Published : Mar 09, 2025, 09:01 AM ISTUpdated : Mar 09, 2025, 10:08 AM IST
ಚಂದನವನದ ಈ ನಟರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೆರೆದವರು, ಇಂದಿಗೂ ಕೂಡ ಅವರ ಜನಪ್ರಿಯತೆ ಮಾಸಿಲ್ಲ. ಆದರೆ ಅವರ ಮಕ್ಕಳಿಗೆ ಮಾತ್ರ ಅವರಿಗೆ ಸಿಕ್ಕಷ್ಟು ಯಶಸ್ಸು ಸಿಗೋದ್ರಲ್ಲಿ ವಿಫಲರಾಗಿದ್ದಾರೆ. ಆ ನಟರು ಯಾರು ನೋಡೋಣ.
ಯಶಸ್ಸು ಅನ್ನೋದು ಎಲ್ಲರಿಗೂ ಒಂದೇ ರೀತಿ ಆಗಿರೋದಿಲ್ಲ. ಒಬ್ಬರಿಗೆ ಸಿಕ್ಕ ಯಶಸ್ಸು ಇನ್ನೊಬ್ಬರಿಗೂ ಸಿಗಬೇಕು ಎಂದು ಹೇಳುವ ಹಾಗೆಯೂ ಇಲ್ಲ. ಅದರಲ್ಲೂ ತಂದೆಗೂ ಸಿಕ್ಕ ಯಶಸ್ಸು ಮಗನಿಗೂ ಸಿಕ್ಕೇ ಸಿಗುತ್ತೆ ಎಂದು ಹೇಳಲಾಗುತ್ತಾ? ಖಂಡಿತವಾಗಿಯೂ ಇಲ್ಲ. ಅದೇ ರೀತಿ ನಮ್ಮ ಕನ್ನಡದ ಈ ಸ್ಟಾರ್ ನಟರಿಗೆ ಸಿಕ್ಕ ಯಶಸ್ಸು ಅವರ ಮಕ್ಕಳಿಗೆ ಸಿಕ್ಕೇ ಇಲ್ಲ. ಆ ನಟರು ಯಾರು ಅನ್ನೋದನ್ನು ನೋಡೋಣ.
28
ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್
ದೇವರಾಜ್ 90 ರ ದಶಕದ ಜನಪ್ರಿಯ ನಾಯಕರೂ ಹೌದು, ವಿಲನ್ ಆಗಿ ಅಬ್ಬರಿಸಿದವರೂ ಹೌದು. ಇವತ್ತಿಗೂ ದೇವರಾಜ್ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಅವರ ಪುತ್ರ ಪ್ರಜ್ವಲ್ ದೇವರಾಜ್, ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಸಹ ಅಂತಹ ಜನಪ್ರಿಯತೇ ಏನೂ ಸಿಕ್ಕಿಲ್ಲ.
38
ರವಿಚಂದ್ರನ್ -ಮನೋರಂಜನ್ -ವಿಕ್ರಮ್
ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳು ಅಂದ್ರೇನೆ ಜನರಿಗೆ ಏನೋ ಒಂದು ಕ್ರೇಜ್. ಇವತ್ತಿಗೂ ಅವರ ಸಿನಿಮಾಗಳನ್ನು ಜನ ಇಷ್ಟ ಪಟ್ಟು ನೋಡುತ್ತಾರೆ. ಆದರೆ ಅವರ ಮಕ್ಕಳಾದ ಮನೋರಂಜನ್ ಹಾಗೂ ತ್ರಿವಿಕ್ರನ್, ಕನ್ನಡದಲ್ಲಿ ಒಂದೆರಡು ಸಿನಿಮಾ ಮಾಡಿದ್ದಾರೆ ಅಷ್ಟೇ.
48
ಜಗ್ಗೇಶ್ -ಗುರುರಾಜ್
ನವರಸ ನಾಯಕ ಜಗ್ಗೇಶ್ ಯಾವ ರೀತಿಯ ಅಭಿನಯ ಮಾಡೋದಕ್ಕೂ ಸೈ. ಇವತ್ತಿಗೂ ಜಗ್ಗೇಶ್ ನಾಯಕರಾಗಿರುವ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ ಇದೇ ಸಾಧನೆಯನ್ನು ಅವರ ಮಕ್ಕಳು ಮಾಡುವಲ್ಲಿ ಸೋತಿದ್ದಾರೆ.
