ಟ್ರೋಲರ್ಸ್ ಕೈಗೆ ಕೆಂಡ ಇಟ್ಟ ರಮ್ಯಾರ ಚೆಂದದ ಫೋಟೋ ನೋಡಿ ಕೂಲ್ ಆಗಿ..!

Published : Mar 08, 2025, 03:25 PM ISTUpdated : Mar 08, 2025, 03:40 PM IST

ಸಾಫ್ಟ್ ಆಗಿರ್ತಾರೆ, ಅವರು ಅದಕ್ಕೆ ಏನೂ ಆಕ್ಷನ್ ತಗೊಳ್ಳೋದಿಲ್ಲ ಅನ್ನೋ ಕಾರಣಕ್ಕೆ.. ಆದರೆ, ಅದು ತಪ್ಪು, ಈ ಟ್ರೋಲ್ ಬಿಸಿನೆಸ್ ನಿಲ್ಲಬೇಕು, ಯಾರನ್ನೂ ಟ್ರೋಲ್ ಮಾಡ್ಬಾರ್ದು..

PREV
110
ಟ್ರೋಲರ್ಸ್ ಕೈಗೆ ಕೆಂಡ ಇಟ್ಟ ರಮ್ಯಾರ ಚೆಂದದ ಫೋಟೋ ನೋಡಿ ಕೂಲ್ ಆಗಿ..!

ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ಅವರು ಸೋಷಿಯಲ್ ಮೀಡಿಯಾ ಟ್ರೋಲ್ ಬಗ್ಗೆ ಮಾತನ್ನಾಡಿದ್ದಾರೆ. ಈ ಬಗ್ಗೆ ಮಾತನ್ನಾಡುತ್ತ ನಟಿ ರಮ್ಯಾ 'ನಾನು ಟ್ರೋಲ್‌ ಮಾಡೋದನ್ನು ಎಲ್ಲರೂ ನಿಲ್ಲಿಸಬೇಕು ಅಂತ ಹೇಳ್ತೀನಿ..' ಎಂದಿದ್ದಾರೆ. 
 

210

ಇದಕ್ಕೆ ಅತ್ಯುತ್ತಮ ಉದಾಹರಣೆಗೆ ಕೊಟ್ಟಿರುವನಟಿ ರಮ್ಯಾ, 'ನಟಿ ರಶ್ಮಿಕಾ ಬಗ್ಗೆ ಟ್ರೋಲ್ ಕೆಟ್ಟದಾಗಿರುತ್ತೆ.. ಅದು ಸ್ಟಾಪ್ ಆಗಬೇಕು. ಅದರಲ್ಲೂ ಮುಖ್ಯವಾಗಿ ನಟಿಯರ ಬಗ್ಗೆ ಟ್ರೋಲ್ ಮಾಡೋದೇ ಹೆಚ್ಚು. 
 

310

ಕಾರಣ, ಅವರು ಸಾಫ್ಟ್ ಆಗಿರ್ತಾರೆ, ಅವರು ಅದಕ್ಕೆ ಏನೂ ಆಕ್ಷನ್ ತಗೊಳ್ಳೋದಿಲ್ಲ ಅನ್ನೋ ಕಾರಣಕ್ಕೆ.. ಆದರೆ, ಅದು ತಪ್ಪು, ಈ ಟ್ರೋಲ್ ಬಿಸಿನೆಸ್ ನಿಲ್ಲಬೇಕು, ಯಾರನ್ನೂ ಟ್ರೋಲ್ ಮಾಡ್ಬಾರ್ದು..' ಎಂದಿದ್ದಾರೆ ನಟಿ ರಮ್ಯಾ. 
 

410

ಯಾರೂ ಯಾರನ್ನೂ ಟ್ರೋಲ್ ಮಾಡಬಾರದು.. ಎಲ್ಲರಿಗೂ ಅದನ್ನು ಸಹಿಸಿಕೊಳ್ಳೋ ಶಕ್ತಿ ಇರೋದಿಲ್ಲ.. ಅವ್ರ ಮೆಂಟಲ್ ಹೆಲ್ತ್‌ ಬಗ್ಗೆ ಇಮಾಜಿನ್ ಮಾಡ್ಕೊಳ್ಳಿ.. ಅವ್ರು ಎಷ್ಟು ಅಂತ ಸಹಿಸಿಕೊಳ್ತಾರೆ ಹೇಳಿ? 
 

