35,564 ಕೋಟಿ ರೂ. ಮೌಲ್ಯದ ಸಾಮ್ರಾಜ್ಯಕ್ಕೆ ಒಡತಿಯಾಗಿರುವ ಸುಧಾ ಮೂರ್ತಿ ವಿಮಾನ ನಿಲ್ದಾಣದಲ್ಲಿರುವ ಬುಕ್ ಅಂಗಡಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಖ್ಯಾತ ಗಾಯಕ ವಿಜಯ್ ಪ್ರಕಾಶ್ ಪತ್ನಿ ಮಹತಿ ಮತ್ತು ಪುತ್ರಿ ವಿಮಾನ ನಿಲ್ದಾಣದಲ್ಲಿ ಕ್ರಾಸ್ ಪಾತ್‌ನಲ್ಲಿ ಹೋಗುವಾಗ ಸುಧಾ ಮೂರ್ತಿ ಕಾಣಿಸಿಕೊಂಡು ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ.
'ಸುಧಾ ಮೂರ್ತಿ ಜೀ ಅವರನ್ನು ಭೇಟಿ ಮಾಡುವುದಕ್ಕೆ ಸದಾ ಖುಷಿಯಾಗುತ್ತದೆ. ಆದರೆ ಇಂದು ಏರ್ಪೋರ್ಟ್‌ನಲ್ಲಿ ಬಿಗ್ ಸರ್ಪ್ರೈಸ್ ಕಾದಿತ್ತು'
'ಮಹಿಳೆಯರಿಗೆ ಮಾತ್ರವಲ್ಲ ಪ್ರತಿಯೊಬ್ಬ ವ್ಯಕ್ತಿಗೂ ಇವರು ಸ್ಫೂರ್ತಿ. More Power to her. ಅವರ ಇತ್ತೀಚಿನ ಬುಕ್ ಓದಲು ಕಾಯುತ್ತಿರುವೆ ಎಂದು ಬರೆದುಕೊಂಡಿದ್ದಾರೆ.
ಯಾವ ವಿಮಾನ ನಿಲ್ದಾಣದಲ್ಲಿ ಸುಧಾ ಮೂರ್ತಿ ಅವರು ಕಾಣಿಸಿಕೊಂಡಿರುವುದು ಗೊತ್ತಿಲ್ಲ ಆದರೆ ಅವರನ್ನು ಮೀಟ್ ಮಾಡಿದ ನೀವೇ ಲಕ್ಕಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.