58
ಡಾ. ರಾಜ್ ಕುಮಾರ್ -ರಾಘವೇಂದ್ರ ರಾಜಕುಮಾರ್
ಡಾ ರಾಜಕುಮಾರ್ ದೈತ್ಯ ಪ್ರತಿಭೆ. ಅವರ ನಟನೆಗೆ ಮಾರು ಹೋಗದವರೇ ಇಲ್ಲ. ಇವರ ಮಕ್ಕಳಾದ ಪುನೀತ್ ರಾಜಕುಮಾರ್ ಹಾಗೂ ಶಿವರಾಜಕುಮಾರ್ ಇಬ್ಬರೂ ಸಹ ದೊಡ್ಡ ಮಟ್ಟದಲ್ಲೇ ಜನಪ್ರಿಯತೆ ಪಡೆದಿದ್ದಾರೆ. ಆದರೆ ರಾಘವೇಂದ್ರ ರಾಜಕುಮಾರ್ ಅವರಿಗೆ ಈ ಜನಪ್ರಿಯತೆ ಸಿಕ್ಕಿಲ್ಲ. ಅವರೊಬ್ಬ ಅದ್ಭುತವಾದ ನಟ ಹೌದು, ಆದರೆ ಯಶಸ್ಸು ಮಾತ್ರ ಸಿಕ್ಕಿಲ್ಲ.
68
ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್
ರೆಬೆಲ್ ಸ್ಟಾರ್ ಅಂಬರೀಶ್ ತಮ್ಮ ಜೀವನದುದ್ದಕ್ಕೂ ಒಂದಲ್ಲ ಒಂದು ಸಿನಿಮಾಗಳನ್ನು ಮಾಡಿಕೊಂಡೆ ಬಂದಿದ್ದರು. ಅವರ ನಟನೆಯನ್ನು ಮೆಚ್ಚದವರು ಇಲ್ಲ. ಆದರೆ ಇವರಿಗೆ ಸಿಕ್ಕ ಯಶಸ್ಸು ಮಗ ಅಭಿಷೇಕ್ ಗೆ ಸಿಕ್ಕಿಲ್ಲ. ಜನ ಇನ್ನೂ ಅವರನ್ನು ಮೆಚ್ಚಿಕೊಂಡಿಲ್ಲ.
78
ಟೈಗರ್ ಪ್ರಭಾಕರ್ -ವಿನೋದ್ ಪ್ರಭಾಕರ್
ಟೈಗರ್ ಪ್ರಭಾಕರ್ ನಟ ಭಯಂಕರ ಆಗಿದ್ರೂ, ವಿಲನ್ ಪಾತ್ರ ಮಾಡಿದ್ರೆ ನೋಡುಗರ ಎದೆ ನಡುಗುತ್ತಿತ್ತು, ನಾಯಕನ ಪಾತ್ರ ಮಾಡಿದ್ರೆ ವಾವ ಅನ್ನುವಂತಿತ್ತು ಇವರ ನಟನೆ. ಆದರೆ ವಿನೋದ್ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವಲ್ಲಿ ಸೋತಿದ್ದಾರೆ.
88
ಕಾಶಿನಾಥ್ -ಅಭಿಮನ್ಯು
ಅದು ನಿರ್ದೇಶಕರಾಗಿಯಾಗಿದ್ದರೂ ಸರಿ, ನಟನಾಗಿದ್ದರೂ ಸರಿ, ತಮ್ಮ ಹೊಸತನದ ಮೂಲಕ ಸಿನಿ ರಸಿಕರ ಮನ ಗೆದ್ದವರು ಕಾಶಿನಾಥ್. ಆದರೆ ಅವರ ಪುತ್ರ ಅದೇ ಸ್ಥಾನವನ್ನು ತುಂಬುವಲ್ಲಿ ಸೋತಿದ್ದಾರೆ.