510

ನೀವೇನೋ ಎಲ್ಲೋ ಕೂತ್ಕೊಂಡು ಇನ್‌ಸ್ಟಾಗ್ರಾಂನಲ್ಲಿ ಅಥವಾ ಇನ್ಯಾವುದೀ ಫ್ಲಾಟ್‌ಫಾರಂನಲ್ಲಿ ಯಾರೋ ಒಬ್ರನ್ನ ಟ್ರೋಲ್ ಮಾಡ್ತೀರಾ.. ಆದ್ರೆ, ಆ ಕಡೆ ಅದನ್ನ ರಿಸೀವ್ ಮಾಡೋರ ಪರಿಸ್ಥಿತಿ ಹೇಗಿರಬಹುದು ಅಂತ ಊಹಿಸಿಕೊಳ್ಳಿ.. 
 

610

ಅದಕ್ಕೆ ಯಾರೋ ಒಬ್ಬರು 'ಅಲ್ಲ ಮೆಡಂ, ರಶ್ಮಿಕಾ ಅವ್ರು ಅವ್ರ ಮನೆ ಹೈದ್ರಾಬಾದ್ ಅಂದ್ರಲ್ಲ..' ಎನ್ನುತ್ತಿದ್ದಂತೆ ನಟಿ ರಮ್ಯಾ ಅವರು 'ಅವ್ರ ಮನೆ ಅಲ್ಲಿ ಇರಬಹುದು..' ಎಂದು ಹೇಳುವ ಮೂಲಕ ಸತ್ಯದ ಇನ್ನೊಂದು ಆಯಾಮವನ್ನು ಓಪನ್ ಮಾಡಿದ್ದಾರೆ. 

710

ನಟಿ ರಮ್ಯಾ ಉದ್ದೇಶ ತುಂಬಾ ಸ್ಪಷ್ಟವಾಗಿದೆ- ಯಾರೂ ಯಾರನ್ನೂ ಟ್ರೋಲ್ ಮಾಡಬಾರದು, ಎಲ್ಲರಿಗೂ ಅದನ್ನು ಸಹಿಸಿಕೊಳ್ಳೋ ಶಕ್ತಿ ಇರಲ್ಲ ಅನ್ನೋದು. ರಮ್ಯಾರ ಈ ನಿಲುವನ್ನು ಎಲ್ಲರೂ ಪಕ್ಷಬೇಧ ಮರೆತು ಸಪೋರ್ಟ್ ಮಾಡಲೇಬೇಕು ಅಂತಿದಾರೆ ಹಲವರು. 
 

810

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಶಾಸಕ ಗಣಿಗ ರವಿ ಅವರು ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದಿಂದ ಬೆಳೆದವರು. ಅವರನ್ನು ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನ ಮಾಡಿದ್ವಿ. 
 

910

ಆದರೆ ನಾನು ಹೈದರಾಬಾದ್‌ನಲ್ಲಿ ಇರೋದು, ನನಗೆ ಟೈಂ ಇಲ್ಲ, ಬರಲ್ಲ ಎಂದು ಹೇಳಿದ್ದರು. ಇವರಿಗೆ ಬುದ್ದಿ ಕಲಿಸಬೇಕಲ್ವಾ? ಎಂದು ಕೆಂಡಕಾರಿದರು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. 
 

1010

ಈ ಬಗ್ಗೆ ಮಾತನಾಡಿರೋ ರಮ್ಯಾ ರಶ್ಮಿಕಾ ಬಗ್ಗೆ ಮಾತನಾಡೋದನ್ನ ನಿಲ್ಲಿಸಿ, ಅವರನ್ನು ಟ್ರೋಲ್ ಮಾಡಬೇಡಿ. ಇದು ನಟಿಯರಲ್ಲಿ ಮಾನಸಿಕ ಖಿನ್ನತೆ ಉಂಟು ಮಾಡಿಸುತ್ತೆ, ಹಾಗಾದ್ರೆ ಅದಕ್ಕೆ ಯಾರು ಹೊಣೆ..?' ಎಂದಿದ್ದಾರೆ. 
 

Read more Photos on
click me!

Recommended Stories