ಕೆಜಿಎಫ್‌ 2ನಲ್ಲಿ Sanjay dutt ಜೊತೆ ಸೀನ್‌ ಇಲ್ಲ: Raveena tandon

Kannadaprabha News   | Asianet News
Published : Jan 20, 2022, 09:13 AM ISTUpdated : Jan 20, 2022, 10:26 AM IST

ರಮಿಕಾ ಸೇನ್‌ ಪಾತ್ರ ಇಂದಿರಾ ಗಾಂಧಿ ಪಾತ್ರದ ಸ್ಫೂರ್ತಿ ಅಲ್ಲ - ರವೀನಾ ಟಂಡನ್‌

PREV
16
ಕೆಜಿಎಫ್‌ 2ನಲ್ಲಿ Sanjay dutt ಜೊತೆ ಸೀನ್‌ ಇಲ್ಲ: Raveena tandon

‘ನಾನೂ ಸಂಜಯ್‌ ಹಿಂದಿನಂತೇ ಕೆಜಿಎಫ್‌ 2 ಸೆಟ್‌ನಲ್ಲಿ ಧೂಳೆಬ್ಬಿಸುವ ಕನಸು ಕಾಣುತ್ತಿದ್ದೆವು. ಆದರೆ ನಾವಿಬ್ಬರೂ ಕೆಜಿಎಫ್‌ 2 ಚಿತ್ರದಲ್ಲಿ ನಟಿಸಿದ್ದರೂ ಜೊತೆಯಾಗಿ ಸ್ಕ್ರೀನ್‌ ಹಂಚಿಕೊಳ್ಳಲಾಗದ್ದಕ್ಕೆ ಬೇಸರವಿದೆ’ ಎಂದು ಬಾಲಿವುಡ್‌ ನಟಿ ರವೀನಾ ಟಂಡನ್‌ ಹೇಳಿದ್ದಾರೆ.

26

‘ನಾನು ಹಾಗೂ ಸಂಜಯ್‌ ಹೋಗಿ ಜೊತೆಯಾಗಿ ನಟಿಸಲು ಅವಕಾಶ ನೀಡುವಂತೆ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರಿಗೆ ವಿನಂತಿ ಮಾಡಿಕೊಂಡಿದ್ದೆವು. ಆದರೆ ಕೆಜಿಎಫ್‌ 2 ಕಥೆಯಲ್ಲಿ ಈ ಸಾಧ್ಯತೆ ಇಲ್ಲದ ಕಾರಣ ಅವಕಾಶ ಸಿಗಲಿಲ್ಲ. ಜೊತೆಗೆ ನಮ್ಮಿಬ್ಬರ ಡೇಟ್‌ಗಳೂ ಹೊಂದಾಣಿಕೆ ಆಗುತ್ತಿರಲಿಲ್ಲ. 

36

ಹಿಂದೆ ಸಾಕಷ್ಟುಚಿತ್ರಗಳಲ್ಲಿ ಜೊತೆಗೆ ನಟಿಸಿದ್ದ ನಾವು ಈ ಚಿತ್ರದಲ್ಲಿ ಮಾತ್ರ ಒಟ್ಟಿಗೇ ಸ್ಕ್ರೀನ್‌ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಸಂದರ್ಶನವೊಂದರಲ್ಲಿ ರವೀನಾ ಬೇಸರ ವ್ಯಕ್ತಪಡಿಸಿದ್ದಾರೆ.

46

‘ಈ ಚಿತ್ರದಲ್ಲಿ ರಮಿಕಾ ಸೇನ್‌ ಎಂಬ ಪ್ರಧಾನ ಮಂತ್ರಿಯ ಪಾತ್ರ ಮಾಡುತ್ತಿದ್ದೇನೆ. ಇದು ಇಂದಿರಾ ಗಾಂಧಿ ಅವರ ಪಾತ್ರ ಎಂಬ ವದಂತಿ ಹಬ್ಬಿತ್ತು. 

56

 ಈ ಗಾಳಿಸುದ್ದಿ ನನ್ನ ಕಿವಿಗೂ ಬಿದ್ದಿದೆ. ಆದರೆ ಅದು ಸತ್ಯಕ್ಕೆ ದೂರವಾದದ್ದು. ನನ್ನ ನೋಟ, ಪಾತ್ರ ಅಥವಾ ಕಥೆಗೂ ಇಂದಿರಾ ಗಾಂಧಿ ಅವರಿಗೂ ಸಂಬಂಧ ಇಲ್ಲ. ಇದು ಅವರಿಂದ ಸ್ಫೂರ್ತಿ ಪಡೆದು ಮಾಡಿದ ಪಾತ್ರ ಅಲ್ಲ. ಬದಲಿಗೆ 80 ರ ದಶಕದ ಸಿನಿಮಾ ಕತೆಗೆ ಪೂರಕವಾಗಿ ನನ್ನ ಪಾತ್ರವಿದೆ’ ಎಂದು ಅವರು ಈ ವೇಳೆ ಸ್ಪಷ್ಟಪಡಿಸಿದ್ದಾರೆ.

66

ಯಶ್‌ ನಟನೆಯ ಕೆಜಿಎಫ್‌ 2 ಚಿತ್ರವನ್ನು ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದು ವಿಜಯ್‌ ಕಿರಗಂದೂರು ನಿರ್ಮಿಸಿದ್ದಾರೆ. ಈ ಬಿಗ್‌ ಬಜೆಟ್‌ ಚಿತ್ರ ಏಪ್ರಿಲ್‌ 14ರಂದು ತೆರೆಗೆ ಬರಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories