ಅಂತೂ ಇಂತೂ ಕೊನೆಗೂ ಕಿಚ್ಚ ಸುದೀಪ್ ನಟನೆಯ ಹಾಗೂ ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಬಾಷ’ ಚಿತ್ರಕ್ಕೆ ಶೂಟಿಂಗ್ ಆರಂಭವಾಗಿದೆ. ಶೂಟಿಂಗ್ ಆರಂಭಿಸಿರುವುದಾಗಿ ಚಿತ್ರತಂಡ ಘೋಷಿಸಿದ್ದು, ಅದಕ್ಕ ಪೂರಕವಾಗಿ ಕಿಚ್ಚ ಸುದೀಪ್ ಅವರ ವಿಶಿಷ್ಟ ಲುಕ್ ಇರುವ ಪೋಸ್ಟರ್ ಬಿಡುಗಡೆ ಮಾಡಿದೆ.
26
ಈ ಕುರಿತು ಕಿಚ್ಚ ಸುದೀಪ್, ‘ಪ್ರಯಾಣ ಇವತ್ತಿನಿಂದ ಶುರುವಾಗಿದೆ. ಇದೊಂದು ಬಹಳ ದೊಡ್ಡ ಕನಸಾಗಿದೆ. ಸಂಭ್ರಮದಿಂದ ಚಿತ್ರೀಕರಣ ಆರಂಭಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
36
ಬೆಂಗಳೂರಿನಲ್ಲಿ ಸಿದ್ಧಗೊಳಿಸಲಾಗಿರುವ ಸೆಟ್‌ನಲ್ಲಿ ಚಿತ್ರೀಕರಣ ಆರಂಭವಾಗಿದೆ. ಮೊದಲ ಹಂತದಲ್ಲಿ 20 ದಿನಗಳ ಚಿತ್ರೀಕರಣ ನಡೆಯಲಿದೆ. ನಿರ್ದೇಶಕ ಅನೂಪ್ ಭಂಡಾರಿ, ನಮ್ಮ ನಿರೀಕ್ಷೆಯಂತೆ ಸಿನಿಮಾ ಸೆಟ್ಟೇರುತ್ತಿದೆ.
46
ಮೊದಲ ಹಂತದಲ್ಲಿ ಚಿತ್ರದ ಪ್ರಮುಖ ಆ್ಯಕ್ಷನ್ ದೃಶ್ಯಗಳನ್ನು ಶೂಟ್ ಮಾಡಲಿದ್ದೇವೆ. ಇದಕ್ಕಾಗಿ ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಿದ್ದೇವೆ. ನಂತರ ಸಣ್ಣ ಬ್ರೇಕ್ ತೆಗೆದುಕೊಂಡು ಮುಂದಿನ ಹಂತದ ಚಿತ್ರೀಕರಣಕ್ಕೆ ರೆಡಿಯಾಗುತ್ತೇವೆ ಎಂದು ಹೇಳಿದ್ದಾರೆ.
56
ವಿಕ್ರಾಂತ್ ರೋಣ ಸಿನಿಮಾದಲ್ಲಿ ಆ್ಯಕ್ಷನ್ ಸೀನ್‌ಗಳೇ ಇರಲಿಲ್ಲ. ಆದರೆ ಇದು ಔಟ್ ಆ್ಯಂಡ್ ಔಟ್ ಸುದೀಪ್ ಸಿನಿಮಾ. ಅವರಿಗಾಗಿಯೇ ಬರೆದ ಸ್ಕ್ರಿಪ್ಟ್. ಹೀಗಾಗಿ ಈ ಸಿನಿಮಾದಲ್ಲಿ ಸುದೀಪ್ ಫ್ಯಾನ್‌ಗಳಿಗೆ ಬೇಸರವಾಗುವ ಪ್ರಶ್ನೆಯೇ ಇಲ್ಲ.
66
ಈ ಸಿನಿಮಾದಲ್ಲಿ ನನ್ನ ಹಿಂದಿನ ಚಿತ್ರಗಳಂತೆ ತುಳುನಾಡು, ದೈವದಂಥಾ ಸನ್ನಿವೇಶಗಳಿರುವುದಿಲ್ಲ. ಆದರೆ ಭಾರತೀಯ ಹಿನ್ನೆಲೆಯಲ್ಲೇ ಸಿನಿಮಾ ಕಾಣಿಸಿಕೊಳ್ಳಲಿದೆ’ ಎಂದು ಅನೂಪ್ ಹೇಳಿದ್ದಾರೆ.