟ್‌'ನಲ್ಲಿ ಕಾಣಿಸಿಕೊಂಡಿಲ್ಲ. ಅಷ್ಟರ ಮಟ್ಟಿಗೆ ಹೊಸ ಇಮೇಜ್ ನೊಂದಿಗೆ ಈ ಚಿತ್ರವನ್ನು ನಿರ್ದೇಶಕ ತರುಣ್ ಸುಧೀರ್ ರೂಪಿಸಿದ್ದಾರೆ.
undefined
ಪ್ಯಾನ್ ಇಂಡಿಯಾ ಸಿನಿಮಾ ಎನಿಸಿಕೊಂಡು, ಭಾರತೀಯ ಚಿತ್ರರಂಗವೇ ಒಮ್ಮೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ಸಿನಿಮಾ ಪರದೆ ಆಚೆಗೂ ಗ್ಲೋಬಲ್ ನೇಮ್ ಎನಿಸಿಕೊಂಡಿರುವ ‘ಕೆಜಿಎಫ್’ ಚಿತ್ರದ ಮೊದಲ ಭಾಗದ ಈ ಗೆಲುವು ಮುಂದುವರಿದ ಚಾಪ್ಟರ್-2 ಮೇಲಿನ ಭರವಸೆಗೆ ಕಾರಣವಾಗಿದೆ.
undefined
'ಕಬ್ಜ'ದಲ್ಲಿ ರೆಟ್ರೋ ಸ್ಟೈಲಿನಲ್ಲಿ ಭೂಗತ ಲೋಕದ ಕತೆಯನ್ನು ಹೇಳುವ ಸಾಹಸ ಮಾಡುತ್ತಿರುವ ನಿರ್ದೇಶಕ ಆರ್ ಚಂದ್ರು, ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಬ್ರಾಂಡ್ ಕೂಡ ಮಾಡಿಕೊಂಡಿದ್ದಾರೆ.
undefined
'ಚಾರ್ಲಿ 777' ಇಲ್ಲಿ ರಕ್ಷಿತ್ ಶೆಟ್ಟಿ ಅವರ ಪಾತ್ರ, ಚಿತ್ರದಲ್ಲಿ ಕಾಣಿಸಿಕೊಂಡಿರುವ ನಾಯಿ ಮುಖ್ಯ ಪಾತ್ರಧಾರಿಯಾಗಿರುವುದು ಕಂಟೆಂಟ್ ಸಿನಿಮಾ ಎನಿಸಿಕೊಂಡಿದೆ.
undefined
ಸಾಮಾನ್ಯವಾಗಿ ಕನ್ನಡದಲ್ಲಿ ಮುಂದುವರಿದ ಭಾಗಗಳಿಗೆ ಹೆಚ್ಚು ಮಹತ್ವ ಸಿಗದೆ ಹೋದರೂ, ಶಿವಣ್ಣ ಅವರ ಕಾರಣಕ್ಕೆ ‘ಭಜರಂಗಿ 2’ ಅವರಿಗೆ ಈ ವರ್ಷ ದೊಡ್ಡ ಮಟ್ಟದಲ್ಲಿ ಯಶಸ್ಸು ಕರುಣಿಸುತ್ತದೆಂಬ ನಂಬಿಕೆ ಇದೆ.
undefined
ಸದ್ಯ ಡೈಲಾಗ್ ಹಾಗೂ ಆ್ಯಕ್ಷನ್ ಲುಕ್‌ಗಳಿಂದಲೇ ‘ಪೊಗರು’ ಹವಾ ಹೆಚ್ಚಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಡೈಲಾಗ್ ಟ್ರೇಲರ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
undefined
ಸಿಪಾಯಿ ಚಿತ್ರದ ಮೂಲಕ ಬಂದ ಮಹೇಶ್ ಸಿದ್ದಾರ್ಥ್, ‘ಗರುಡ’ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ.
