ಜೀವನ ನಡೆಯುತ್ತಿದೆ. ಅವತ್ತು ಅದೇ ಮಾತು ಹೇಳಿದೆ ಇವತ್ತು ಅದೇ ಮಾತು ಹೇಳುತ್ತಿರುವೆ ಸ್ಪಂದನಾ ಎಂದಿಗೂ ಮಗ ಮತ್ತು ನನ್ನ ಜೊತೆ ಇರುತ್ತಾರೆ ಎಂದು ವಿಜಯ್ ಹೇಳಿದ್ದಾರೆ
27
ಪ್ರತಿ ತಿಂಗಳು 6ನೇ ತಾರೀಖು ಬೇಸರ ಆಗುವುದು ನಿಜ. ಉಳಿದ ದಿನ ಹಿಂಸೆಗೆ ಪರಿಯಾಯವಾಗಿ ಸ್ನೇಹಿತರು ಕೆಲಸ ಅಂತ ಇರುತ್ತೀವಿ ಆದರೆ 6ರಂದು ಕಷ್ಟ ಆಗುತ್ತದೆ ಎಂದು ಖಾಸಗಿ ಚಾನೆಲ್‌ನಲ್ಲಿ ರಾಘು ಮಾತನಾಡಿದ್ದಾರೆ.
37
ನನ್ನ ಮನಸ್ಸಿಗೆ ಬೇಸರ ಆಗುತ್ತದೆ. ಆ ದಿನ ಆಕೆಯನ್ನು ವಿಶೇಷವಾಗಿ ನೆನಪಿಸಿಕೊಳ್ಳಬೇಕು ಅನಿಸುತ್ತದೆ. ನಾನು ಬಹಳ ಗೌರವವಾಗಿ ಕಾಣುವ ವ್ಯಕ್ತಿಗಳಲ್ಲಿ ಆಕೆ ಒಬ್ಬಳು.
47
ಸ್ಪಂದನಾ ಧರಿಸುತ್ತಿದ್ದ ಪ್ರತಿಯೊಂದು ವಸ್ತುಗಳನ್ನು ಕಾಪಾಡಿಕೊಂಡಿರುವೆ. ಸ್ಪಂದನಾಳನ್ನು ಕಾಪಾಡಿಕೊಂಡು ಬಂದಿದ್ದೆ.. ಆಕೆ ಬಹಳ ಸಿಂಪಲ್ ಆಗಿರುತ್ತಿದ್ದಳು.
57
ಜನರಿಗೆ ಯಾವ ಸಮಯದಲ್ಲಿ ಏನು ಇಷ್ಟ ಆಗುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೋಸ್ಕರ ಇರಬೇಕು ಅನ್ನೋ ವ್ಯಕ್ತಿತ್ವದವರು ಅಲ್ಲ ಆಕೆ.
67
ಸ್ಪಂದನಾ ಸೀರೆಗಳು ಒಡವೆಗಳು ಹಾಗೆ ಇದೆ...ಅವಳ ಜೊತೆನೇ ಇದೆ. ಅದು ಎಲ್ಲೂ ಹೋಗುವುದಿಲ್ಲ. ಅವುಗಳನ್ನು ನೋಡಿದಾಗ ಆಕೆಯನ್ನು ನೋಡಿದಂತೆ ಅನಿಸುತ್ತದೆ.
77
ಸ್ಪಂದನಾ ಜೊತೆಯಲ್ಲಿದ್ದಾಳೆ. ಮಗ ಮತ್ತು ನಾನು ಆಕೆಯನ್ನು ನೋಡುತ್ತಿರುತ್ತೀವಿ. ಅಡುಗೆ ಮಾಡಲು ಅಕ್ಕ ಬರುತ್ತಾರೆ, ತಮ್ಮನ ಹೆಂಡತಿ ಬರುತ್ತಾರೆ...ಜೀವನ ನಡೆಯುತ್ತಿದೆ ಎಂದಿದ್ದಾರೆ ರಾಘು.