undefined
ಶ್ರೀಮುರುಳಿ ಇನ್ನೂ ಬೇಡಿಕೆಯಲ್ಲಿರುವ ಹೀರೋ ಎನ್ನುವ ಕಾರಣಕ್ಕೂ ‘ಮದಗಜ’ನ ಸುತ್ತ ಭರವಸೆಯ ಮಾತುಗಳು ಕೇಳಿ ಬರುತ್ತಿವೆ.
undefined
ಇಲ್ಲಿವರೆಗೂ ಆ್ಯಕ್ಷನ್ ಚಿತ್ರಗಳನ್ನೇ ಮಾಡಿಕೊಂಡು ಮಾಡುತ್ತಿರುವ ಮಾಸ್ ಹೀರೋ ಅನೀಶ್ ಅವರಿಗೆ ಈ ಚಿತ್ರದ ನಾಯಕನಿಗೆ ಈ ಸಿನಿಮಾ ಅಳಿವು ಉಳಿವಿನ ಪ್ರಶ್ನೆ.
undefined
‘ರಾಜಕುಮಾರ’ ಚಿತ್ರದ ಮೂಲಕ ಬ್ಲಾಕ್ ಬಾಸ್ಟರ್ ಹಿಟ್ ಕೊಟ್ಟ ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ರಾಜ್‌ಕುಮಾರ್ ಮತ್ತೆ ಜತೆಯಾದಾಗಲೇ ‘ಯುವರತ್ನ’ ಮೇಲಿನ ಕ್ರೇಜ್ ಹೆಚ್ಚಾಯಿತು.
undefined
ಕಿಶೋರ್ ಮೂಡಬಿದ್ರೆ ನಿರ್ದೇಶನದ ಚಿತ್ರವಿದು. ಬೇರೆ ಬೇರೆ ರೀತಿಯ ಚಿತ್ರಗಳನ್ನು ಮಾಡುತ್ತಲೇ ಬರುತ್ತಿರುವ ವಿಜಯ್ ರಾಘವೇಂದ್ರ ಅವರಿಗೆ ‘ಮಾಲ್ಗುಡಿ ಡೇಸ್’ ವಿಭಿನ್ನ ಚಿತ್ರವಾಗಿ ಕಾಣುತ್ತಿ
undefined
'ಪ್ರೇಮಂ ಪೂಜ್ಯಂ' ಇದು ನಟ ಪ್ರೇಮ್ ಅವರ ೨೫ನೇ ಸಿನಿಮಾ. ಬೇರೆ ರೀತಿಯ ಹೊಸ ಲುಕ್‌ನಲ್ಲಿ ರೀ ಎಂಟ್ರಿ ಕೊಡಬಹುದಾದ ಸಿನಿಮಾ ಎಂಬುದು ಎಂಬುದು ಸ್ವತಃ ಪ್ರೇಮ್ ಅವರ ನಂಬಿಕೆ
undefined
ಇದು ‘ಟಗರು’ ಕಾಂಬಿನೇಷನ್‌ನ ಮತ್ತೊಂದು ಸಿನಿಮಾ. ನಿರ್ದೇಶಕರಾಗಿ ಸೂರಿ, ಡಾಲಿ ಪಾತ್ರದ ಮೂಲಕ ಫೇಮ್ ಆದ ಧನಂಜಯ್ ಹೀರೋ ಆಗಿರುವುದು ಈ ಚಿತ್ರದ ಬಹು ದೊಡ್ಡ ಬಂಡವಾಳ.
undefined
ಇದೊಂದು ಕ್ರೈಮ್ ಕತೆಯನ್ನು ಸಿನಿಮಾ. ರಂಗನಾಯಕಿ ಸಿನಿಮಾ ನಂತರ ದಯಾಳ್ ಕೈಗೆತ್ತಿಕೊಂಡಿರುವ ಈ ಚಿತ್ರವಿದು. ‘ಒಂಭತ್ತನೇ ದಿಕ್ಕು’ ಎನ್ನುವ ಹೆಸರಿನಲ್ಲೇ ಒಂದು ವಿಶೇಷತೆ ಇದೆ.
undefined
ಈ ಚಿತ್ರದ ಟೀಸರ್ ಬಿಡುಗಡೆ ಆದಾಗಲೇ ಚಿತ್ರದ ಬಗ್ಗೆ ಒಂದು ಕುತೂಹಲ ಹುಟ್ಟಿಕೊಂಡಿದ್ದು ನಿಜ. ಅಜಯ್ ರಾವ್ ಅವರಿಗೆ ಭರವಸೆ ಮೂಡಿಸಿರುವ ಸಿನಿಮಾ ಇದು.
undefined
ಈ ಹಿಂದೆ ‘ಮುಂಗಾರು ಮಳೆ’ ಹಾಗೂ ‘ಗಾಳಿಪಟ’ ಚಿತ್ರಗಳ ಮೂಲಕ ಯೋಗರಾಜ್ ಭಟ್, ಗಣೇಶ್ ಜೋಡಿ ಹೊಸ ಫಸಲು ಕಂಡಿತು. ಈಗ ಅದೇ ಹೆಸರಿನಲ್ಲೇ ಅದೇ ನಿರ್ದೇಶಕ, ಅದೇ ಹೀರೋ ಜತೆಯಾಗಿರುವುದು ಭರವಸೆಗೆ ಕಾರಣವಾಗಿದೆ. ಶಕ್ತಿ ಮೀರಿ ‘ಗಾಳಿಪಟ 2’ ಹಾರಿಸುವ ಸಾಹಸ ಮಾಡುತ್ತಿದ್ದು, ಈ ಚಿತ್ರಕ್ಕೆ ಪ್ರೇಕ್ಷಕರು ಎದುರು ನೋಡಬಹುದು.
undefined
ನಿರ್ದೇಶಕ ಮತ್ತು ನಿರ್ಮಾಣ ಸಂಸ್ಥೆಯ ಕಾರಣಕ್ಕೆ ‘ಅವತಾರ ಪುರುಷ’ ಸುದ್ದಿಯಲ್ಲಿದೆ. ‘ಬಜಾರ್’ ಹಾಗೂ ‘ಚಮಕ್’ ಚಿತ್ರಗಳ ನಂತರ ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಚಿತ್ರವಿದು.
undefined
ಈ ವರ್ಷ ಪ್ರಜ್ವಲ್ ದೇವರಾಜ್ ನಟನೆಯ ಚಿತ್ರಗಳ ಪೈಕಿ ಬಿಡುಗಡೆಗೆ ಸಜ್ಜಾಗಿರುವ ‘ಜಂಟಲ್‌ಮನ್’ ಕತೆ ಮತ್ತು ಇಲ್ಲಿ ನಾಯಕನ ಪಾತ್ರದ ಕಾರಣಕ್ಕೆ ಗಮನ ಸೆಳೆಯುತ್ತಿದೆ.
undefined
ದುನಿಯಾ ವಿಜಯ್ ಅವರು ತಾವೇ ನಿರ್ದೇಶಿಸಿ, ನಟಿಸುತ್ತಿರುವ ಸಿನಿಮಾ. ಬೆಂಗಳೂರಿನ ರೌಡಿಸಂ ಕತೆಯನ್ನು ತೆರೆ ಮೇಲೆ ಹೇಳುವುದಕ್ಕೆ ಹೊರಟಿದ್ದು, ತಮ್ಮ ನಟನೆಯ ಚಿತ್ರಕ್ಕೆ ತಾವೇ ಆ್ಯಕ್ಷನ್ ಕಟ್ ಹೇಳಿಕೊಳ್ಳುತ್ತಿರುವುದು ‘ಸಲಗ’ನ ಹೈಲೈಟ್.
undefined
click me!